
ಬೆಂಗಳೂರು: ಕಾಲಿವುಡ್, ಬಾಲಿವುಡ್ ಸಿನೆಮಾಗಳಲ್ಲಿ ಹೆಸರು ಮಾಡಿರುವ ನಿರ್ಮಾಪಕ ರಾಕ್ಲೈನ್ ವೆಂಕಟೇಶ್ ಈಗ ಮತ್ತೆ ತವರಿಗೆ ಮರಳಿದ್ದಾರೆ. ತೆಲುಗು ಸಿನೆಮಾ 'ಭಲೇ ಭಲೇ ಮಗಾಡೀವೋಯ್' ಸಿನೆಮಾದ ಹಕ್ಕುಗಳನ್ನು ಅವರು ಖರೀದಿಸಿದ್ದು ಕನ್ನಡದಲ್ಲಿ ರಿಮೇಕ್ ಮಾಡಲು ಸಿದ್ಧವಾಗಿದ್ದಾರೆ.
ಎಲ್ಲವೂ ಸಿದ್ಧತೆಯಂತೆ ನಡೆದರೆ ನಾಣಿ ಮಾಡಿದ್ದ ಪಾತ್ರವನ್ನು ಗಣೇಶ್ ಕನ್ನಡದಲ್ಲಿ ನಟಿಸಲಿದ್ದಾರೆ. "ಹೌದು ತೆಲುಗಿನ 'ಭಲೇ ಭಲೇ ..' ಚಿತ್ರವನ್ನು ಕನ್ನಡಕ್ಕೆ ತರಲಿದ್ದೇನೆ. ಗಣೇಶ್ ಜೊತೆ ಮಾತುಕತೆ ನಡೆಯುತ್ತಿದೆ. ಎಲ್ಲವೂ ಮಾತುಕತೆ ಹಂತದಲ್ಲಿದೆ. ೧೦-೧೫ ದಿನಗಳಲ್ಲಿ ಎಲ್ಲವೂ ಅಂತಿಮಗೊಳ್ಳುತ್ತದೆ" ಎಂದಿದ್ದಾರೆ ರಾಕ್ಲೈನ್ ವೆಂಕಟೇಶ್.
ಮಾರುತಿ ದಾಸರಿ ನಿರ್ದೇಶಿಸಿದ್ದ ತೆಲುಗು ಚಿತ್ರ ಗಲ್ಲಾಪೆಟ್ಟಿಯಲ್ಲಿ ಒಳ್ಳೆಯ ಗಳಿಕೆ ಕಂಡಿತ್ತು. ಹಲವಾರು ಸಿನೆಮಾಗಳಲ್ಲಿ ನಿರತರಾಗಿರುವ ಗಣೇಶ್ ಸದ್ಯಕ್ಕೆ ಪಟಾಕಿ ಚಿತ್ರದ ಚಿತ್ರೀಕರಣ ನಡೆಸುತ್ತಿದ್ದಾರೆ. ಅಲ್ಲದೆ ಶಶಾಂಕ್ ಅವರ ಮುಂಗಾರು ಮಳೆ-೨ ರಲ್ಲು ಬ್ಯುಸಿಯಾಗಿದ್ದಾರೆ.
Advertisement