ನನ್ನ ಸಂಗೀತ ಸಿನೆಮಾಗಿಂತ ದೊಡ್ಡದಾಗುವುದು ಇಷ್ಟವಿಲ್ಲ: ಎ ಆರ್ ರೆಹಮಾನ್

ಭಾರತೀಯ ಚಲನಚಿತ್ರೋದ್ಯಮದಲ್ಲಿ ಅತಿ ಬೇಡಿಕೆಯುಳ್ಳ, ಆಸ್ಕರ್ ಪ್ರಶಸ್ತಿ ವಿಜೇತ ಸಂಗೀತ ನಿರ್ದೇಶಕ ಎ ಆರ್ ರೆಹಮಾನ್ ಅವರು ನನ್ನ ಸಂಗೀತ ಸಿನೆಮಾಗಿಂತ
ಸಂಗೀತ ನಿರ್ದೇಶಕ ಎ ಆರ್ ರೆಹಮಾನ್
ಸಂಗೀತ ನಿರ್ದೇಶಕ ಎ ಆರ್ ರೆಹಮಾನ್

ಪಣಜಿ: ಭಾರತೀಯ ಚಲನಚಿತ್ರೋದ್ಯಮದಲ್ಲಿ ಅತಿ ಬೇಡಿಕೆಯುಳ್ಳ, ಆಸ್ಕರ್ ಪ್ರಶಸ್ತಿ ವಿಜೇತ ಸಂಗೀತ ನಿರ್ದೇಶಕ ಎ ಆರ್ ರೆಹಮಾನ್ ಅವರು ನನ್ನ ಸಂಗೀತ ಸಿನೆಮಾಗಿಂತ ದೊಡ್ಡದಾಗುವುದು ಇಷ್ಟವಿಲ್ಲ ಎಂದಿದ್ದಾರೆ.

"ಸಂಗೀತ ನಿರೂಪಣೆಯ ಭಾಗವಾಗದ ಹೊರತು ನಾನು ನಿರ್ದೇಶಿಸುವ ಸಂಗೀತ ಆ ಸಿನೆಮಾಗಿಂತ ದೊಡ್ಡದಾಗುವುದು ನನಗೆ ಇಷ್ಟವಿಲ್ಲ" ಎಂದು ಗೋವಾ ಅಂತರಾಷ್ಟ್ರೀಯ ಚಿತ್ರೋತ್ಸವದ ಫಿಲ್ಮ್ ಬಾಜಾರಿನಲ್ಲಿ ಪಾಲ್ಗೊಂಡ ವೇಳೆಯಲ್ಲಿ ಹೇಳಿದ್ದಾರೆ.

ಎರಡು ಗ್ರಾಮಿ ಪ್ರಶಸ್ತಿ ಮತ್ತು ಎರಡು ಆಸ್ಕರ್ ಪ್ರಶಸ್ತಿ ಪಡೆದಿರುವ ರೆಹಮಾನ್ ಮದ್ರಾಸಿನ ಮೊಜಾರ್ಟ್ ಎಂದೇ ಪ್ರಖ್ಯಾತ. ಹೊಸ ನಿರ್ದೇಶಕರೊಂದಿಗೆ ಕೆಲಸ ಮಾಡುವುದು ತಮಗಿಷ್ಟ ಎಂತಲೂ ಅವರು ಹೇಳಿದ್ದಾರೆ.

ಆದರೆ ಸಣ್ಣ ಸಿನೆಮಾಗಳನ್ನು ಒಪ್ಪಿಕೊಳ್ಳುವುದಕ್ಕೆ ಭಯವಾಗುತ್ತದೆ ಎಂದಿರುವ ಅವರು "ಸಂಗೀತದ ಅತಿಯಾದ ನಿರೀಕ್ಷೆಯಿಂದ ಸಿನೆಮಾಗೆ ತೊಂದರೆಯಾಗಬಹುದೆಂದು" ಅವರು ಕಾರಣ ನೀಡುತ್ತಾರೆ.

೧೯೯೨ರ 'ರೋಜಾ' ಸಿನೆಮಾದಿಂದ ಸಿನೆಮಾ ಸಂಗೀತ ನಿರ್ದೇಶಕರಾಗಿ ಹೊರಹೊಮ್ಮಿದ ರೆಹಮಾನ್ ನಂತರ ಭಾರತೀಯ ಚಿತ್ರೋದ್ಯಮದ ಹಲವು ಭಾಷೆಗಳ ಸಿನೆಮಾಗಳಿಗೆ ಸಂಗೀತ ನೀಡಿ ಸಿನೆರಸಿಕರ ಮನೆಮಾತಾಗಿದ್ದಾರೆ. ವಿಶ್ವ ಸಿನೆಮಾಗಳಲ್ಲು ಛಾಪು ಮೂಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com