
ಕೊಚ್ಚಿ: ಭಾರತೀಯ ಚಿತ್ರರಂಗದಲ್ಲಿ ಹಲವು ದಾಖಲೆ ನಿರ್ಮಿಸಿದ ಎಸ್ ಎಸ್ ರಾಜಮೌಳಿ ನಿರ್ದೇಶನದ 'ಬಾಹುಬಲಿ' ಚಿತ್ರದ ಯುರೋಪ್ ವಿತರಣಾ ಹಕ್ಕುಗಳಿಗೆ ಅತಿ ಹೆಚ್ಚು ಬೇಡಿಕೆ ಬಂದಿದೆಯಂತೆ. ವಿತರಣಾ ಹಕ್ಕುಗಳನ್ನು ಖರೀದಿಸಲು ಅಂತರಾಷ್ಟ್ರೀಯ ಹಂಚಿಕೆದಾರಾರು ಪೈಪೋಟಿಗೆ ಬಿದ್ದಿದ್ದಾರಂತೆ.
ಲ್ಯಾಟಿನ್ ಅಮೇರಿಕಾ, ಚೈನಾ ಮತ್ತು ಭಾರತದ ಹೊರಗಿನ ಇನ್ನಿತರ ಪ್ರದೇಶಗಳಲ್ಲಿ 'ಬಾಹುಬಲಿ'ಯ ಅಂತರಾಷ್ಟ್ರೀಯ ಹಕ್ಕುಗಳನ್ನು ಈಗಾಗಲೇ ಮಾರಾಟ ಮಾಡಲಾಗಿದೆ.
"ಯೂರೋಪಿನಲ್ಲಿ ಬಾಹುಬಲಿಗೆ ಅತಿ ಹೆಚ್ಚು ಬೇಡಿಕೆಯಿದೆ. ಭಾರತೀಯ ಚಿತ್ರಕ್ಕೆ ಹಿಂದೆಂದೂ ಇಷ್ಟು ಬೇಡಿಕೆಯಿರಲಿಲ್ಲ. ಸಿನೆಮಾ ಹಕ್ಕುಗಳಿಗೆ ಹಲವು ವಿತರಕರು ಪೈಪೋಟಿಗೆ ಬಿದ್ದಿದ್ದಾರೆ. ಭಾರತೀಯ ಚಿತ್ರಗಳಿಗೆ ಇದು ಒಳ್ಳೆಯ ಬೆಳವಣಿಗೆ" ಎಂದು ಯೂರೋಪಿನ ವಿತರಕರೋಬ್ಬರಾದ ಪಿಯೇರ್ರೆ ಅಸ್ಸುಲಿನ್ ತಿಳಿಸಿದ್ದಾರೆ.
Advertisement