ಸ್ಯಾಂಡಲ್ ವುಡ್ ನಟ ರಮೇಶ್ ಅರವಿಂದ್ ನಿರ್ದೇಶದ ಉತ್ತಮ ವಿಲನ್ ಚಿತ್ರಕ್ಕೆ ಅಂತಾರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ.
ಲಾಸ್ ಏಂಜಲೀಸ್ ನಲ್ಲಿ ನಡೆದ ಅಂತಾರಾಷ್ಟ್ರೀಯ ಫಿಲಂ ಫೆಸ್ಟಿವಲ್ ನ ಡಿಫ್ರೆಂಟ್ ಕೆಟಗರಿ ಚಿತ್ರ ವಿಭಾಗದಲ್ಲಿ ಬಹುಭಾಷಾ ಕಲಾವಿದ ಕಮಲ್ ಹಾಸನ್ ಅಭಿನಯದ ಉತ್ತಮ ವಿಲನ್ ಚಿತ್ರಕ್ಕೆ ಹಲವು ಪ್ರಶಸ್ತಿ ಸಿಕ್ಕಿದೆ.
ಉತ್ತಮ ನಟ- ಕಮಲ್ ಹಾಸನ್, ಉತ್ತಮ ಚಿತ್ರ, ಉತ್ತಮ ಸಂಗೀತ ನಿರ್ದೇಶನ ಮತ್ತು ಗೀತೆ ರಚನೆ- ಗಿಬ್ರಾನ್, ಉತ್ತಮ ಸೌಂಡ್ ಡಿಸೈನ್ -ಕುನಾಲ್ ರಾಜನ್ ವಿಭಾಗದಲ್ಲಿ ಉತ್ತಮ ವಿಲನ್ ಚಿತ್ರ ಪ್ರಶಸ್ತಿಗೆ ಭಾಜನವಾಗಿದೆ.
ರಷ್ಯನ್ ಫಿಲಂ ಫೆಸ್ಟಿವಲ್ ನಲ್ಲೂ ಈ ಚಿತ್ರ ಉತ್ತಮ ಸಾಧನೆ ಮಾಡಿತ್ತು.