
ಬೆಂಗಳೂರು: ನಿರ್ದೇಶಕ ಪವನ್ ಒಡೆಯರ್ ಮೇಲೆ ನಟಿ ಪರುಲ್ ಯಾದವ್ ಪ್ರಶಂಸೆಯ ಮಳೆಗೆರೆದಿದ್ದಾರೆ. ಕಾರಣ ನಟಿಗೆ ಪವನ್ ಒಡೆಯರ್ ನಿರ್ದೇಶಿಸಿರುವ 'ಜೆಸ್ಸಿ' ಸಿನೆಮಾ ಮೊದಲ ದೊಡ್ಡ ರೋಮ್ಯಾಂಟಿಕ್ ಸಿನೆಮಾ ಅಂತೆ. "ನಾನು ರೊಮ್ಯಾಂಟಿ ಸಿನೆಮಾಗಳ ಹುಚ್ಚು ಪ್ರೇಮಿ. ಡಿ ಡಿ ಎಲ್ ಜೆ (ದಿಲ್ವಾನೆ ದುಲ್ಹನಿಯಾ ಲೇ ಜಾಯೇಂಗೆ), ಹಮ್ ದಿಲ್ ದೇ ಚುಕೆ ಸನಮ್, ಮೈನೆ ಪ್ಯಾರ್ ಕಿಯಾ ಇಂತಹ ಸಿನೆಮಾಗಳನ್ನು ನೋಡಿ ಬೆಳೆದವಳು. ಇಂತಹ ಸಿನೆಮಾಗಳಲ್ಲಿನ ನಾಯಕಿಯ ಪಾತ್ರಗಳನ್ನು ನನಗೆ ಯಾರೂ ನೀಡುತ್ತಿಲ್ಲ ಎಂದು ಬೇಸರದಿಂದಿದ್ದೆ. ಇಂತಹ ಸಮಯದಲ್ಲಿ ಜೆಸ್ಸಿಯಲ್ಲಿ ನಟಿಸುವ ಅವಕಾಶ ಬಂತು. ನನಗೆ ಮೊದಲು ದೊಡ್ಡ ಹಿಟ್ ನೀಡಿದವರು ಪವನ್. ಗೋವಿಂದಾಯ ನಮಃದ ಮೂಲಕ" ಎನ್ನುತ್ತಾರೆ ನಟಿ.
'ಜೆಸ್ಸಿ'ಯ ಕೊನೆಯ ಹಾಡಿನ ಚಿತ್ರೀಕರಣವನ್ನು ಪರುಲ್ ಊಟಿಯಲ್ಲಿ ಇತ್ತೀಚೆಗಷ್ಟೇ ಮುಗಿಸಿದ್ದಾರೆ. "ಇಡಿ ಚಿತ್ರೀಕರಣದ ಸಮಯ ಉತ್ಸಾಹದಿಂದ ತುಂಬಿತ್ತು. ಪ್ರೇಮ ಕಥೆ, ಒಳ್ಳೆಯ ಹಾಡುಗಳಿಂದ ಕೂಡಿದ ಸಿನೆಮಾ ಇದು. ನಿರ್ದೇಶಕರ ನಿಗದಿಯಂತೆ ಚಿತ್ರೀಕರಣ ಮುಗಿದಿದೆ" ಎನ್ನುವ ನಟಿ "ನಾನು ಪವನ್ ಜೊತೆ ಜಗಳವಾಡಬೇಕಾಗಿ ಬಂತು ಏಕೆಂದರೆ ಅವರು ನನಗೆ ವಿರಮಿಸಲು ವಕಾಶ ನೀಡಲೇ ಇಲ್ಲ. ಅಲ್ಲದೆ ಈ ಮಧ್ಯೆ ವಾಸ್ತು ಪ್ರಕಾರ, ಆಟಗಾರ ಮತ್ತು ಕಿಲ್ಲಿಂಗ್ ವೀರಪ್ಪನ್ ಸಿನೆಮಾಗಳಲ್ಲಿ ಕೆಲಸ ಮಾಡುತ್ತಿದ್ದೆ. ಈಗ ಕಿಲ್ಲಿಂಗ್ ವೀರಪ್ಪನ್ ಕೂಡ ಬಿಡುಗಡೆಗೆ ಸಿದ್ಧವಿದೆ. ನನಗೆ ಇದು ಅದ್ಭುತ ವರ್ಷವಾಗಿತ್ತು " ಎನ್ನುತ್ತಾರೆ ಪರುಲ್.
Advertisement