ಆಸ್ಕರ್ ನಾಮಾಂಕಿತ ರೇಸ್ ನಲ್ಲಿ 'ಬಾಹುಬಲಿ', 'ಭಜರಂಗಿ ಭಾಯಿಜಾನ್' ಮುಂಚೂಣಿ

೮೮ ಅಕಾಡೆಮಿ ಪ್ರಶಸ್ತಿಗಳ ಜ್ವರ ದಿನದಿಂದ ದಿನಕ್ಕೆ ಏರುತ್ತಿದೆ, ಆದರೆ ಭಾರತ ಇನ್ನು ಈ ಸ್ಪರ್ಧೆಗೆ ಸಿನೆಮಾಗಳನ್ನು ಕಳುಹಿಸಬೇಕಿದೆ. ಕಳೆದ ಎರಡು ವರ್ಷಗಳಂತೆ ವಿಮರ್ಶಕರ
ಬಾಹುಬಲಿ ಸಿನೆಮಾದ ಸ್ಟಿಲ್
ಬಾಹುಬಲಿ ಸಿನೆಮಾದ ಸ್ಟಿಲ್

ಕರಾಚಿ: ೮೮ ಅಕಾಡೆಮಿ ಪ್ರಶಸ್ತಿಗಳ ಜ್ವರ ದಿನದಿಂದ ದಿನಕ್ಕೆ ಏರುತ್ತಿದೆ, ಆದರೆ ಭಾರತ ಇನ್ನು ಈ ಸ್ಪರ್ಧೆಗೆ ಸಿನೆಮಾಗಳನ್ನು ಕಳುಹಿಸಬೇಕಿದೆ. ಕಳೆದ ಎರಡು ವರ್ಷಗಳಂತೆ ವಿಮರ್ಶಕರ ಮೆಚ್ಚುಗೆ ಗಳುಹಿಸಿದ ಸಿನೆಮಾಗಳನ್ನು ಇದಕ್ಕೆ ಆಯ್ಕೆ ಮಾಡಲಿದೆಯೇ ಅಥವಾ ಬ್ಲಾಕ್ಬಸ್ಟರ್ ಸಿನೆಮಾಗಳನ್ನು ಸ್ಪರ್ಧೆಗೆ ಕಳುಹಿಸಲಿದೆಯೇ ಎಂಬ ಕುತೂಹಲ ಎಲ್ಲರಿಗೂ ಕಾಡುತ್ತಿದೆ.

ಅತಿ ಹೆಚ್ಚು ಬಜೆಟ್ ನಲ್ಲಿ ನಿರ್ಮಾಣಗೊಂಡಿರುವ ತೆಲುಗು ಸಿನೆಮಾ 'ಬಾಹುಬಲಿ' ಈ ರೇಸ್ ನಲ್ಲಿ ಮುಂದಿದೆ ಎನ್ನಲಾಗಿದೆ. ಇದರ ಜೊತೆಗೆ 'ಭಜರಂಗಿ ಭಾಯಿಜಾನ್', 'ಪಿಕು', 'ಪಿಕೆ' ಮತ್ತು 'ಹೈದರ್' ಸಿನೆಮಾಗಳು ಕೂಡ ಸ್ಪರ್ಧೆಯೊಡ್ಡಿವೆ ಎಂದು ಪಾಕಿಸ್ತಾನದ ದಿನಪತ್ರಿಕೆ ಡಾನ್ ವರದಿ ಮಾಡಿದೆ.

ಅಲ್ಲದೆ ತಮಿಳು ಸಿನೆಮಾ 'ಕುತ್ತ್ರಂ ಕಾಧಿತ್ತಲ್' ವಿಮರ್ಶಕರ ಮೆಚ್ಚುಗೆಗೆ ಪಾತ್ರವಾಗಿರುವ ಸಿನೆಮಾ ಆಗಿದ್ದು ಅಲ್ಲದೆ ಕೆಲವು ಬೆಂಗಾಲಿ ಸಿನೆಮಾಗಳು ಕೂಡ ರೇಸ್ ನಲ್ಲಿವೆ ಎನ್ನಲಾಗಿದೆ.

ಭಾರತಿಯ ಸಿನೆಮಾಗಳ ಆಸ್ಕರ್ ನಾಮಾಂಕಿತ ಪಟ್ಟಿ ಬುಧವಾರ ಅಥವಾ ಗುರುವಾರ ಹೊರಬೀಳಲಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com