ಬೆಂಗಳೂರು: 'ಒಲವೆ ವಿಸ್ಮಯ'ದ ಬಳಿಕ ನಟ ಧರ್ಮ ಕೀರ್ತಿರಾಜ್ ಅವರ ಯಾವುದೇ ಸಿನೆಮಾಗಳು ಮೂರೂ ವರ್ಷದವರೆಗೆ ಬಿಡುಗಡೆಯಾಗಿಲ್ಲ. ಶಾಂತಿಯುತವಾಗಿ ಕಾಯುತ್ತಿದ್ದ ಯುವ ನಟ ಈಗ 'ಮಮ್ತಾಜ್' ಮೂಲಕ ಹಿಂದಿರುಗಿದ್ದಾರೆ. ಸಿನೆಮಾ ಶುಕ್ರವಾರ ಬಿಡುಗಡೆಯಾಗಲಿದೆ.
"ನನಗೆ ಸಿನೆಮಾ ವಿಷಯದ ಮೇಲೆ ಭರವಸೆ ಇದೆ ಮತ್ತು ಇದು ಕಮರ್ಷಿಯಲ್ ಲವ್ ಸ್ಟೋರಿ. ಈ ಸಿನೆಮಾದಲ್ಲಿ ನನ್ನ ನೃತ್ಯ ಮತ್ತು ಆಕ್ಷನ್ ಕೌಶಲ್ಯವನ್ನು ತೋರಿಸಲು ಸಾಧ್ಯವಾಗಿದೆ. ನನ್ನಲ್ಲಿ ಒಳ್ಳೆಯ ಬದಲಾವಣೆಯನ್ನು ಜನ ಗುರುತಿಸಲಿದ್ದಾರೆ ಎಂದು ನಂಬಿದ್ದೇನೆ" ಎನ್ನುತ್ತಾರೆ ಧರ್ಮ.
ಬೇರೆ ಸಮಯಗಳಲ್ಲಿ ನಡೆಯದಂತೆ ಈ ಬಾರಿ ಧರ್ಮ ಅವರೇ ಸ್ಕ್ರಿಪ್ಟ್ ಆಯ್ಕೆ ಮಾಡಿದ್ದಾರಂತೆ. "ದೀರ್ಘ ಕಾಲದ ನಂತರ ನನ್ನ ತಂದೆ, ನನ್ನ ವೃತ್ತಿ ಜೀವನಕ ಆಯ್ಕೆ ನೀಡಿದ್ದರು. ಆದುದರಿಂದ ಸ್ಕ್ರಿಪ್ಟ್ ಆಯ್ಕೆ ಮಾಡುವಾಗ ತಂದೆಯವರ ಜೊತೆ ನಾನೂ ಇದ್ದೆ. ಮಮ್ತಾಜ್ ಗೆಲ್ಲುವ ಎಲ್ಲ ನಿರೀಕ್ಷೆ ಇದೆ" ಎನ್ನುತ್ತಾರೆ ನಟ.
ಹಲವಾರು ವರ್ಷಗಳ ಗ್ಯಾಪ್ ನಂತರ ಶರ್ಮಿಳಾ ಮಾಂಡ್ರೆ ಕೂಡ ಸಿನೆಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದು, ದರ್ಶನ್ ಅತಿಥಿ ನಟನಾಗಿ ಕಾಣಿಸಿಕೊಳ್ಳಲಿದ್ದಾರೆ.
ರಾಘವ ಮುರಳಿ ನಿರ್ದೇಶನದ ಚಿತ್ರವನ್ನು ನರಸಿಂಹ ಮೂರ್ತಿ ಮತ್ತು ಸದಾಶಿವ ನಿರ್ಮಿಸಿದ್ದಾರೆ. ೧೯ ವರ್ಷದ ಪ್ರವೀಣ್ ಸಂಗೀತ ನೀಡಿದ್ದು ಪವನ್ ಗೀತರಚನೆ ಮಾಡಿದ್ದಾರೆ.
Advertisement