ರಾಜಕುಮಾರ್ ಬದುಕು ಚಿತ್ರಿಸುವ ಸಂಗ್ರಹಯೋಗ್ಯ ಪುಸ್ತಕದ ತೂಕ ೧೧ ಕೆಜಿ; ೨೯ಕ್ಕೆ ಬಿಡುಗಡೆ

ವರನಟ ಡಾ. ರಾಜಕುಮಾರ್ ಅವರ ಬದುಕನ್ನು ಅಪರೂಪದ ಛಾಯಾಚಿತ್ರಗಳ ಮೂಲಕ ಸೆರೆಹಿಡಿದಿರುವ ೨ ಸಂಪುಟಗಳ ೧೧ ಕೆಜಿ ತೂಗುವ ಪುಸ್ತಕಗಳನ್ನು ಹೊತ್ತ ೩ ಟ್ರಕ್ಕುಗಳು
'ಡಾ ರಾಜಕುಮಾರ್ ಸಮಗ್ರ ಚರಿತ್ರೆ' ಪುಸ್ತಕದಿಂದ ಆಯ್ದ ಪುಟ
'ಡಾ ರಾಜಕುಮಾರ್ ಸಮಗ್ರ ಚರಿತ್ರೆ' ಪುಸ್ತಕದಿಂದ ಆಯ್ದ ಪುಟ
Updated on

ಬೆಂಗಳೂರು: ವರನಟ ಡಾ. ರಾಜಕುಮಾರ್ ಅವರ ಬದುಕನ್ನು ಅಪರೂಪದ ಛಾಯಾಚಿತ್ರಗಳ ಮೂಲಕ ಸೆರೆಹಿಡಿದಿರುವ ೨ ಸಂಪುಟಗಳ ೧೧ ಕೆಜಿ ತೂಗುವ ಪುಸ್ತಕಗಳನ್ನು ಹೊತ್ತ ೩ ಟ್ರಕ್ಕುಗಳು ಮಂಗಳವಾರ ಶಿವಕಾಶಿಯಿಂದ ಹೊರಡಲಿವೆ. ದೊಡ್ಡಹುಲ್ಲೂರು ರುಕ್ಕೋಜಿ ಅವರು ಸಂಪಾದಿಸಿರುವ 'ಡಾ ರಾಜಕುಮಾರ್ ಸಮಗ್ರ ಚರಿತ್ರೆ' ಪುಸ್ತಕವನ್ನು ಬೆಂಗಳೂರಿನ ಕೆ ಆರ್ ರಸ್ತೆಯಲ್ಲಿರುವ ಕುವೆಂಪು ಕಲಾಕ್ಷೇತ್ರದಲ್ಲಿ ಗುರುವಾರ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಬಿಡುಗಡೆ ಮಾಡಲಿದ್ದಾರೆ.

ಎರಡು ಸಂಪುಟಗಳಲ್ಲಿ ಒಟ್ಟು ೨೧೪೮ ಪುಟಗಳ ಅಪೂರ್ವ ಚಿತ್ರಗಳನ್ನು ಹೊಂದಿರುವ ಈ ಪುಸ್ತಕವನ್ನು ಸಂಪಾದಿಸಲು ರುಕ್ಕೋಜಿಯವರಿಗೆ ೧೫ ವರ್ಷ ಹಿಡಿಯಿತಂತೆ. ಇದು ಸಂಗ್ರಹಗಾರರಿಗೆ ಅಪರೂಪದ ಪುಸ್ತಕವಾಗಲಿದೆ. ಮೊದಲ ಸಂಪುಟ ರಾಜಕುಮಾರ್ ಅವರ ಜೀವನ ಮತ್ತು ಕುಟುಂಬದ ಬಗ್ಗೆ ಮಾಹಿತಿಯನ್ನು ಒಳಗೊಂಡಿದ್ದರೆ ಎರಡನೇ ಸಂಪುಟದಲ್ಲಿ ಅವರ ಚಲನಚಿತ್ರಗಳ ಮಾಹಿತಿಯಿದೆ.


"ಈ ಪುಸ್ತಕಕ್ಕಾಗಿ ನಾನು ೨೦೦೦೦ ಫೋಟೊಗಳನ್ನು ಸಂಗ್ರಹಿಸಿದ್ದೆ. ಅವುಗಳಲ್ಲಿ ೧೪೦೦೦ ಫೋಟೊಗಳನ್ನು ಸ್ಕ್ಯಾನ್ ಮಾಡಿದ್ದೆ. ಇವುಗಳಲ್ಲಿ ೮೭೦೦ ಫೋಟೊಗಳನ್ನು ಬಳಸಿಕೊಂಡಿದ್ದೇನೆ. ಮುದ್ರಕರು ೨೫೦೦ ಪ್ರತಿಗಳನ್ನು ಮುದ್ರಿಸಲು ೩೩ ಟನ್ ಕಾಗದ ಬಳಸಿದ್ದಾರೆ" ಎಂದು ವಿವರಿಸುತ್ತಾರೆ ರುಕ್ಕೋಜಿ.

ಈ ಪುಸ್ತಕ ಹೊರತರಲು ಯಾವುದೇ ಸಂಸ್ಥೆಯಿಂದ ಧನಸಹಾಯ ಬಯಸದೆ ಸ್ವ ಆಸಕ್ತಿಯಿಂದ ಹೊರತಂದಿದ್ದಾರೆ. "ಬದಲಾಗಿ ನನ್ನ ಗೆಳೆಯರು ಬಡ್ಡಿಯಿಲ್ಲದೆ ಹಣವನ್ನು ಸಾಲವಾಗಿ ನೀಡಿದ್ದಾರೆ. ನನಗೆ ಪುಸ್ತಕ ಯಾವಾಗ ಸಂಪೂರ್ಣಗೊಳ್ಳುತ್ತದೆ ಎಂಬುದರ ಬಗ್ಗೆ ಅರಿವಿರಲಿಲ್ಲ" ಎಂದು ರುಕ್ಕೋಜಿ ವಿವರಿಸುತ್ತಾರೆ.

೨೫೦೦ ಪುಸ್ತಕಗಳಲ್ಲಿ ೨೦೦ ಪ್ರತಿಗಳನ್ನು ಪುಸ್ತಕಕ್ಕೆ ಸಹಾಯ ಮಾಡಿದವರಿಗೆ ನೀಡಲಾಗುತ್ತದಂತೆ. ಉಳಿದ ಪ್ರತಿಗಳು ಮಾರಾಟಕ್ಕೆ ಲಭ್ಯವಾಗಲಿವೆ.

ಎರಡು ಸಂಪುಟಗಳ ಪುಸ್ತಕದ ಬೆಲೆ ೭೫೦೦/- ಇದ್ದು, ಪ್ರತಿಗಳಿಗಾಗಿ ೯೮೪೪೦೨೧೯೯೩ ಸಂಪರ್ಕಿಸಬೇಕಾಗಿ ಕೋರಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com