ಭಾರತದಲ್ಲಿ ಎಲ್ಲವೂ ಮುಕ್ತವೇ?

ಜೇಮ್ಸ್ ಬಾಂಡ್ ಸರಣಿಯ ಹೊಸ ಚಿತ್ರ ಸ್ಪೆಕ್ಟರ್‍ನ ಕಿಸ್ಸಿಂಗ್ ದೃಶ್ಯಕ್ಕೆ ಕತ್ತರಿ ಹಾಕಿದ ವಿವಾದಕ್ಕೆ ಸಂಬಂಧಿಸಿ ಸೆನ್ಸಾರ್...
ಸ್ಪೆಕ್ಟರ್‍ ಚಿತ್ರದ ಸ್ಟಿಲ್
ಸ್ಪೆಕ್ಟರ್‍ ಚಿತ್ರದ ಸ್ಟಿಲ್
ನವದೆಹಲಿ: ಜೇಮ್ಸ್ ಬಾಂಡ್ ಸರಣಿಯ ಹೊಸ ಚಿತ್ರ ಸ್ಪೆಕ್ಟರ್‍ನ ಕಿಸ್ಸಿಂಗ್ ದೃಶ್ಯಕ್ಕೆ ಕತ್ತರಿ ಹಾಕಿದ ವಿವಾದಕ್ಕೆ ಸಂಬಂಧಿಸಿ ಸೆನ್ಸಾರ್ ಮಂಡಳಿಯ ಅಧ್ಯಕ್ಷ ಪಹ್ಲಾಜ್ ನಿಹಲಾನಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಹಿಂದಿನ ಬಾಂಡ್ ಸಿನಿಮಾಗಳ ಮೇಲೂ ಸೆನ್ಸಾರ್ ಹೇರಲಾಗಿತ್ತು. ಸ್ಕೈಫಾಲ್‍ನಲ್ಲೂ ಯಾವುದೇ ಕಿಸ್ಸಿಂಗ್ ದೃಶ್ಯ ಇರಲಿಲ್ಲ. ಆಗ `ಸಂಸ್ಕಾರಿ ಬಾಂಡ್'ಎಲ್ಲಿ ಹೋಗಿತ್ತು? ಆಗ ಸೆನ್ಸಾರ್ ಮಂಡಳಿಯ ನಿರ್ಧಾರವನ್ನು ಪ್ರಶ್ನಿಸದವರು ಈಗ ಧ್ವನಿ ಎತ್ತುತ್ತಿದ್ದಾರೆ ಎಂದಿದ್ದಾರೆ. 
ಸ್ಪೆಕ್ಟರ್‍ನಲ್ಲಿ ಕಿಸ್ಸಿಂಗ್ ದೃಶ್ಯಕ್ಕೆ ಅನುಮತಿ ನೀಡುವುದಿಲ್ಲ ಎಂದಿರಲಿಲ್ಲ. ಆದರೆ, ಆ ಅವಧಿಯನ್ನು 20 ಸೆಕೆಂಡುಗಳಿಗೆ ಇಳಿಸು ವಂತೆ ಸೂಚಿಸಿದ್ದೆವು ಎಂದು `ಟೈಮ್ಸ್ ಆಫ್ ಇಂಡಿಯಾ'ಗೆ ನೀಡಿದ ಸಂದರ್ಶನದಲ್ಲಿ ನಿಹಲಾನಿ ಸಮರ್ಥನೆ ನೀಡಿದ್ದಾರೆ. ಒಂದು ಸೆಕೆಂಡಿನದ್ದಾಗಲಿ, ಒಂದು ನಿಮಿ ಷದ್ದಾಗಿರಲಿ ಕಿಸ್ ಅಂದ್ರೆ ಕಿಸ್ಸೇ ಎನ್ನುವ ವಾದ ತಳ್ಳಿಹಾಕಿರುವ ಅವರು, ``ಹೀಗೆ ಹೇಳುವವರು ಮನೆಯ ಬಾಗಿಲು ತೆರೆದು ಲೈಂಗಿಕ ಕ್ರಿಯೆ ನಡೆಸುತ್ತಾರಾ? ತಮ್ಮ ಲೈಂಗಿಕ ಕ್ರಿಯೆಯ ದೃಶ್ಯವನ್ನು ಎಲ್ಲರಿಗೂ ಪ್ರದರ್ಶಿಸುತ್ತಾರಾ'' ಎಂದು ಪ್ರಶ್ನಿಸಿದ್ದಾರೆ. 
ಟ್ವಿಟರ್‍ನಲ್ಲಿ ಸೆನ್ಸಾರ್ ಮಂಡಳಿ ನಿರ್ಧಾರ ಟೀಕಿಸುವವರ ಕುರಿತೂ ನಿಹಲಾನಿ, ಟ್ವಿಟರ್ ನಲ್ಲಿರುವ ಕೆಲವರಿಗೆ ಭಾರತದ ಬಗ್ಗೆ ಗೊತ್ತಿಲ್ಲ. ಭಾರತದಲ್ಲಿ ಜನರು ಮುಖಕ್ಕೆ ಗಂಗಾ ಜಲ ಹಾಕುತ್ತಾರೆ. ಇಂಥ ದೇಶದಲ್ಲಿ ಎಲ್ಲವೂ ಮುಕ್ತವಾಗಿರಬೇಕೆಂದು ಬಯಸುವುದು ತಪ್ಪು. ಕೆಲ ನಿರ್ಮಾಪಕರು ತಮ್ಮ ಚಿತ್ರಗಳನ್ನು ಡಿಜಿಟಲ್ ಪ್ಲ್ಯಾಟ್ಫಾಮರ್ïನಲ್ಲಿ ಬಿಡುಗಡೆ ಮಾಡಲು ನಿರ್ಧರಿಸಿದರೆ ಸರ್ಕಾರ ಅದರ ಮೇಲೂ ಸೆನ್ಸಾರ್ ಹೇರುವ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com