
ಮುಂಬೈ: ತೆರೆ ಕಾಣಲು ಸಿದ್ಧವಿರುವ ಲವ್ ಯು ಆಲಿಯಾ ಸಿನಿಮಾದಲ್ಲಿ ನಟಿಸಿರುವ ಸನ್ನಿ ಲಿಯೋನ್ ಅದ್ಭುತವಾದ ಕಾರ್ಯನೀತಿ ಹೊಂದಿದ್ದಾರೆ ಎಂದು ಚಿತ್ರ ನಿರ್ದೇಶಕ ಇಂದ್ರಜಿತ್ ಲಂಕೇಶ್ ಹೇಳಿದ್ದಾರೆ.
ಬದ್ಧತೆ ಹೊಂದಿರುವ ಸನ್ನಿಲಿಯೋನ್ ಅವರೊಂದಿಗೆ ಕೆಲಸ ಮಾಡಿರುವುದು ಸಂತಸ ಉಂಟುಮಾಡಿದೆ. 'ಕಾಮಾಕ್ಷಿ' ಎಂಬ ಹಾಡಿಗೆ ಪ್ರಾರಂಭದಲ್ಲಿ 4 ಬದಲಾವಣೆಗಳನ್ನು ಮಾಡಲು ನಿರ್ಧರಿಸಿದ್ದೆವು. ಆದರೆ ಸನ್ನಿ ಲಿಯೋನ್ ಅವರೊಂದಿಗೆ ಕೆಲಸ ಮಾಡುತ್ತಾ, ನಿಗದಿಗಿಂತಲೂ ವೇಗವಾಗಿ ಚಿತ್ರೀಕರಣ ಮುಕ್ತಾಯಗೊಳ್ಳುತ್ತಿತ್ತು ಎಂದಿದ್ದಾರೆ ಇಂದ್ರಜಿತ್ ಲಂಕೇಶ್. ಚಿತ್ರೀಣದಲ್ಲಿ ಸಹಕರಿಸುವುದರೊಂದಿಗೆ ಸನ್ನಿ ಲಿಯೋನ್ ಕೆಲ ಸಲಹೆಗಳನ್ನು ನೀಡುತ್ತಿದ್ದರು. ಇದರಿಂದಾಗಿ ಚಿತ್ರೀಕರಣ ಬೇಗ ಮುಗಿಸಲು ಸಹಕಾರಿಯಾಯಿತು ಎಂದು ಲಂಕೇಶ್ ಹೇಳಿದ್ದಾರೆ. ಲವ್ ಯು ಆಲಿಯಾ ಸೆ.18 ರಂದು ತೆರೆಕಾಣಲಿದ್ದು, ಹಿಂದಿ ಯಲ್ಲೂ ಡಬ್ ಆಗಿದ್ದು ದೇಶಾದ್ಯಂತ ತೆರೆಕಾಣಲಿದೆ.
Advertisement