ಬಗೆಹರಿದ ಗುರು-ಶಿಷ್ಯರ ಜಗಳ; ನಾಳೆ ಸ್ಟಾರ್ ನಟರ ಕಾದಾಟ

ಸೂರಿ ನಿರ್ದೇಶನದ 'ಕೆಂಡಸಂಪಿಗೆ- ಪಾರ್ಟ್ ೨ ಗಿಣಿ ಮರಿ ಕೇಸ್' ಮತ್ತು ದುನಿಯಾ ವಿಜಯ್ ನಟನೆಯ 'ಆರ್ ಎಕ್ಸ್ ಸೂರಿ' ನಾಳೆ ಬಿಡುಗಡೆಗೆ ನಿಗದಿಯಾಗಿತ್ತು.
'ಆರ್ ಎಕ್ಸ್ ಸೂರಿ' ಸಿನೆಮಾ ಭಿತ್ತಿಚಿತ್ರ
'ಆರ್ ಎಕ್ಸ್ ಸೂರಿ' ಸಿನೆಮಾ ಭಿತ್ತಿಚಿತ್ರ

ಬೆಂಗಳೂರು: ಸೂರಿ ನಿರ್ದೇಶನದ 'ಕೆಂಡಸಂಪಿಗೆ- ಪಾರ್ಟ್ ೨ ಗಿಣಿ ಮರಿ ಕೇಸ್' ಮತ್ತು ದುನಿಯಾ ವಿಜಯ್ ನಟನೆಯ 'ಆರ್ ಎಕ್ಸ್ ಸೂರಿ' ನಾಳೆ ಬಿಡುಗಡೆಗೆ ನಿಗದಿಯಾಗಿತ್ತು. ಆದರೆ ಹೇಳಿಕೇಳಿ ಸೂರಿ, ವಿಜಯ್ ಅವರ ಗುರು. ಆದುದರಿಂದ ಈ ಸ್ಪರ್ಧೆಗೆ ಗುರುಗಳೇ ಬ್ರೇಕ್ ಹಾಕಿದ್ದು, ಕೆಂಡಸಂಪಿಗೆ ಬಿಡುಗಡೆಯನ್ನು ಮುಂದೆಹಾಕಿದ್ದಾರೆ.

ಆದರೆ ನಾಳೆ ಬಿಡುಗಡೆಯಾಗಲಿರುವ ಆರ್ ಎಕ್ಸ್ ಸೂರಿ ಸಿನೆಮಾದಲ್ಲಿ ರೀಲ್ ಲೈಫ್ ಫೈಟ್ ಜೋರಾಗಿದೆ ಎನ್ನಲಾಗಿದೆ. ಈ ಫೈಟ್ ಇರುವುದು ವಿಜಯ್ ಮತ್ತು ರವಿ ಶಂಕರ್ ನಡುವೆ. "ರವಿಶಕಂಕರ್ ಅವರ ಧ್ವನಿ ಅದ್ಭುತ. ಅವರು ಬಹಳ ಒಳ್ಳೆಯ ನಟ" ಎನ್ನುತ್ತಾರೆ ವಿಜಯ್.

ಮತ್ತೆ ಭೂಗತ ವಿಷಯವನ್ನೇ ಆಯ್ಕೆ ಮಾಡಿಕೊಂಡಿರುವುದರ ಬಗ್ಗೆ ಪ್ರತಿಕ್ರಿಯಿಸುವ ವಿಜಯ್ "ದೆವ್ವ ನಡೆದ ದಾರಿಯಲ್ಲೆಲ್ಲಾ ಒಳ್ಳೆಯದಕ್ಕೆ ಕಿಟಕಿ ತೆರೆದುಕೊಂಡಿರುತ್ತದೆ. ಈ ಒಳ್ಳೆಯ ಕಿಟಕಿ ಕಾಣಿಸುವವರೆಗೆ ಈ ದೆವ್ವದ ಪ್ರಯಾಣವನ್ನು ಚಿತ್ರ ಸೆರೆಹಿಡಿದೆ" ಎಂದು ತಾತ್ವಿಕವಾಗಿ ಉತ್ತರಿಸುತ್ತಾರೆ ವಿಜಯ್.

ತಮ್ಮ ಗಟ್ಟಿ ಪಾತ್ರ ಮತ್ತು ಉತ್ತಮ ಚಿತ್ರಕಥೆಯ ಬಗ್ಗೆ ಪ್ರತಿಕ್ರಿಯಿಸುವ ರವಿ ಶಂಕರ್ "ನಿರ್ದೇಶಕ ಶ್ರೀ ಜೈ ಒಳ್ಳೆಯ ಚಿತ್ರ ಕಥೆ ಬರೆದಿದ್ದಾರೆ. ವಿಜಯ್ ಒಳ್ಳೆಯ ಆಕ್ಷನ್ ದೃಶ್ಯಗಳನ್ನು ಮಾಡಿದ್ದಾರೆ. ನಾನು ಕೂಡ ಆಕ್ಷನ್ ದೃಶ್ಯಗಳಿಗೆ ಹೆಸರುವಾಸಿ, ನಮ್ಮ ಜೋಡಿ ಚೆನ್ನಾಗಿ ಕೆಲಸ ಮಾಡಿದೆ. ಇಲ್ಲಿ ಎರಡು ಅಧಿಕಾರ ಕೇಂದ್ರಗಳು ಗುದ್ದಾಡಲಿವೆ" ಎನ್ನುತ್ತಾರೆ.

ಆಕಾಂಕ್ಷಾ ನಾಯಕ ನಟಿ. ಅರ್ಜುನ್ ಜನ್ಯ ಸಿನೆಮಾಗೆ ಸಂಗೀತ ನೀಡಿದ್ದು, ಎಚ್ ಸಿ ವೇಣು ಸಿನೆಮ್ಯಾಟೋಗ್ರಾಫರ್.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com