ಕನ್ನಡದ ಮೊದಲ ಸಲಿಂಗಕಾಮ ಚಲನಚಿತ್ರ ಶುಕ್ರವಾರ ತೆರೆಗೆ

ಒಂದೂವರೆ ವರ್ಷದಿಂದ ಸೆನ್ಸಾರ್ ಮಂಡಲಿ ತಡೆ ಹಿಡಿದಿದ್ದ ಸಲಿಂಗಕಾಮ ವಿಷಯಾಧಾರಿತ ಚಿತ್ರಕ್ಕೆ ಕೊನೆಗೂ ಮುಕ್ತಿ ದೊರಕಿದ್ದು, ಪರಿಶೀಲನ ಮಂಡಲಿ 'ಎ' ಪ್ರಮಾಣಪತ್ರ
'೧೪೧ ಐ ಲವ್ ಯು' ಸಿನೆಮಾದ ಸ್ಟಿಲ್
'೧೪೧ ಐ ಲವ್ ಯು' ಸಿನೆಮಾದ ಸ್ಟಿಲ್

ಬೆಂಗಳೂರು: ಒಂದೂವರೆ ವರ್ಷದಿಂದ ಸೆನ್ಸಾರ್ ಮಂಡಲಿ ತಡೆ ಹಿಡಿದಿದ್ದ ಸಲಿಂಗಕಾಮ ವಿಷಯಾಧಾರಿತ ಚಿತ್ರಕ್ಕೆ ಕೊನೆಗೂ ಮುಕ್ತಿ ದೊರಕಿದ್ದು, ಪರಿಶೀಲನ ಮಂಡಲಿ 'ಎ' ಪ್ರಮಾಣಪತ್ರ ನೀಡುವುದರೊಂದಿಗೆ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ.

ಲೆಸ್ಬಿಯನ್ ಸಂಗಾತಿಗಳನ್ನು ತೋರಿಸಿರುವ '೧೪೧ ಐ ಲವ್ ಯು' ಸಿನೆಮಾ ತೆಲುಗು ತಮಿಳು ಭಾಷೆಗಳಿಗೂ ಡಬ್ ಆಗಿದ್ದು, ಆಂಧ್ರ, ತೆಲಂಗಾಣ ಮತ್ತು ತಮಿಳುನಾಡಿನಾದ್ಯಂತ ಸೆಪ್ಟಂಬರ್ ೧೮ ರಂದು ಬಿಡುಗಡೆ ಕಾಣಲಿದೆ. ಆದರೆ ಮೂಲ ಕನ್ನಡ ಅವತರಿಣಿಕೆ ಸೆಪ್ಟಂಬರ್ ೧೧ ರಂದು ಬಿಡುಗಡೆಯಾಗಲಿವೆ.

ಇದೊಂದು ಸವಾಲಾಗಿತ್ತು ಎನ್ನುವ ನಿರ್ದೇಶಕ ಭಾವಾಜಿ ವಿ, ಬೇರೆಲ್ಲೆಡೆ ಒಪ್ಪಿತವಾಗಿರುವ ವಿಷಯವನ್ನು ನಮ್ಮ ಸಮಾಜ ಹಾಗು ಸರ್ಕಾರ ತಿರಸ್ಕರಿಸಿರುವುದನ್ನು, ವಿರೋಧಿಸುತ್ತಿರುವುದನ್ನು ಬಯಲಿಗೆಳೆಯಲಿದ್ದೇನೆ ಎನ್ನುತ್ತಾರೆ.

ಸೆನ್ಸಾರ್ ಮಂಡಲಿ ಸಿನೆಮಾಗೆ 'ಎ' ಪ್ರಮಾಣ ಪತ್ರ ನೀಡಿದ್ದರೂ, ಸಿನೆಮಾದಲ್ಲಿ ಯಾವುದೇ ಅಶ್ಲೀಲ ದೃಶ್ಯಗಳಿಲ್ಲ ಎನ್ನುತ್ತಾರೆ ನಿರ್ದೇಶಕ. ರಶಿಯಾದ ತಾನ್ಯಾ ಮತ್ತು ಕಾವ್ಯ ಸಿನೆಮಾದ ನಾಯಕ ನಟಿಯರು ಹಾಗು ಹೈದರಾಬಾದ್ ಮೂಲದ ಫಾರುಕ್ ಖಾನ್ ಮುಖ್ಯ ಪಾತ್ರ ನಿರ್ವಹಿಸಿದ್ದಾರೆ.

ಬೆಂಗಳೂರು, ಮಂಗಳೂರು, ಶಿವಮೊಗ್ಗ, ಉಡುಪಿ ಮತ್ತು ಹೈದಾರಾಬಾದ್ ನಗರಗಳಲ್ಲಿ ೩೦ ದಿನಗಳ ಕಾಲ ಚಿತ್ರೀಕರಣ ಮಾಡಿದ್ದೇನೆ ಎನ್ನುತ್ತಾರೆ ನಿರ್ದೇಶಕ. ಎ ಆರ್ ರೆಹಮಾನ್ ಅವರ ಗರಡಿಯಲ್ಲಿ ಪಳಗಿರುವ ಪ್ರವೀಣ್ ಆಲಿವರ್ ಸಿನೆಮಾಗೆ ಸಂಗೀತ ನೀಡಿದ್ದಾರೆ.

ಸಿನೆಮಾಗೆ ಯಾರಾದರೂ ಅಡ್ಡಿಪಡಿಸಿದರೆ ಪೊಲೀಸರ ರಕ್ಷಣೆ ಕೋರುವುದಾಗಿ ಕೂಡ ಭಾವಾಜಿ ಹೇಳಿದ್ದಾರೆ.  

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com