
ಬೆಂಗಳೂರು: ನಟ ದರ್ಶನ್ ಅಭಿನಯದ ಮಿ ಐರಾವತ ೨೫ನೆ ದಿನದತ್ತ ನಡೆಯುತ್ತಿದೆ. ಈ ಸಮಯದಲ್ಲಿ 'ಜಗ್ಗು ದಾದ' ಸಿನೆಮಾದ ಚಿತ್ರೀಕರಣದಲ್ಲಿ ನಿರತವಾಗಿರುವ ದರ್ಶನ್ ಶೂಟಿಂಗ್ ಪ್ರಗತಿಯತ್ತ ಗಮನ ಹರಿಸಿದ್ದಾರೆ.
"ನನ್ನ ಅಭಿಮಾನಿಗಳು ನನ್ನಿಂದ ನಿರೀಕ್ಷಿಸುವ ಸಿನೆಮಾಗಳನ್ನೆ ನಾನು ಯಾವಾಗಲೂ ಆಯ್ಕೆ ಮಾಡಿದ್ದೇನೆ. ಅಲ್ಲದೆ ನನಗೆ ಹೆಚ್ಚು ಮಹಿಳಾ ಅಭಿಮಾನಿಗಳಿದ್ದಾರೆ. ಅವರು ನಾನು ಮುಂದಿನ ಹಾಸ್ಯ ಪಾತ್ರ ಯಾವಾಗ ಮಾಡುವುದು ಎಂದು ಕೇಳುತ್ತಿರುತ್ತಾರೆ. ಅವರಿಗೆ ನನ್ನ 'ದತ್ತ' ಸಿನೆಮಾ ಇಷ್ಟವಾಗಿತ್ತು. ಆದುದರಿಂದ ಈಗ 'ಜಗ್ಗು ದಾದ' ಆಯ್ಕೆ ಮಾಡಿಕೊಂಡಿದ್ದೇನೆ" ಎನ್ನುತ್ತಾರೆ ದರ್ಶನ್.
ಜಗ್ಗು ದಾದ ಕಥಾ ವಸ್ತು ಹೀಗಿದೆ. ಸಿನೆಮಾದ ಹಿರೋ ರೌಡಿಯಾಗಿರುತ್ತನೆ. ತನ್ನ ತಾತನ ಆಸೆ ಪೂರೈಸಲು ಮದುವೆಯಾಗಿರಬೇಕಾಗಿರುತ್ತದೆ. ಆದರೆ ಕರ್ನಾಟಕದಾದ್ಯಂತ ಅವನಿಗೆ ವಧು ಸಿಗದೇ ಹೋಗಲು, ದೊಡ್ಡ ಉದ್ದಿಮೆದಾರನಾಗಿ ಹುಡುಗಿ ಹುಡುಕಲು ಮುಂಬೈ ಹೋಗುವ ಹಾಸ್ಯ ಸನ್ನಿವೇಶಗಳೇ ಸಿನೆಮಾ ಕಥೆ.
"ಜಗ್ಗು ದಾದ ಮನರಜನೆಯ ಸಿನೆಮಾ. ಎಲ್ಲರೂ ಈ ಸಿನೆಮಾವನ್ನು ಇಷ್ಟ ಪಡುತ್ತಾರೆ" ಎಂಬ ಭರವಸೆ ತೋರುತ್ತಾರೆ ದರ್ಶನ್. ಸಿನೆಮಾದಲ್ಲಿ ದೀಕ್ಷಾ ಸೇಥ್ ನಾಯಕ ನಟಿ. ಸೃಜನ್ ಲೋಕೇಶ್, ಗಾಯತ್ರಿ ಅಯ್ಯರ್, ವಿಶಾಲ್ ಹೆಗಡೆ, ವಿಷ್ಣು, ಅಶ್ವಿನ್ ಮತ್ತು ಯುವ ಕೂಡ ನಟಿಸಿದ್ದಾರೆ.
Advertisement