
ಪಿತಾಮಗನ್', `ಅವನ್- ಇವನ್' ಮುಂತಾದ ಪ್ರಯೋಗಾತ್ಮಕ ಸಕ್ಸಸ್ ಸಿನಿಮಾಗಳನ್ನು ಕೊಟ್ಟ ಬಾಲ, ರಿಸ್ಕ್ ತೆಗೆದುಕೊಳ್ಳುವುದರಲ್ಲಿ ಸದಾ ಮುಂದಿರುತ್ತಾರೆ. ಈ ಕಾರಣಕ್ಕೆ `ನಾನ್ ಕಡವುಳ್', `ಮೆಲ್ಲ ಕನ್ನೋಡು' ಚಿತ್ರಗಳ ಹೀರೋಗಳು ತೀರಾ ವಿಲಕ್ಷಣವಾಗಿ ಕಾಣುತ್ತಾರೆ.
ಸೋಲು- ಗೆಲುವಿಗೆ ತಲೆ ಕಡೆಸಿಕೊಳ್ಳದ ಈ ನಿರ್ದೇಶಕ, ಈಗ ಮತ್ತೊಂದು ಬಿಗ್ ಬಜೆಟ್ ಮತ್ತು ಬಿಗ್ ಮಲ್ಟಿಸ್ಟಾರ್ ಚಿತ್ರಕ್ಕೆ ಕೈ ಹಾಕಿದ್ದಾರೆ. ತಮಿಳು ಹಾಗೂ ತೆಲುಗು ಚಿತ್ರರಂಗವೇ ಅಚ್ಚರಿಯಿಂದ ನೋಡುವಂಥ ಚಿತ್ರವನ್ನು ಬಾಲ ನಿರ್ದೇಶಿಸುವುದಕ್ಕೆ ಹೊರಟಿದ್ದಾರೆ. ತಮಿಳಿನಲ್ಲಿ ಈ ಸಿನಿಮಾ ಸೆಟ್ಟೇರಿದರೂ ತೆಲುಗು, ಹಿಂದಿಗೆ ಡಬ್ ಆಗುವುದರಲ್ಲಿ ಎರಡು ಮಾತಿಲ್ಲ.
ಅಂದ ಹಾಗೆ ಬಾಲ ನಿರ್ದೇಶಿಸಲು ಹೊರಟಿರುವ ಈ ಚಿತ್ರದ ನಾಯಕರು ಯಾರು? ಅರವಿಂದ್ ವಾಮಿ, ವಿಶಾಲ್, ರಾಣಾ ದೊಗ್ಗುಬಾಟಿ, ಅರ್ಯ, ಅಥರ್ವ ಹೀಗೆ ಐದು ಮಂದಿ ಹೀರೋಗಳು ಬಾಲ ಚಿತ್ರಕ್ಕೆ ಮುಖ್ಯ ಪಿಲ್ಲರ್‍ಗಳಾಗುತ್ತಿದ್ದಾರೆ. ಈ ಕಾರಣಕ್ಕೆ ಬಾಲ ದೊಡ್ಡ ಸಿನಿಮಾ ಎನ್ನುವ ಮಾತುಗಳು ಆಗಲೇ ಟಾಲಿವುಡ್, ಕಾಲಿವುಡ್‍ನಲ್ಲಿ ಕೇಳಿ ಬರುತ್ತಿದೆ. ವಿಶೇಷ ಅಂದರೆ ಈ ಐದು ಮಂದಿ ಸ್ಟಾರ್‍ಗಳಿಗೆ ಅನುಷ್ಕಾ ಶೆಟ್ಟಿ ಒಬ್ಬಳೆ ನಾಯಕಿ. ಚಿತ್ರದ ಹೆಸರು, `ತಾರೈ ತಪ್ಪಟ್ಟೈ'. ಬಾ ವರ್ಷಗಳ ನಂತರ `ರೋಜಾ' ಹಾಗೂ `ಬಾಂಬೆ' ಚಿತ್ರಗಳ ಅರವಿಂದ್ ಸ್ವಾಮಿ ಅವರನ್ನು ಚಿತ್ರ ಕರೆತರುತ್ತಿದ್ದು, ಕನ್ನಡದ `ಬಂಗಾರದ ಮನುಷ್ಯ'ನ ಸೂತ್ರಧಾರ ಹಿರಿಯ ನಿರ್ದೇಶಕ ಸಿದ್ಧಲಿಂಗಯ್ಯ ಅವರ ಮೊಮ್ಮಗ ಅಥರ್ವ ಕೂಡ ಮತ್ತೆ ಬಾಲ ಕ್ಯಾಂಪಿನಲ್ಲಿ ಕಾಣಿಸಿಕೊಂಡಿರುವುದು ವಿಶೇಷ. ಈ ಹಿಂದೆ ಇವರದ್ದೇ ನಿರ್ದೇಶನದ `ಪರದೇಶಿ' ಚಿತ್ರದಲ್ಲಿ ಅಥರ್ವ ನಾಯಕನಾಗಿ ಅಭಿನಯಿಸಿದ್ದರು.
ನೆಲದ ಸಂಸ್ಕೃತಿ, ಸಿನಿಮಾ ಬ್ಯುಟಿಯನ್ನು ತಮ್ಮ ಕಥೆಗಳಲ್ಲಿ ಹುಡುಕುವ ಬಾಲ, ತಮ್ಮ ಈ ಬಹುಕೋಟಿ ಹಾಗೂ ಬಹುತಾರಾಗಣದ ಚಿತ್ರವನ್ನು ಜನವರಿಗೆ ಶುರು ಮಾಡಲಿದ್ದು, ಮುಂದಿನ ಸಂಕ್ರಾಂತಿಗೆ ತೆರೆಗೆ ತರುವ ಸಾಹಸ ಮಾಡಲಿದ್ದಾರೆ.
Advertisement