
ಬೆಂಗಳೂರು: ಜಾಗ್ವಾರ್ ಎಂಬ ಐಶಾರಾಮಿ ಕಾರು ಕೊಂಡು ಅದಕ್ಕೆ ರಸ್ತೆ ತೆರಿಗೆ ಕಟ್ಟದೆ, ನೊಂದಣಿ ಮಾಡಿಕೊಳ್ಳದೆ ಓಡಾಡಿಸುತ್ತಿದ್ದಕ್ಕೆ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರು ದುಬಾರಿ ದಂಡ ಕಟ್ಟಿದ್ದಾರೆ.
ನೆನ್ನೆ ಗೊರಗುಂಟೆಪಾಳ್ಯದ ಬಳಿ ಜಾಗ್ವಾರ್ ಕಾರೊಂದನ್ನು ನಿಲ್ಲಿಸಲಾಗಿದೆ. ಅದರ ತಾತ್ಕಾಲಿಕ ನೊಂದಣಿ ಸಂಖ್ಯೆಯ ಅವಧಿ ಮುಗಿದಿದೆ. ಆದುದರಿಂದ ಕಾರಿನ ಸಾಮಾನ್ಯ ನೊಂದಣಿಗೆ ೬೫೦೦೦ ರೂ ದಂಡದೊಂದಿಗೆ ೧೦.೨೫ ಲಕ್ಷ ರೂ ತೆತ್ತಬೇಕಾಗಿ ಬಂದಿದೆ ಅರ್ಜುನ್ ಜನ್ಯ ಅವರಿಗೆ.
"ನಾನು ಜಾಗ್ವಾರ್ ಕಾರನ್ನು ಮೂರು ತಿಂಗಳ ಹಿಂದೆ ೫೫ ಲಕ್ಷಕ್ಕೆ ಕೊಂಡಿದ್ದೆ. ರಸ್ತೆ ತೆರಿಗೆ ಕಟ್ಟಲು ಅವರು ಒಂದು ತಿಂಗಳ ಸಮಯ ನೀಡುತ್ತಾರೆ.
"ನನಗೆ ನೊಂದಣಿಗೆ ಫ್ಯಾನ್ಸಿ ಸಂಖ್ಯೆ ಬೇಕಾಗಿತ್ತು. ಅದು ೫. ಆದರೆ ವಿವಿಧ ಆರ್ ಟಿ ಒ ಅಧಿಕಾರಿಗಳು ವಿವಿಧ ಬೆಲೆ ನಿಗದಿಪಡಿಸಿದ್ದರು. ಆದುದರಿಂದ ಗೊಂದಲವಾಗಿತ್ತು" ಎಂದು ಜನ್ಯ ಹೇಳಿದ್ದಾರೆ.
ದುಬಾರಿ ಕಾರು ಕೊಳ್ಳುವವರು ತಾತ್ಕಾಲಿಕ ನೊಂದಣಿ ಸಂಖ್ಯೆ ಉಳಿಸಿಕೊಂಡು ರಸ್ತೆ ತೆರಿಗೆಯನ್ನು ಕಟ್ಟದೆ ಇರುವುದು ಸಾಮಾನ್ಯವಾಗಿಬಿಟ್ಟಿದೆ ಎಂದು ತಿಳಿಸುವ ರಸ್ತೆ ಸಾರಿಗೆ ಅಧಿಕಾರಿ ರಾಮೇ ಗೌಡ, ಈ ನಿಟ್ಟಿನಲ್ಲಿ ವಿಶೇಶ ತಂಡವನ್ನು ರಚಿಸಿ ೧.೯೭ ಲಕ್ಷ ವಾಹನಗಳ ಮೇಲೆ ಪ್ರಕರಣ ದಾಖಲಿಸಿದ್ದೇವೆ. ಅವುಗಳಲ್ಲಿ ೩% ಐಶಾರಾಮಿ ಕಾರುಗಳು ಎಂದಿದ್ದಾರೆ.
Advertisement