ಕವಿರಾಜ್ ಸಿನೆಮಾ ಜನವರಿಗೆ ತೆರೆಗೆ

ಗೀತರಚನಕಾರನಿಂದ ನಿರ್ದೇಶನಕ್ಕೆ ಭಡ್ತಿ ಪಡೆದಿರುವ ಕವಿರಾಜ್ ನಿರ್ದೇಶನದ 'ಮದುವೆಯ ಮಮತೆಯ ಕರೆಯೋಲೆ' ಸಿನೆಮಾದ ಚಿತ್ರೀಕರಣ ಬೆಂಗಳೂರಿನಲ್ಲಿ
'ಮದುವೆಯ ಮಮತೆಯ ಕರೆಯೋಲೆ' ಸಿನೆಮಾದ ಚಿತ್ರೀಕರಣ ವೇಳೆಯಲ್ಲಿ ಕವಿರಾಜ್
'ಮದುವೆಯ ಮಮತೆಯ ಕರೆಯೋಲೆ' ಸಿನೆಮಾದ ಚಿತ್ರೀಕರಣ ವೇಳೆಯಲ್ಲಿ ಕವಿರಾಜ್
Updated on

ಬೆಂಗಳೂರು: ಗೀತರಚನಕಾರನಿಂದ ನಿರ್ದೇಶನಕ್ಕೆ ಭಡ್ತಿ ಪಡೆದಿರುವ ಕವಿರಾಜ್ ನಿರ್ದೇಶನದ 'ಮದುವೆಯ ಮಮತೆಯ ಕರೆಯೋಲೆ' ಸಿನೆಮಾದ ಚಿತ್ರೀಕರಣ ಬೆಂಗಳೂರಿನಲ್ಲಿ ನೆನ್ನೆ ಸಂಪೂರ್ಣಗೊಂಡಿದೆ. ಸಿನೆಮಾದ ನಿರ್ಮಾಪಕ ದಿನಕರ್, ತೂಗುದೀಪ್ ಪ್ರೊಡಕ್ಷನ್ಸ್ ಅಡಿ ನಿರ್ಮಿಸಿದ್ದಾರೆ. ಹೊಸ ಜೋಡಿ ಅಮೂಲ್ಯ ಮತ್ತು ಸೂರಜ್ ಗೌಡ ಇವರನ್ನು ಸಿನೆಮಾದಲ್ಲಿ ಪರಿಚಯಿಸಲಾಗಿದೆ.

ಕವಿರಾಜ್ ಬೆನ್ನಿಗೇ ನಿಂತು ಸಲಹೆ ಮತ್ತು ಬೆಂಬಲ ನೀಡಿದ ನಿರ್ಮಾಪಕ ದಿನಕರ್ ಇದು ಚೊಚ್ಚಲ ನಿರ್ದೇಶಕನ ಕೆಲಸ ಎಂದೆನೆಸುವುದೇ ಇಲ್ಲ ಎನ್ನುತ್ತಾರೆ. "ಅವರು ತಮ್ಮೆಲ್ಲ ಶ್ರಮವಹಿಸಿ ಸಿನೆಮಾ ಮಾಡಿದ್ದಾರೆ. ನಾನು ನಿರ್ದೇಶಕನಾಗಿ ಕೆಲಸ ಮಾಡುತ್ತಿದ್ದಾಗ ಇನ್ನು ಕೆಲವು ಹೆಚ್ಚಿನ ಶಾಟ್ ಗಳನ್ನು ಚಿತ್ರೀಕರಿಸಬೇಕಿತ್ತು ಎಂದು ಯಾವಾಗಲು ಅನ್ನಿಸುತ್ತಿತ್ತು. ಆದರೆ ಕವಿರಾಜ್ ಅವರು ಸರಿಯಾದ ಯೋಜನೆ ಮಾಡಿಕೊಳ್ಳುತ್ತಾರೆ" ಎನ್ನುತ್ತಾರೆ.

ಚಿತ್ರೀಕರಣದ ನಂತರದ ಕೆಲಸಗಳಲ್ಲಿ ನಿರತರಾಗಿರುವ ಚಿತ್ರತಂಡ ಮೊದಲ ಅವತರಿಣಿಕೆ ಹೊರತಂದು ಸೆನ್ಸಾರ್ ಮಾಡಿಸುವ ಭರದಲ್ಲಿದೆ. "೨೦೧೬ಕ್ಕೆ ಹೊಸ ವರ್ಷದ ಕೊಡುಗೆಯಾಗಿ ನೀಡಲು ಮುನ್ನೋಡುತ್ತಿದ್ದೇವೆ" ಎನ್ನುತ್ತಾರೆ ದಿನಕರ್.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com