ಗೋವಾ ಚಿತ್ರೋತ್ಸವಕ್ಕೆ ಕನ್ನಡದಿಂದ ನೋ ಎಂಟ್ರಿ

ಪ್ರತಿ ವರ್ಷ ಗೋವಾದಲ್ಲಿ ನಡೆಯಲಿರುವ ಗೋವಾ ಅಂತಾರಾಷ್ಟ್ರೀಯ ಚಿತ್ರೋತ್ಸವ ಪನೋರಮಾದಲ್ಲಿ ಈ ಬಾರಿ ಕನ್ನಡ ಚಿತ್ರೋದ್ಯಮ ಭಾಗವಹಿಸದಿರಲು ...
ಕರ್ನಾಟಕ ಚಲಚಿತ್ರ ವಾಣಿಜ್ಯ ಮಂಡಳಿ
ಕರ್ನಾಟಕ ಚಲಚಿತ್ರ ವಾಣಿಜ್ಯ ಮಂಡಳಿ

ಬೆಂಗಳೂರು: ಪ್ರತಿ ವರ್ಷ ಗೋವಾದಲ್ಲಿ ನಡೆಯಲಿರುವ ಗೋವಾ ಅಂತಾರಾಷ್ಟ್ರೀಯ ಚಿತ್ರೋತ್ಸವ ಪನೋರಮಾದಲ್ಲಿ ಈ ಬಾರಿ ಕನ್ನಡ ಚಿತ್ರೋದ್ಯಮ ಭಾಗವಹಿಸದಿರಲು ನಿರ್ಧರಿಸಿದೆ. ಗೋವಾ ಚಿತ್ರೋತ್ಸವಕ್ಕೆ ಯಾವುದೇ ರೀತಿಯಲ್ಲೂ ಸ್ಪಂದಿಸದಿರಲು ತೀರ್ಮಾನ ತೆಗೆದುಕೊಂಡಿರುವ ಕರ್ನಾಟಕ ಚಲಚಿತ್ರ ವಾಣಿಜ್ಯ ಮಂಡಳಿ, ಚಿತ್ರರಂಗದ ಉಳಿದ ಅಂಗಸಂಸ್ಥೆಗಳೊಂದಿಗೂ ಈ ವಿಚಾರವಾಗಿ ಮಾತನಾಡಲಿದೆ.

ರಾಜ್ಯದಲ್ಲಿ ಕಳಸಾ ಬಂಡೂರಿ ಹೋರಾಟ ನಡೆಯುತ್ತಿರುವ ಹಿನ್ನೆಲೆಯಲ್ಲಿ ಗೋವಾದಲ್ಲಿ ನಡೆಯಲಿರುವ ಈ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪಾಲ್ಗೊಳ್ಳದಿರುವ ಮೂಲಕ ತಮ್ಮ ಪ್ರತಿಭಟನೆಯನ್ನು ತೋರುತ್ತಿರುವುದಾಗಿ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಥಾಮಸ್ ಡಿ.ಸೋಜಾ ತಿಳಿಸಿದ್ದಾರೆ.

`ಕರ್ನಾಟಕ ಹಾಗೂ ಗೋವಾ ನಡುವೆ ಕಳಸ ಬಂಡೂರಿ ಯೋಜನೆ ವಿಚಾರವಾಗಿ ಹೋರಾಟ ನಡೆಯುತ್ತಿದೆ. ನಮ್ಮ ರಾಜ್ಯದ ಬೇಡಿಕೆಗೆ ಸ್ಪಂದಿಸದ ಗೋವಾ, ಅಲ್ಲಿನ ಕನ್ನಡಿಗರನ್ನು ಈಗಾಗಲೇ ನಿರಾಶ್ರಿತರನ್ನಾಗಿಸಿದೆ.  ಈ ಹಿನ್ನೆಲೆಯಲ್ಲಿ ಈ ವರ್ಷ ಗೋವಾದಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ಕನ್ನಡ ಚಿತ್ರರಂಗವನ್ನು ಪ್ರತಿನಿಧಿಸಿ ಯಾವುದೇ ಸಂಸ್ಥೆ, ವ್ಯಕ್ತಿ ಭಾಗವಹಿಸದಿರಲು ತೀರ್ಮಾನ ಕೈಗೊಂಡಿದ್ದೇವೆ' ಎಂದು ಹೇಳಿದ್ದಾರೆ. ಚಿತ್ರೋತ್ಸವಕ್ಕಾಗಿ ತಮ್ಮ ಸಿನಿಮಾಗಳನ್ನು ಕಳುಹಿಸಿಕೊಟ್ಟಿರುವವರಿಗೂ ನಿಯಮ ಬದ್ಧವಾಗಿ ವಾಪಸ್ಸು ಪಡೆದುಕೊಳ್ಳುವಂತೆ ಕೇಳಿಕೊಳ್ಳುವುದಕ್ಕೆ ವಾಣಿಜ್ಯ ಮಂಡಳಿ ಮುಂದಾಗಿದೆ.

 ಉಮೇಶ್ ಬಣಕಾರ್ ನಿರ್ಮಾಣದ,ದಯಾಳ್ ನಿರ್ದೇಶನದ `ಹಗ್ಗದ ಕೊನೆ' ಚಿತ್ರವನ್ನು ಪನೋರಮಾದಿಂದ ಮರಳಿ ಪಡೆಯಲಿದ್ದಾರೆ. ಬಸಂತ್‍ಕುಮಾರ್ ಪಾಟೀಲ್ ನಿರ್ಮಾಣದ ಚಿತ್ರಗಳನ್ನೂ ಪನೋರಮಾಗೆ ಕಳುಹಿಸದಿರಲು ನಿರ್ಧರಿಸಲಾಗಿದೆ ಎಂದು ತಿಳಿದು ಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com