ಅಂಕಣದಲ್ಲಿ ಅಂಡರ್‍ಟೇಕರ್

ಅಂಡರ್‍ಟೇಕರ್! ಆ ಹೆಸರು ಹೇಳಿದರೆ ಜಗತ್ತಿನ ಘಟಾನುಘಟಿ ರೆಸ್ಲರ್ ಗಳು ಬೆಚ್ಚಿ ಬೀಳುತ್ತಾರೆ. ಸತತ ಮೂವತ್ತು ವರ್ಷಗಳಿಂದ...
ಅಂಡರ್ ಟೇಕರ್ (ಸಂಗ್ರಹ ಚಿತ್ರ)
ಅಂಡರ್ ಟೇಕರ್ (ಸಂಗ್ರಹ ಚಿತ್ರ)

ಅಂಡರ್‍ಟೇಕರ್! ಆ ಹೆಸರು ಹೇಳಿದರೆ ಜಗತ್ತಿನ ಘಟಾನುಘಟಿ ರೆಸ್ಲರ್ ಗಳು ಬೆಚ್ಚಿ ಬೀಳುತ್ತಾರೆ. ಸತತ ಮೂವತ್ತು ವರ್ಷಗಳಿಂದ ಡಬ್ಲ್ಯುಡಬ್ಲ್ಯುಇ ಕಣದಲ್ಲಿ ಹೋರಾಡುತ್ತ ಹಲವರನ್ನು ಅಕ್ಷರಶಃ ಮಣ್ಣು ಮುಕ್ಕಿಸಿದವನು ಈತ. ಈತ ಮುಂದಿನ ಪಂದ್ಯದ ಬಳಿಕ ಕ್ರೀಡೆಗೆ ಬೈ ಹೇಳುತ್ತಾನೆ ಎಂಬುದು ಸದ್ಯದ ಸುದ್ದಿ.

ಕಳೆದ ವರ್ಷ ಈತ ಸತ್ತೇ ಹೋಗಿದ್ದಾನೆ ಎಂದು ಸುದ್ದಿಯಾಗಿತ್ತು. ಆದರೆ ಈತ ಸತ್ತಿಲ್ಲ, ಬದುಕಿದ್ದಾನೆ ಎಂದು ಇವನ ಹೆಂಡತಿ ಘೋಷಿಸಿದ್ದಳು. ಅದಕ್ಕೂ ಮೊದಲೇ ಈತ `ಡೆಡ್ ಮ್ಯಾನ್' ಎಂಬಿತ್ಯಾದಿ ಹೆಸರುಗಳಲ್ಲಿ ಕರೆಸಿಕೊಂಡಿದ್ದ. ಅಲ್ಲಿಗೆ ಇವನ ಕೆರಿಯರ್ ಮುಗಿಯಿತು ಎಂದೇ ತಿಳಿಯಲಾಗಿತ್ತು. ಆದರೆ ಈತ ಮಣ್ಣಿನಿಂದೆದ್ದು ಬಂದಿದ್ದಾನೆ. ಮೂರು ವರ್ಷಗಳಿಂದ ಈತ ಬ್ರೋಕ್ ಲೆಸ್ನರ್ ಎಂಬ ಇನ್ನೊಬ್ಬ ಜಗಜಟ್ಟಿಯನ್ನು ಎದುರಿಸುತ್ತಿದ್ದಾನೆ. ಒಂದು ಬಾರಿ
ಸೋಲಿಸಿದ್ದಾನೆ, ಇನ್ನೊಂದು ಪಂದ್ಯದ ಅಂತ್ಯ ವಿವಾದಾಸ್ಪದವಾಗಿದೆ.ಮೂರನೆಯದು ನಿರ್ಣಾಯಕವಾದ್ದು ಎಂದು ಘೋಷಿತವಾಗಿದೆ.

ಮುಂದಿನ ವರ್ಷ ಡಲ್ಲಾಸ್‍ನಲ್ಲಿ ನಡೆಯಲಿರುವ ಈ `ರೆಸ್ ಮ್ಲೇನಿಯಾ 32' ಪಂದ್ಯಕ್ಕೆ ದುಬಾರಿ ಶುಲ್ಕ ಕೊಟ್ಟು ಒಂದು ಲಕ್ಷ ನೋಡುಗರು ಜಮಾಯಿಸಲಿದ್ದಾರೆ.ಡಬ್ಲ್ಯುಡಬ್ಲ್ಯುಇ ಹೇಳಿ ಕೇಳಿ ರಾಕ್ಷಸ ಕ್ರೀಡೆ. ಇದರಲ್ಲಿ ಭಾಗವಹಿಸುವವರೂ ಹಾಗೇ ಇರಬೇಕಾದ್ದು ಅಗತ್ಯ. ಅದಕ್ಕೆ ತಕ್ಕಂತೆ ಮೈ ಬೆಳೆಸಿ ಮದ್ದಾನೆಗಳಂತೆ ಗುದ್ದಾಡುವ ಈ ಟಗರುಗಳ ಬಾಡಿಗಳು ಟಿವಿ ಸ್ಕ್ರೀನ್‍ನಲ್ಲೂ ಹಿಡಿಸುವುದಿಲ್ಲ. ಇಂಥವರನ್ನು ನೋಡಿ ಅಭ್ಯಾಸವಾಗಿಹೋಗಿದ್ದ ಈ ಕ್ರೀಡೆಯ ನೋಡುಗರೂ
ಕೂಡ ಈ ಅಂಡರ್‍ಟೇಕರ್ ಮೊದಲ ಬಾರಿಗೆ ಸ್ಟೇಜ್‍ಗೆ ಕಾಲಿಟ್ಟಾಗ ಬೆಚ್ಚಿದ್ದರು. ಹ್ಯೂಸ್ಟನ್‍ನಲ್ಲಿ ಹುಟ್ಟಿದ ಈತನ ನಿಜವಾದ ಹೆಸರು ಮಾರ್ಕ್ ಕ್ಯಾಲಾವೇ. ಮೂರ್ನಾಲ್ಕು ಹೆಂಡತಿಯರನ್ನು ಮಾಡಿಕೊಂಡು, ಹತ್ತಾರು ವಿಶ್ವ ಚಾಂಪಿಯನ್‍ಶಿಪ್‍ಗಳನ್ನು ಗೆದ್ದುಕೊಂಡು, ನಾಲ್ಕಾರು
ಬಾರಿ ಮಾರಣಾಂತಿಕ ಪೆಟ್ಟು ತಿಂದು ಸರ್ಜರಿಗಳನ್ನು ಮಾಡಿಸಿಕೊಂಡವನೀತ. ಕಪ್ಪುಕರಾಳ ವಾಮಾಚಾರದ, ದೆವ್ವಗಳ ಜಗತ್ತಿನಿಂದ ಎದ್ದು ಬಂದಂತಿರುವ ಪೋಷಾಕು, ವರ್ತನೆಗಳು ರಿಂಗ್‍ನಲ್ಲಿ ಈತನ ವೈಶಿಷ್ಟ್ಯ. ಇಪ್ಪತ್ತೈದು ವರ್ಷಗಳಿಂದ ಬಾಕ್ಸಿಂಗ್ ರಿಂಗ್‍ನಲ್ಲಿ ಸೆಣಸಾಡುತ್ತ ಬಂದಿರುವ ಈತನಿಗೆ ಈತನದೇ ಅಭಿಮಾನಿಗಳಿದ್ದಾರೆ. ಅಂಡರ್‍ಟೇಕರ್ ನ ನಿವೃತ್ತಿ ಅವರ ಕಣ್ಣಿನಲ್ಲಿ ನೀರು ಜಿನುಗಿಸಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com