ರಾಜಕುಮಾರ್ ಹುಟ್ಟೂರಿಗೆ ನೀನಾಸಂ ಸತೀಶ್ ಭೇಟಿ
ಬೆಂಗಳೂರು: ರಂಗಭೂಮಿಯ ನಟನೆಯಿಂದ, ಸಿನೆಮಾ ನಟನೆಗೆ ಜಿಗಿದು, ನಾಯಕ ನಟನಾಗಿ ಮಿಂಚಿ ಈಗ ನಿರ್ಮಾಪಕನ ಧಿರಿಸನ್ನು ಧರಿಸಿರುವ ನೀನಾಸಂ ಸತೀಶ್ ಅವರೇ ನಟಿಸಿರುವ 'ರಾಕೆಟ್' ಚಿತ್ರವನ್ನು ನಿರ್ಮಿಸಿ ಮುಗಿಸಿದ್ದು ಬಿಡುಗಡೆಗೆ ಸಿದ್ಧವಾಗುತ್ತಿದೆ. ಸೆನ್ಸಾರ್ ಮಂಡಲಿ 'ಅಸ್ತು' ಎನ್ನಲು ಕಾಯುತ್ತಿರುವ ಈ ಸಮಯದ ನಡುವೆ ಡಾ. ರಾಜಕುಮಾರ್ ಅವರ ಹುಟ್ಟುರಾದ ಗಾಜನೂರಿಗೆ ಭೇಟಿ ನೀಡಿ ಪ್ರಾರ್ಥಿಸಿ ಬಂದಿದ್ದಾರೆ.
"ಅಪ್ಪಾಜಿಯವರ ಹುಟ್ಟೂರಿಗೆ ಭೇಟಿ ನೀಡುವುದೆಂದರೆ ಆಶೀರ್ವಾದ ಬೇಡುವುದಕ್ಕೆ ಸಮ. ಅಲ್ಲಿಗೆ ಹೋಗಿ ಬಹಳ ಖುಷಿಯಾಯಿತು. ನನ್ನ ಸಿನೆಮಾ 'ರಾಕೆಟ್' ಬಿಡುಗಡೆಗೂ ಮುಂಚೆ ಅಲ್ಲಿಗೆ ಹೋಗಬೇಕೆಂದುಕೊಂಡಿದ್ದೆ. ಈಗ ಅಲ್ಲಿ ವಾಸವಿರುವ ಹಿರಿಯ ಸಹೋದರಿ ಶಾರದಮ್ಮ ಮತ್ತು ಅವರ ಬಂಧುಗಳನ್ನು ಭೇಟಿ ಮಾಡಿ ಬಂದೆ" ಎನ್ನುತ್ತಾರೆ ಸತೀಶ್.
ಸತೀಶ್ ಮತ್ತು ಅವರ ಗೆಳೆಯರಿಗೆ ನೆನಪಿನ ಸುರಳಿಗಳೇ ಬಿಚ್ಚಿಕೊಂಡವಂತೆ. ಕನ್ನಡ ಚಿತ್ರರಂಗದ ದಂತಕಥೆಯ ಹಳೆಯ ಫೋಟೋಗಳನ್ನು ನೋಡಿ, ಅಕ್ಕಪಕ್ಕದವರಿಂದ ಅವರ ಕಥೆಗಳನ್ನು ಕೇಳಿ ವಿನೀತಿ ಭಾವದಿಂದ ಹಿಂತಿರುಗಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ