ಪರಿಣೀತಿ ಸಾನಿಯಾ ಮಿರ್ಜಾ ಆಗ್ತಾಳಾ?
ಇತ್ತೀಚೆಗೆ ಒಂದು ಫೋಟೊ ಸೋಷಿಯಲ್ ಮೀಡಿಯಾದಲ್ಲಿ ಜೋರಾಗಿ ಹರಿದಾಡಿತು. ಅದರಲ್ಲಿ ಪರಿಣೀತಿ ಛೋಪ್ರಾ, ಟನಿಸ್ ತಾರೆ ಸಾನಿಯಾ ಮೀರ್ಜಾರಿಗೆ ಆಶೀರ್ವಾದ ಮಾಡುತ್ತಿರುವ ಫೋಸು ನೀಡಿದ್ದರು. ಆಕೆಗೆ ಇದು ಬೇಕೆಂದಲ್ಲ, ಆದರೂ ನಾನು ಆಶೀರ್ವಾದ ಮಾಡಿದ್ದೇನೆ. ಇದು ಆಕೆಯದ್ದೇ ರಾಕೆಟ್. ಹಹ್ಹಹ್ಹ ಎಂಥ ದಿನ ಎಂದು ಟ್ವೀಟ್ ಮಾಡಿದ್ದಳು. ಇತ್ತೀಚೆಗೆ ಈ ಇಬ್ಬರು ಗೋವಾದಲ್ಲಿ ಜಾಲಿಯಾಗಿ ಕಾಲ ಕಳೆದಿದ್ದರು. ಇದ್ದಕ್ಕಿದ್ದಂತೆ ಸಿನಿಮಾ ನಟಿ ಮತ್ತು ಕ್ರೀಡಾ ತಾರೆಯರ ಈ ಸ್ನೇಹ ಅನುಮಾನ ಹುಟ್ಟಿಸಿತ್ತು. ಗೋವಾದ ಒಂದು ಫೋಟೊ ಟ್ವೀಟ್ ಮಾಡಿದ್ದ ಸಾನಿಯಾ ಮಿರ್ಜಾ, ಸಣ್ಣ ಒಂದಿಷ್ಟು ಕೆಲಸ ಎಂದು ಬರೆದಿದ್ದರು.
ಏನು ಕೆಲಸ?: ಇದೀಗ ಅನುಮಾನಕ್ಕೆ ಕಾರಣವಾಗಿರುವ ಅಂಶ. ಸಾನಿಯಾ ಮಿರ್ಜಾರ ಬಯೋಪಿಕ್ ಸುದ್ದಿ ಕಳೆದ ಕೆಲವು ತಿಂಗಳುಗಳಿಂದ ಚಾಲ್ತಿಯಲ್ಲಿದೆ. ಫರಾಹ್ ಖಾನ್ ನಿರ್ದೇಶಿಸುತ್ತಾರೆ ಎಂದು ಸುದ್ದಿಯಾಗಿತ್ತು. ಆ ಕ್ಷಣಕ್ಕೆ ಅವರು ಅದನ್ನು ನಿರಾಕರಿಸಿದ್ದರು. ಆದರೆ ಕಾಮಿಡಿ ನೈಟ್ಸ್ ವಿತ್ ಕಪಿಲ್ ಶೋ ನಲ್ಲಿ ಸಾನಿಯಾ ಮಿರ್ಜಾ ನನ್ನ ಬಂಯೋಪಿಕ್ ತೆರೆಗೆ ಬಂದರೆ, ನನ್ನ ಪಾತ್ರವನ್ನು ಪರಿಣೀತಿ ಮಾಡಿದರೆ ಚೆನ್ನಾಗಿರುತ್ತದೆ ಎಂಬ ಅಭಿಪ್ರಾಯವನ್ನು ಹಂಚಿಕೊಂಡಿದ್ದರು. ಹಾಗಾದರೆ ಗೋವಾದಲ್ಲಿ ಪರಿಣೀತಿ ಮತ್ತು ಸಾನಿಯಾ ಕೂಡಿ ಇದೇ ವಿಷಯವನ್ನು ಚರ್ಚೆ ಮಾಡುತ್ತಿದ್ದೀರಾ?
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ