
ಮುಂಬೈ: ಏಮಿ ಜಾಕ್ಸನ್ ಅವರು ಮತ್ತೆ ದಕ್ಷಿಣ ಭಾರತ ಚಿತ್ರರಂಗಕ್ಕೆ ಮರಳಿದ್ದಾರೆ. ಅವರ ಮೊದಲ ಚಿತ್ರ ಶಂಕರ್ ಅವರ 'ಐ'. ಈಗ ತಾತ್ಕಾಲಿಕವಾಗಿ ಹೆಸರಿಡಲಾಗಿರುವ 'ರೋಬೋಟ್-೨' ನಲ್ಲಿ ಮತ್ತೆ ಶಂಕರ್ ಅವರ ತಂಡವನ್ನು ಸೇರಲಿದ್ದಾರೆ. ಚಿತ್ರದಲ್ಲಿ ನಾಯಕನಟನಾಗಿ ರಜನಿಕಾಂತ್ ನಟಿಸಲಿದ್ದಾರೆ.
ಶಂಕರ್ ಅವರೇ ನಿರ್ದೇಶಿಸಿದ್ದ 'ರೋಬೋಟ್' ಸಿನೆಮಾದಲ್ಲಿ ರಜನಿಕಾಂತ್ ಮತ್ತು ಐಶ್ವರ್ಯ ರೈ ಬಚ್ಚನ್ ನಟಿಸಿದ್ದರು. ವೈಜ್ಞಾನಿಕ-ಕಾಲ್ಪನಿಕ ಚಲನಚಿತ್ರವಾದ ಇದು ಯಶಸ್ಸು ಗಳಿಸಿತ್ತು.
ಮೂಲಗಳ ಪ್ರಕಾರ ಸಿನೆಮಾದ ಸಿದ್ಧತೆಗಳು ಈಗಾಗಲೇ ಪ್ರಾರಂಭವಾಗಿದ್ದು ಏಮಿ ಜಾಕ್ಸನ್ ಅವರು ತಮ್ಮ ಪಾತ್ರಕ್ಕೆ ಸಿದ್ಧತೆ ಪ್ರಾರಂಭಿಸಿದ್ದಾರೆ. ಏಮಿ ಸದ್ಯಕ್ಕೆ ಅಕ್ಷಯ್ ಕುಮಾರ್ ಅವರ ಜೊತೆ ನಟಿಸಿದ್ದ 'ಸಿಂಗ್ ಇಸ್ ಬ್ಲಿಂಗ್' ಸಿನೆಮಾದ ಯಶಸ್ಸಿನಲ್ಲಿ ತೇಲುತ್ತಿದ್ದಾರಂತೆ.
'ರೋಬೋಟ್-೨'ರ ಚಿತ್ರೀಕರಣ ೨೦೧೬ರಲ್ಲಿ ಪ್ರಾರಂಭವಾಗಲಿದೆ.
Advertisement