ಹುಚ್ಚ ವೆಂಕಟ್ ಮದುವೆ ರಹಸ್ಯ ಬಯಲು

ಬಿಗ್ ಬಾಸ್ ಮನೆಯಿಂದ ಕಿಕ್ ಔಟಾಗಿ ಮಾಧ್ಯಮಗಳಲ್ಲಿ ದಿನನಿತ್ಯ ಕಾಣಿಸಿಕೊಳ್ಳುವ ಮೂಲಕ ಸ್ಯಾಂಡಲ್ ವುಡ್ ನ ವಾರದ ಸೆನ್ಸೆಷನಲ್ ಸ್ಟಾರ್ ಆಗಿರುವ ಹುಚ್ಚಾ ವೆಂಕಟ್...
ಹುಚ್ಚ ವೆಂಕಟ್ ಮದುವೆ ಚಿತ್ರ
ಹುಚ್ಚ ವೆಂಕಟ್ ಮದುವೆ ಚಿತ್ರ
Updated on
ಬಿಗ್ ಬಾಸ್ ಮನೆಯಿಂದ ಕಿಕ್ ಔಟ್ ಆಗಿ ಮಾಧ್ಯಮಗಳಲ್ಲಿ ದಿನನಿತ್ಯ ಸುದ್ದಿಯಲ್ಲಿರುವ ಸ್ಯಾಂಡಲ್ ವುಡ್ ನ ವಾರದ ಸೆನ್ಸೆಷನಲ್ ಸ್ಟಾರ್ ಹುಚ್ಚಾ ವೆಂಕಟ್ ಅವರ ಮದುವೆ ರಹಸ್ಯ ಬಯಲಾಗಿದೆ.
ಜನವರಿ 3, 2007 ರಂದು ಅವರು ಸಂಪಂಗಿರಾಮನಗರದ ಬನಶಂಕರಿ ದೇವಾಲಯದಲ್ಲಿ ರೇಷ್ಮಾ ಎಂಬುವರನ್ನು ವಿವಾಹವಾಗಿದ್ದು, ದೊಮ್ಮಲೂರಿನ ನೋಂದಣಿ ಕಚೇರಿಯಲ್ಲಿ ವಿವಾಹ ನೋಂದಣಿ ಮಾಡಿಕೊಂಡಿರುವುದನ್ನು ಈಟಿವಿ ನ್ಯೂಸ್‌ ಕನ್ನಡ ಬಹಿರಂಗಪಡಿಸಿದೆ.
ವಿವಾಹದ ಬಳಿಕ ಯಲಹಂಕ ಬಳಿ ಇದ್ದ ಓಲ್ಡ್‌ಪೋಸ್ಟ್‌ ಆಫೀಸ್‌ನ ಹಿಂಭಾಗದಲ್ಲಿದ್ದ ಮನೆಯಲ್ಲಿ ಅವರು ವಾಸವಾಗಿದ್ದು, ಅದಾದ ಬಳಿಕ ಬೇರೊಂದು ಏರಿಯಾಗೆ ಹೋಗಿ ವಾಸವಾಗಿದ್ದರು ಎನ್ನಲಾಗಿದೆ.
ನಿರ್ದೇಶಕ ರಾಧಾಕೃಷ್ಣ ಅವರ ಚಿತ್ರವೊಂದರಲ್ಲಿ ಕ್ಲಾಪ್‌ಬಾಯ್‌ ಆಗಿ ಎಂಟ್ರಿಯಾಗುವ ಮೂಲಕ ಹುಚ್ಚ ವೆಂಕಟ್‌ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ಅವರು "ಸ್ವತಂತ್ರಪಾಳ್ಯ' ಚಿತ್ರದ ಚಿತ್ರೀಕರಣ ಸಂದರ್ಭದಲ್ಲೇ ಹುಡುಗಿಯೊಬ್ಬಳನ್ನು ಪ್ರೀತಿಸುತ್ತಿದ್ದರು ಎಂದು ಹೇಳಲಾಗಿದೆ. ಆ ಚಿತ್ರ ಒಂದು ಹಂತ ಪೂರೈಸುವ ಹೊತ್ತಿಗೆ ಹುಚ್ಚ ವೆಂಕಟ್‌ ತಾನು ಪ್ರೀತಿಸುತ್ತಿದ್ದ ಹುಡುಗಿಯನ್ನು ಬನಶಂಕರಿ ದೇವಾಲಯದಲ್ಲಿ ಮದುವೆಯಾಗಿ, ದೊಮ್ಮಲೂರು ನೋಂದಣಿ ಕಚೇರಿಯಲ್ಲಿ ನೋಂದಣಿ ಮಾಡಿಸಿದ್ದರು ಎನ್ನಲಾಗಿದೆ.

ಎರಡು, ಮೂರು ವರ್ಷಗಳ ಬಳಿಕ ಅವರ ದಾಂಪತ್ಯ ನಡುವೆ ಬಿರುಕು ಬಂದಿದ್ದರಿಂದ ಅವರು ಪುನಃ ಚಿತ್ರಗಳನ್ನು ನಿರ್ಮಿಸಿ, ನಿರ್ದೇಶಿಸುವುದರಲ್ಲಿ ನಿರತರಾಗಿದ್ದರು. ಈ ನಡುವೆ ಅವರು ಆಗಾಗ ತನಗೆ ಮದುವೆಯೇ ಆಗಿಲ್ಲ ಎಂದು ಹೇಳಿಕೆ ನೀಡುತ್ತಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com