
ನಿರ್ದೇಶಕ ರಾಮಗೋಪಾಲ ವರ್ಮ, ಇತರ ಚಿತ್ರ ನಿರ್ದೇಶಕರು, ನಟರನ್ನು ಸಾಮಾಜಿಕ ಜಾಲತಾಣಗಳಲ್ಲಿ ಚೇಡಿಸುವುದು ಸಾಮಾನ್ಯ. ಕೆಲ ತಿಂಗಳ ಹಿಂದೆಯಷ್ಟೇ ತಮ್ಮ ಹಳೆಯ ಗೆಳೆಯ ಅನುರಾಗ್ ಕಶ್ಯಪ್ ಅವರನ್ನು 'ಬಾಂಬೆ ವೆಲ್ವೆಟ್' ಬಿಡುಗಡೆಯ ನಂತರ ಛೇಡಿಸಿ ಇಬ್ಬರೂ ಟ್ವಿಟ್ಟರ್ ನಲ್ಲಿ ಮಾತಿನ ಕಾಳಗ ನಡೆಸಿ ತಮ್ಮ ಅಭಿಮಾನಿಗಳಿಗೆ ಮನರಂಜನೆ ನೀಡಿದ್ದರು.
ಆದರೆ ಇತ್ತೀಚೆಗೆ ಬಾಹುಬಲಿ ನಿರ್ದೇಶಕ ಎಸ್ ಎಸ್ ರಾಜಮೌಳಿ ಅವರನ್ನು ಹಾಲಿವುಡ್ ನಿರ್ದೇಶಕ ಸ್ಟೀವನ್ ಸ್ಪಿಲ್ಬರ್ಗ್ ಅವರಿಗೆ ಹೋಲಿಸಿ, ಹೊಗಳಿ ಎಲ್ಲರು ಆಶ್ಚರ್ಯಚಕಿತರಾಗಲು ಕಾರಣರಾಗಿದ್ದಾರೆ ಆರ್ ಜಿ ವಿ.
"ಈಗಷ್ಟೇ ನನಗೆ ತಿಳಿಯಿತು, ಎಸ್ ಎಸ್ ರಾಜಮೌಳಿಯಲ್ಲಿ ಎಸ್ ಎಸ್ ಎಂದರೆ ಸ್ಟೀವನ್ ಸ್ಪಿಲ್ಬರ್ಗ್" ಎಂದು ಆರ್ ಜಿ ವಿ ಟ್ವೀಟ್ ಮಾಡಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ರಾಜಮೌಳಿ "ಇದು ಸಾರ್ವಜನಿಕರ ಲೇವಡಿಯನ್ನು ಆಹ್ವಾನಿಸುತ್ತದೆ. ಇದು ಬೇಕಿತ್ತಾ ಗುರುಗಳೇ?" ಎಂದಿದ್ದಾರೆ.
ಕೊನೆಯ ಮಾತು ವರ್ಮಾ ಅವರದ್ದೇ ಆಗಿದ್ದು "ಎಲ್ಲೆ ಮೀರಿದ ವಿನಯ, ಧೂರ್ತತೆಯನ್ನು ಮೀರಿಸುತ್ತದೆ ಸರ್" ಎಂದು ಟ್ವೀಟ್ ಮಾಡಿದ್ದಾರೆ.
Advertisement