ಹಿಂದಿಯಲ್ಲಿ ಬರೆದ ಸ್ಕ್ರಿಪ್ಟ್ ಕನ್ನಡದಲ್ಲಿ 'ಮಿಂಚಾಗಿ ನೀನು ಬರಲು'

ಚೊಚ್ಚಲ ನಿರ್ದೇಶಕ ರಣದೀಪ್ ಶಾಂತಾರಾಮ್ ಮಹಾದಿಕ್ ಅವರಿಗೆ ನಿರ್ದೇಶಕ ರಾಜಕುಮಾರ್ ಸಂತೋಷಿ ಅವರ ಜೊತೆ ಸಹ ನಿರ್ದೇಶನ ಮಾಡಿರುವ ೨೦ ವರ್ಷದ
ದಿಗಂತ್ ಮತ್ತು ಕೃತಿ ಕರಬಂಧ
ದಿಗಂತ್ ಮತ್ತು ಕೃತಿ ಕರಬಂಧ

ಬೆಂಗಳೂರು: ಚೊಚ್ಚಲ ನಿರ್ದೇಶಕ ರಣದೀಪ್ ಶಾಂತಾರಾಮ್ ಮಹಾದಿಕ್ ಅವರಿಗೆ ನಿರ್ದೇಶಕ ರಾಜಕುಮಾರ್ ಸಂತೋಷಿ ಅವರ ಜೊತೆ ಸಹ ನಿರ್ದೇಶನ ಮಾಡಿರುವ ೨೦ ವರ್ಷದ ಅನುಭವವಿದೆ. ಅವರ ಮೊದಲ ಅರಕೆಯಂತೆ ಹಿಂದಿಯಲ್ಲಿ ಸಿನೆಮಾ ಮಾಡಬೇಕೆಂದಿದ್ದರೂ ವಿಧಿ ಅವರನ್ನು ಕನ್ನಡ ಚಿತ್ರೋದ್ಯಮಕ್ಕೆ ತಂದೊಡ್ಡಿದೆ. ಇದರ ಫಲವೇ 'ಮಿಂಚಾಗಿ ನೀನು ಬರಲು'.

"ನಾನು ಸ್ಕ್ರಿಪ್ಟ್ ಹಿಂದಿಯಲ್ಲಿ ಬರೆದಿದ್ದೆ ಆದರ ಅದಕ್ಕೆ ಸರಿಯಾದ ನಟರು ಸಿಗಲಿಲ್ಲ. ನನಗೆ ಹೊರಬರ ಜೊತೆ ಕೆಲಸ ಮಾಡಲು ಇಷ್ಟವಿರಲಿಲ್ಲ. ಆದುದರಿಂದ ಬಾಲಿವುಡ್ ನಲ್ಲಿ ಸಿನೆಮ್ಯಾಟೋಗ್ರಾಫರ್ ಆಗಿರುವ ಮೈಸೂರಿನ ಮಹೇಶ್ ತಲಕಾಡು ಅವರೊಂದಿಗೆ ಮಾತನಾಡಿದಾಗ ಅವರು ಕನ್ನಡದಲ್ಲಿ ಪ್ರಯತ್ನಿಸುವಂತೆ ಹೇಳಿದರು. ಅದರ ಫಲವಾಗಿ ಇಲ್ಲಿ ದಿಗಂತ್ ಮತ್ತು ಕೃತಿ ಕರಬಂಧ ಅವರೊಂದಿಗೆ ಸಿನೆಮಾ ಮಾಡಿದ್ದೇನೆ. ಬಿಡುಗಡೆಗೆ ಸಿದ್ಧವಾಗಿದೆ" ಎನ್ನುತ್ತಾರೆ ರಣದೀಪ್.

ಈ ಸಿನೆಮಾ ನಿರ್ಮಿಸಲು ಮೂವರು ತಂತ್ರಜ್ಞರು ಒಟ್ಟಾಗಿದ್ದಾರೆ. ನಿರ್ದೇಶಕ ರಣದೀಪ್, ಸಿನೆಮ್ಯಾಟೋಗ್ರಾಫರ್ ಮಹೇಶ್ ತಲಕಾಡು ಜೊತೆಗೆ ಬಾಲಿವುಡ್ ನಲ್ಲಿ ಕಾರ್ಯಕಾರಿ ನಿರ್ಮಾಪಕರಾಗಿ ದುಡಿದಿರುವ ಮಹೇಶ್ ಜೈಸ್ವಾಲ್  ಕೂಡ ಈ ಸಿನೆಮಾಗೆ ಹೂಡಿಕೆ ಮಾಡಿದ್ದಾರೆ. ಆಗಸ್ಟ್ ೨೦೧೩ರಿಂದಲೇ ಈ ಸಿನೆಮಾ ಸುದ್ದಿಯಲ್ಲಿದ್ದರು, ತಡವಾಗಿದ್ದರಿಂದ ವಿಚಲಿತನಾಗಲಿಲ್ಲ ಎನ್ನುವ ರಣದೀಪ್ "ದಿಗಂತ್ ಅವರಿಗೆ ಬಾಲಿವುಡ್ ನಲ್ಲಿ ಅವಕಾಶ ಸಿಕ್ಕಿದ್ದರೆ ಬಗ್ಗೆ ಅವರು ತಿಳಿಸಿದ್ದರು. ಇದಕ್ಕೆ ನಾನು ಸಿದ್ಧನಿದ್ದೆ" ಎನ್ನುತ್ತಾರೆ.

ವಿ ಹರಿಕೃಷ್ಣ ಸಂಗೀತ ನೀಡಿದ್ದು ಕನ್ನಡ ಚಿತ್ರೋದ್ಯಮದ ಸಹಕಾರವನ್ನು ರಣದೀಪ್ ನೆನೆಯುತ್ತಾರೆ. ವಿತರಣೆಗೆ ನೆರವಾಗಿರುವ ಜಯ್ಯಣ್ಣ-ಭೋಗೇಂದ್ರ ಅವರ ಸಹಾಯವನ್ನು ಸ್ಮರಿಸುತ್ತಾರೆ.


ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com