ಕೆರಾಫ್ ಫುಟ್ ಪಾತ್-2 ಮತ್ತೊಂದು ದಾಖಲೆ: ಮೂರು ಭಾಷೆ, 500 ಥಿಯೇಟರ್ ಗಳಲ್ಲಿ ಬಿಡುಗಡೆ

ಮಾ. ಕಿಶನ್ ನಿರ್ದೇಶಿಸಿ, ಅಭಿನಯಿಸಿರುವ 'ಕೇರಾಫ್ ಪುಟ್‍ಪಾತ್-2' ಚಿತ್ರ ಮತ್ತೊಂದು ದಾಖಲೆಗೆ ಪಾತ್ರವಾಗಿದೆ. ಇದೇ ತಿಂಗಳು 4 ರಂದು ತೆರೆ ಕಾಣುತ್ತಿದೆ. ಆದರೆ ಮಾಮೂಲಿಯಾಗಿ ಈ ಸಿನಿಮಾ ಬಿಡುಗಡೆಯಾಗುತ್ತಿಲ್ಲ.
ಕೇರಾಫ್ ಪುಟ್‍ಪಾತ್-2
ಕೇರಾಫ್ ಪುಟ್‍ಪಾತ್-2

ಮಾ. ಕಿಶನ್ ನಿರ್ದೇಶಿಸಿ, ಅಭಿನಯಿಸಿರುವ 'ಕೇರಾಫ್ ಪುಟ್‍ಪಾತ್-2' ಚಿತ್ರ  ಮತ್ತೊಂದು ದಾಖಲೆಗೆ ಪಾತ್ರವಾಗಿದೆ. ಇದೇ ತಿಂಗಳು 4 ರಂದು ತೆರೆ ಕಾಣುತ್ತಿದೆ. ಆದರೆ ಮಾಮೂಲಿಯಾಗಿ ಈ ಸಿನಿಮಾ ಬಿಡುಗಡೆಯಾಗುತ್ತಿಲ್ಲ.
ಬರೋಬ್ಬರಿ 500 ಚಿತ್ರಮಂದಿರಗಳಲ್ಲಿ ಕೇರಾಫ್ ಫುಟ್ ಪಾತ್-2 ಚಿತ್ರ ದರ್ಶನವಾಗುತ್ತಿದೆ. ಈಗಾಗಲೇ ವಿದೇಶಗಳಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರ ಮನಸ್ಸು ಗೆದ್ದಿರುವ ಈ ಸಿನಿಮಾ, ಹಾಲಿವುಡ್ ಸಿನಿಮಾ ಪಂಡಿತರ ಮುಂದೆಯೂ ಪ್ರದರ್ಶನಗೊಂಡು ಮುಕ್ತ ಪ್ರಶಂಸೆಗೆ ಕಾರಣವಾಗಿದೆ. ಹೀಗೆ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡುತ್ತಿರುವ ಈ ಚಿತ್ರವನ್ನು ಅಷ್ಟೇ ದೊಡ್ಡ ಮಟ್ಟದಲ್ಲಿ ತೆರೆಗೆ ತರಬೇಕು ಎಂಬುದು ಮಾ.ಕಿಶನ್‍ರ ಪ್ಲಾನ್. ಕನ್ನಡ, ತೆಲುಗು, ಹಿಂದಿ ಈ ಮೂರು ಭಾಷೆಗಳಲ್ಲಿ ತಯಾರಾಗಿರುವ ಈ ಚಿತ್ರವನ್ನು ದೇಶ- ವಿದೇಶಗಳ ಚಿತ್ರಮಂದಿರಗಳು ಸೇರಿದಂತೆ ಒಟ್ಟು 500 ಥಿಯೇಟರ್‍ ಗಳಲ್ಲಿ ಬಿಡುಗಡೆ ಮಾಡುವ ಮೂಲಕ ದಾಖಲೆ ಬರೆಯುತ್ತಿದ್ದಾರೆ.
ಬಿಗ್ ಸ್ಟಾರ್ ಸಿನಿಮಾಗಳೇ ನೂರು, ಇನ್ನೂರು ಚಿತ್ರಮಂದಿರಗಳಲ್ಲಿ ತೆರೆ ಕಾಣುವುದೇ ದೊಡ್ಡ ಸಾಹಸ ಆಗಿರುವ ದಿನಗಳಲ್ಲಿ ಕೇರಾಫ್ ಫುಟ್ ಪಾತ್-2 ಸಿನಿಮಾ ಐನೂರು ಕೇಂದ್ರಗಳಲ್ಲಿ ಬಿಡುಗಡೆಯಾಗುವ ಮೂಲಕ ಸಿನಿ ಮೈದಾನದಲ್ಲಿ ಹೊಸ ಓಟಕ್ಕೆ ಸಜ್ಜಾಗಿದೆ. ಮೂರು ಭಾಷೆಗಳಲ್ಲಿ ಬರುತ್ತಿರುವುದರಿಂದ ಪ್ರತಿ ಭಾಷೆಗೂ 50 ಚಿತ್ರಮಂದಿರಗಳಂತೆ 150 ಚಿತ್ರಮಂದಿರಗಳನ್ನು ಜಾಲಿ ಹಿಟ್ಸ್ ಸಂಸ್ಥೆ ಬುಕ್ ಮಾಡಿದೆ. ಇನ್ನು ಕರ್ನಾಟಕ ಸೇರಿದಂತೆ ದೇಶದ ಬೇರೆ ಬೇರೆ ರಾಜ್ಯಗಳಲ್ಲಿ ದೇವರಾಜ್ ಪಾಂಡೆ ಎಂಬುವವರು ಈ ಸಿನಿಮಾವನ್ನು ಬಿಡುಗಡೆ ಮಾಡುತ್ತಿದ್ದಾರೆ.
ಚಿತ್ರಮಂದಿರದ ಮಾಲೀಕರೂ ಆಗಿರುವ ದೇವರಾಜ್ ಪಾಂಡೆ, ರಾಜ್ಯದಲ್ಲೇ 120  ಚಿತ್ರಮಂದಿರಗಳಲ್ಲಿ `ಕೇರಾಫ್ ಪುಟ್‍ಪಾತ್-2' ಚಿತ್ರಕ್ಕೆ ಬಿಡುಗಡೆ ಭಾಗ್ಯ ಕಲ್ಪಿಸುತ್ತಿದ್ದಾರೆ. ಉಳಿದಂತೆ ಬಾಂಬೆ, ಪೂನಾ, ಆಂಧ್ರಸೇರಿದಂತೆ ತೆಲುಗು ಮತ್ತು ಹಿಂದಿ ಮಾತನಾಡುವ ಪ್ರಾಂತ್ಯಗಳಲ್ಲಿ 230 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆ ಕಾಣುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com