
ಬೆಂಗಳೂರು: ೨೦೧೩ ರಲ್ಲಿ ಎ ಎಂ ಆರ್ ರಮೇಶ್ ಅವರು ವೀರಪ್ಪನ್ ಕುರಿತ 'ಅಟ್ಟಹಾಸ' ನಿರ್ದೇಶಿಸಿದ್ದಾಗ ಅವರನ್ನು ನ್ಯಾಯಾಲಯಕ್ಕೆ ಎಳೆದಿದ್ದ ವೀರಪ್ಪನ್ ಪತ್ನಿ ಮುತ್ತುಲಕ್ಷ್ಮಿ, ೨೫ ಲಕ್ಷ ಪರಿಹಾರ ನೀಡುವಂತೆ ವಾದಿಸಿ ಗೆಲುವು ಕಂಡಿದ್ದರಿಂದ ಸುಪ್ರೀಮ್ ಕೋರ್ಟ್ ಪರಿಹಾರ ನೀಡುವಂತೆ ಆದೇಶ ನೀಡಿತ್ತು. ಈಗ ರಾಮ್ ಗೋಪಾಲ್ ವರ್ಮಾ ಅವರ 'ಕಿಲ್ಲಿಂಗ್ ವೀರಪ್ಪನ್' ಕೂಡ ಅಂತಹ ಕಂಟಕ ಎದುರಾಗಲಿದೆಯೇ?
ಇಂತಹ ಪರಿಸ್ಥಿತಿಯನ್ನು ನಿಭಾಯಿಸಿ, ಸ್ವಹಿತಾಸಕ್ತಿಯನ್ನು ಕಾಪಾಡಿಕೊಳ್ಳಲು 'ಕಿಲ್ಲಿಂಗ್ ವೀರಪ್ಪನ್' ನಿರ್ಮಾಪಕರು ಮುಂದಿನ ವಾರ ತಡೆಯರ್ಜಿಯೊಂದನ್ನು ಸಲ್ಲಿಸಲಿದ್ದಾರೆ ಎಂದು ತಿಳಿದುಬಂದಿದೆ.
ಮೂಲಗಳ ಪ್ರಕಾರ ರಾಮ್ ಗೋಪಾಲ್ ವರ್ಮಾ ನಿರ್ದೇಶಿಸುತ್ತಿರುವ 'ಕಿಲ್ಲಿಂಗ್ ವೀರಪ್ಪನ್' ಸಿನೆಮಾ ಬಗ್ಗೆ ಮುತ್ತುಲಕ್ಷ್ಮಿಯವರಿಗೆ ತಿಳಿದಿದ್ದರೂ, ಸಿನೆಮಾದ ಬಗ್ಗೆ ಅವರು ಯಾವುದೇ ರೀತಿ ವಿಚಾರಿಸಿಕೊಂಡಿಲ್ಲ ಎಂದು ತಿಳಿದುಬಂದಿದೆ. "ಈ ಸಿನೆಮಾ ಮಾಡಬೇಕೆಂದು ರಾಮ್ ಗೋಪಾಲ್ ವರ್ಮಾ ನಿಶ್ಚಯಿಸಿದ್ದಾಗ ಮುತ್ತುಲಕ್ಷ್ಮಿ ಅವರೊಂದಿಗೆ ಒಪ್ಪಂದ ಮಾಡಿಕೊಂಡು ಅವರಿಗೆ ಸ್ವಲ್ಪ ಹಣ ಕೂಡ ನೀಡಿದ್ದರಂತೆ. ಆದರೆ ಈಗ ಆ ಒಪ್ಪಂದದ ವಾಯಿದೆ ಮುಗಿದಿದೆಯಂತೆ. ಆದುದರಿಂಅ ಮುತ್ತುಲಕ್ಷ್ಮಿ ಸರಿಯಾದ ಸಮಯಕ್ಕೆ ಈ ಸಿನೆಮಾದ ವಿರುದ್ಧ ನಿಂತುಕೊಳ್ಳಬಹುದು ಎಂಬ ಊಹೆ ಇರುವುದರಿಂದ, ಸ್ವಹಿತಾಸಕ್ತಿ ಕಾಯ್ದುಕೊಳ್ಳಲು ನಿರ್ಮಾಪಕರು ಕಾನೂನು ಮಾರ್ಗ ಹಿಡಿಯಲಿದ್ದಾರೆ. ಪರಿಹಾರ ನೀಡಬೇಕಾಗಿ ಬಂದರೂ ಅದು ಕಾನೂನು ಮಾರ್ಗದಲ್ಲೇ ನಡೆಯಲಿದೆ" ಎನ್ನುತ್ತವೆ ಮೂಲಗಳು.
ಈ ಮಧ್ಯ ಅಕ್ಟೋಬರ್ ೨೫ ರಂದು ಚಿತ್ರದುರ್ಗದಲ್ಲಿ ವೈಭವಯುತ ಆಡಿಯೋ ಬಿಡುಗಡೆಯನ್ನು ಹಮ್ಮಿಕೊಳ್ಳಲಾಗಿದೆ.
Advertisement