'ಬಾಕ್ಸರ್' ಬಗ್ಗೆ ಕೃತಿಕಾಗೆ ಉತ್ಸಾಹ, ನಿರೀಕ್ಷೆ

೧೯ ವರ್ಷದ ಮೌಂಟ್ ಕಾರ್ಮಲ್ ಕಾಲೇಜಿನ ಮೊದಲ ವರ್ಷದ ಪತ್ರಿಕೋದ್ಯಮ ವಿದ್ಯಾರ್ಥಿನಿ ಕೃತಿಕಾ ತನ್ನ ನಟನೆಯ ವೃತಿಯನ್ನು ಜೊತೆ ಜೊತೆಗೇ ಅರಸುತ್ತಿದ್ದಾರೆ.
ಬಾಕ್ಸರ್ ಸಿನೆಮಾದ ಸ್ಟಿಲ್
ಬಾಕ್ಸರ್ ಸಿನೆಮಾದ ಸ್ಟಿಲ್

ಬೆಂಗಳೂರು: ೧೯ ವರ್ಷದ ಮೌಂಟ್ ಕಾರ್ಮಲ್ ಕಾಲೇಜಿನ ಮೊದಲ ವರ್ಷದ ಪತ್ರಿಕೋದ್ಯಮ ವಿದ್ಯಾರ್ಥಿನಿ ಕೃತಿಕಾ ಜಯಕುಮಾರ್ ತನ್ನ ನಟನೆಯ ವೃತಿಯನ್ನು ಜೊತೆ ಜೊತೆಗೇ ಅರಸುತ್ತಿದ್ದಾರೆ. ತೆಲುಗು 'ದೃಶ್ಯಂ' ನಲ್ಲಿ ಮೊದಲಬಾರಿಗೆ ನಟಿಸಿದ್ದ ನಟಿ ಈಗ ಪ್ರೀತಂ ಗುಬ್ಬಿ ಅವರ 'ಬಾಕ್ಸರ್'ನಲ್ಲಿ ಚೊಚ್ಚಲ ಬಾರಿಗೆ ಕನ್ನಡದಲ್ಲಿ ನಟಿಸುತ್ತಿದ್ದಾರೆ.

"ಬಾಕ್ಸರ್ ನನಗೆ ವಿಶೇಶ ಸಿನೆಮಾ, ಏಕೆಂದರೆ ಇದರಲ್ಲಿ ಮಾಮೂಲಿ ಪಾತ್ರಕ್ಕಿಂತ ವಿಭಿನ್ನ ಪಾತ್ರ ನನ್ನದು. ನನ್ನ ನಟನಾ ಕೌಶಲ್ಯವನ್ನು ತೋರಿಸುವ ಅವಕಾಶ ಸಿಕ್ಕಿದೆ. ಇಡಿ ಸಿನೆಮಾದ ಕೇಂದ್ರ ಧನಂಜಯ್ ಮತ್ತು ನಾನು. ನನಗೆ ಸ್ಕ್ರಿಪ್ಟ್ ಬಹಳ ಇಷ್ಟ ಆಯಿತು ನಟಿಸಲು ನನಗೆ ಇದು ಒಳ್ಳೆಯ ಚಲನಚಿತ್ರ" ಎನ್ನುತ್ತಾರೆ ಕೃತಿಕಾ.

ದೃಶ್ಯಂ ಹುಡುಗಿ ಎಂದೇ ಹೆಸರಾಗಿರುವ ಕೃತಿಕಾ ಈ ಸಿನೆಮಾದಲ್ಲಿ ಅಂಧ ಹುಡುಗಿಯ ಪಾತ್ರ ಮಾಡಲಿದ್ದಾರಂತೆ. "ವೃತ್ತಿಜೀವನದ ಮೊದಮೊದಲಲ್ಲೇ ಇಂತಹ ಪಾತ್ರಗಳಿ ಸಿಗುವುದು ಕಷ್ಟ. ಈ ಪಾತ್ರ ನಿಭಾಯಿಸುವುದು ಸವಾಲಾಗಿತ್ತು" ಎನ್ನುತ್ತಾರೆ ಕೃತಿಕಾ.

ಈ ಪಾತ್ರಕ್ಕೆ ಹುರಿಗೊಳ್ಳಲು ಅಂಧ ಶಾಲೆಗೆ ಕೂಡ ಭೇಟಿ ಕೊಟ್ಟಿದ್ದರಂತೆ ಕೃತಿಕಾ "ನಾನು ಅಲ್ಲಿ ೨ ದಿನ ಇದ್ದೆ. ಅಲ್ಲಿ ಕಡ್ಡಿ ಹಿಡಿದು, ಜಾಡು ಹಿಡಿಯುವುದನ್ನು ಹೇಳಿಕೊಟ್ಟರು. ಇನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳಲು ನಾನು ಕಣ್ಣು ಕಟ್ಟಿಕೊಂಡು ನಮ್ಮ ಮನೆ ಸುತ್ತಮುತ್ತ ಕಡ್ಡಿ ಹಿಡಿದು ಓಡಾಡಿದ್ದೆ" ಎನ್ನುತ್ತಾರೆ.

ಧನಂಜಯ ಮುಖ್ಯಭೂಮಿಕೆಯಲ್ಲಿರುವ ಸಿನೆಮಾಗೆ ವಿ ಹರಿಕೃಷ್ಣ ಸಂಗೀತ ನಿರ್ದೇಶಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com