'ಅರ್ಜುನ'ನಿಗೆ ಮಾಡು ಇಲ್ಲವೇ ಮಡಿ ಯುದ್ಧ!

ಚಿತ್ರ ನಟ ಪ್ರಜ್ವಲ್ ದೇವರಾಜ್ ಅವರಿಗೆ ಬಹಳ ಪ್ರಮುಖವಾದ ಸಿನೆಮಾ 'ಅರ್ಜುನ' ಶುಕ್ರವಾರ ತೆರೆ ಕಾಣಲಿದೆ. ಈಗಾಗಲೇ ಐದು ಸಿನೆಮಾಗಳನ್ನು ನಿರ್ದೇಶಿಸಿರುವ ಪಿ ಸಿ ಶೇಖರ್ ಆಕ್ಷನ್ ಕಟ್ ಹೇಳಿರುವ
ಅರ್ಜುನ ಸಿನೆಮಾದ ಸ್ಟಿಲ್
ಅರ್ಜುನ ಸಿನೆಮಾದ ಸ್ಟಿಲ್

ಬೆಂಗಳೂರು: ಚಿತ್ರ ನಟ ಪ್ರಜ್ವಲ್ ದೇವರಾಜ್ ಅವರಿಗೆ ಬಹಳ ಪ್ರಮುಖವಾದ ಸಿನೆಮಾ 'ಅರ್ಜುನ' ಶುಕ್ರವಾರ ತೆರೆ ಕಾಣಲಿದೆ. ಈಗಾಗಲೇ ಐದು ಸಿನೆಮಾಗಳನ್ನು ನಿರ್ದೇಶಿಸಿರುವ ಪಿ ಸಿ ಶೇಖರ್ ಆಕ್ಷನ್ ಕಟ್ ಹೇಳಿರುವ ಈ ಸಿನೆಮಾ, ಅಷ್ಟೇನೂ ಯಶಸ್ಸು ಕಾಣದ ನಟನಿಗೆ ಒಳ್ಳೆಯ ಭಾಗ್ಯ ತಂದುಕೊಡಲಿದೆಯೇ?

ಅಪ್ಪ ದೇವರಾಜ್ ಮತ್ತು ಮಗ ಪ್ರಜ್ವಲ್ ಇಬ್ಬರನ್ನೂ ಈ ಸಿನೆಮಾಗೆ ತೊಡಗಿಸಿಕೊಂಡಿರುವ ಶೇಖರ್ "ನಾವು ಸಂಪ್ರದಾಯವನ್ನು ಮುರಿದು ಸಿನೆಮಾ ಮಾಡಿದ್ದೇವೆ. ಪ್ರಜ್ವಲ್ ಅವರನ್ನು ಸಿನೆಮಾದಲ್ಲಿ ಪರಿಚಯಿಸಲು ಹಾಡುಗಳಿಲ್ಲ. ಆಡಿಯೋ ಹಕ್ಕುಗಳನ್ನು ಪಡೆಯಲು ಕೂಡ ಹೆಚ್ಚು ಹಾಡುಗಳು ಸಿನೆಮಾದಲ್ಲಿ ಇಲ್ಲ. ಈ ಸಿನೆಮಾದಲ್ಲಿ ಹಿರೋಯಿಸಂ ಇಲ್ಲ ಆದರೆ ನೈಜತೆಯಿದೆ. ಕನ್ನಡ ಸಂಸ್ಕೃತಿಯ ಸೊಗಡಿದೆ. ಎಲ್ಲ ನಟ ಮತ್ತು ತಾಂತ್ರಿಗ ವರ್ಗದ ಕಾರ್ಯದಕ್ಷತೆ ಇದೆ" ಎನ್ನುತ್ತಾರೆ.

ಚಿತ್ರೀಕರಣಕ್ಕೆ ಜಾಗವನ್ನು ಹುಡುಕಲು ತಿಂಗಳುಗಟ್ಟಲೆ ಹಿಡಿದಿದ್ದನ್ನು ವಿವರಿಸುವ ನಿರ್ದೇಶಕ "ಚಿತ್ರೀಕರಣಕ್ಕೂ ಮುಂಚಿತವಾಗಿ ನಾವು ಆರು ತಿಂಗಳ ಕಾಲ ಕೆಲಸ ಮಾಡಿದ್ದೇವೆ. ಚಿತ್ರೀಕರಣಕ್ಕೆ ಒಂದೂವರೆ ತಿಂಗಳು ಮತ್ತು ಚಿತ್ರೀಕರಣದ ನಂತರದ ಕೆಲಸಗಳಿಗೆ ೮ ತಿಂಗಳ ಸಮಯ ಹಿಡಿಯಿತು. ಒಂದು ಸಮಯದಲ್ಲಿ ಐದು ಕಥೆಗಳು ಓಡುತ್ತಿರುತ್ತವೆ ಎಲ್ಲವನ್ನೂ ಸಮಾನಾಂತರವಾಗಿ ಸಂಕಲನ ಮಾಡಲಾಗಿದೆ" ಎನ್ನುತ್ತಾರೆ ಶೇಖರ್.

ಕನ್ನಡ ಚಿತ್ರರಂಗದಲ್ಲಿ ತಳವೂರಿರುವ ಹಾಗೂ ತಮಿಳಿನಲ್ಲೂ ಒಂದು ಸಿನೆಮಾ ನಿರ್ದೇಶಿಸಿರುವ ಶೇಖರ್ "ಪ್ರತಿ ದಶಕದಲ್ಲಿ ತಮಿಳು ಚಿತ್ರರಂಗವನ್ನು ಕನ್ನಡದ ನಟರು ಆಳಿದ್ದಾರೆ. ಉದಾಹರಣೆಗೆ ಜಯಲಲಿತ, ರಜನಿಕಾಂತ್, ಪ್ರಕಾಶ್ ರಾಜ್ ಇತ್ಯಾದಿ" ಎನ್ನುತ್ತಾರೆ.

ಸಿನೆಮಾ ಸುಮಾರು ೨೦೦ ಚಿತ್ರಮಂದಿರಗಳಲ್ಲಿ ಶುಕ್ರವಾರ ಬಿಡುಗಡೆಯಾಗಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com