ನಾಳೆ ಗಾಯಕಿ ಚಿತ್ತಾರಿಂದ ಬಾತ್ ರೂಂ ಸಿಂಗರ್ಸ್ ಆ್ಯಂಥಮ್ ಬಿಡುಗಡೆ

ಪದ ಹಾಡಲು ಸಂಗೀತ ಜ್ಞಾನವಿರಬೇಕೆಂದಿಲ್ಲ. ಸಂಗೀತವನ್ನು ಆಸ್ವಾಧಿಸುವ ಮನಸ್ಸಿದ್ದರೆ ಸಾಕು. ತಾಳ, ಲಯ, ಶೃತಿ ಇಲ್ಲದೆಯು ತಮ್ಮಷ್ಟಕ್ಕೆ ತಾವು ಹಾಡಿಕೊಳ್ಳುವ ಹವ್ಯಾಸ...
ಕೆಎಸ್ ಚಿತ್ರಾ, ಸುನೀಲ್ ಕೊಶ್ಯಾ
ಕೆಎಸ್ ಚಿತ್ರಾ, ಸುನೀಲ್ ಕೊಶ್ಯಾ
ಪದ ಹಾಡಲು ಸಂಗೀತ ಜ್ಞಾನವಿರಬೇಕೆಂದಿಲ್ಲ. ಸಂಗೀತವನ್ನು ಆಸ್ವಾಧಿಸುವ ಮನಸ್ಸಿದ್ದರೆ ಸಾಕು. ತಾಳ, ಲಯ, ಶೃತಿ ಇಲ್ಲದೆಯು ತಮ್ಮಷ್ಟಕ್ಕೆ ತಾವು ಹಾಡಿಕೊಳ್ಳುವ ಹವ್ಯಾಸ ಎಲ್ಲರಿಗೂ ಇದ್ದೆ ಇರುತ್ತದೆ. ಹೀಗೆ ಬಾತ್ ರೂಂ ಸಿಂಗರ್ಸ್ ಗಾಗಿ ವೇದಿಕೆಯೊಂದು ಸಿದ್ಧವಾಗಿದೆ. 
ಮಗ್ ಟು ಮೈಕ್ ಸ್ಥಾಪಕ ಗಾಯಕ ಸುನೀಲ್ ಕೊಶ್ಯಾ ಅವರು ಹೊಸದಾಗಿ ಬಾತ್ ರೂಂ ಸಿಂಗರ್ಸ್ ಆ್ಯಂಥಮ್ ಸಂಗೀತ ವಿಡಿಯೋವೊಂದನ್ನು ಸಂಗಡಿಗರೊಂದಿಗೆ ಸೇರಿ ಹಾಡಿದ್ದಾರೆ. ಈ ವಿಡಿಯೋವನ್ನು ಚೆನ್ನೈನಲ್ಲಿ ನಾಳೆ ಪದ್ಮಶ್ರೀ ಪುರಸ್ಕೃತೆ ಕೆ.ಎಸ್ ಚಿತ್ರಾ ಅವರು ಬಿಡುಗಡೆ ಮಾಡಲಿದ್ದಾರೆ. 
ಅಲ್ಲದೆ ಈ ವಿಡಿಯೋವನ್ನು ಮೆಚ್ಚಿರುವ ಚಿತ್ರಾ ಅವರು ತಮ್ಮ ಅಧಿಕೃತ ಯೂಟೂಬ್ ಚಾನೆಲ್ ಆದ ಆಡಿಯೋಟ್ರಾಕ್ಸ್ ನಲ್ಲಿ ಈ ವಿಡಿಯೋವನ್ನು ಅಪಲೋಡ್ ಮಾಡುತ್ತಾರಂತೆ. 
ಸುನೀಲ್ ಕೊಶ್ಯಾ ಅವರು ಬಾತ್ ರೂಂ ಗಾಯಕರಿಗೆ ವೇದಿಕೆ ನಿರ್ಮಿಸುವ ಸಲುವಾಗಿ ಮಗ್ ಟು ಮೈಕ್ ಕಾರ್ಯವನ್ನು ಕೈಗೊಂಡರು. ಇಲ್ಲಿಯವರೆಗೆ ಸುಮಾರು 3000 ಸಾವಿರ ಗಾಯಕರಿಗೆ ತರಭೇತಿ ನೀಡಿದ್ದಾರೆ. ಅಲ್ಲದೆ ಅವರಿಗೆ ಚಿತ್ರಗಳಲ್ಲಿ ಹಾಡಲು ಸಹ ಸಹಾಯ ಮಾಡುತ್ತಿದ್ದಾರೆ. ಹೀಗೆ ಕಳೆದ ಎರಡೂವರೆ ವರ್ಷದಿಂದ  ಬೆಂಗಳೂರು, ಚೆನ್ನೈ, ತ್ರಿವಂಡ್ರಮ್ ಮತ್ತು ಕೊಚ್ಚಿ 200 ಕಾರ್ಯಾಗಾರಗಳನ್ನು ನಡೆಸಿದ್ದಾರೆ. 
ಈ ಗೀತೆಗೆ ಪಿಜಿ ರಾಗೇಶ್ ಸಂಗೀತ ಸಂಯೋಜಿಸಿದ್ದು, ಅಬ್ದುಲ್ ಅಖ್ತರ್ ಸಾಹಿತ್ಯ ಬರೆದಿದ್ದಾರೆ. ಈ ವಿಡಿಯೋವನ್ನು ದೀಪಕ್ ಪೈನ್ ಚಿತ್ರಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com