
ಬೆಂಗಳೂರು: ಕನ್ನಡ ಚಿತ್ರೋದ್ಯಮದಲ್ಲಿ ಅಂಬೆಗಾಲಿಡುತ್ತಿರುವ ಶರತ್ ಚಂದ್ರು ಇತ್ತೀಚೆಗಷ್ಟೇ ಸುದೀಪ್ ಅವರ ರಿಮೇಕ್ ಚಿತ್ರ 'ರನ್ನ'ದಲ್ಲಿ ತಮ್ಮ ಚೊಚ್ಚಲ ಪಾತ್ರದಲ್ಲಿ ಖಳ ನಾಯಕನ ಪಾತ್ರವನ್ನು ನಿರ್ವಹಿಸಿದ್ದರು. ಇದನ್ನು ಗುರುತಿಸಿರುವ ಕನ್ನಡ ಚಿತ್ರರಂಗ ನಟನಿಗೆ ಖಳನಾಯಕನ ಪಾತ್ರಗಳ ಅವಕಾಶದ ಮಹಾಪೂರವನ್ನೇ ಹರಿಸಿದೆ. ಸದ್ಯಕ್ಕೆ ೩ ಚಿತ್ರಗಳಲ್ಲಿ ಖಳನಾಯಕನ ಪಾತ್ರವನ್ನು ಶರತ್ ಒಪ್ಪಿಕೊಂಡಿದ್ದಾರೆ.
ಮೊದಲಿಗೆ ಓಂ ಪ್ರಕಾಶ್ ರಾವ್ ನಿರ್ದೇಶನದ, ಧನಂಜಯ್ ನಟಿಸಿರುವ 'ಹೀರೋ' ಚಿತ್ರದಲ್ಲಿ ನಟಿಸುತ್ತಿದ್ದಾರೆ, ನಂತರ ವೆಂಕಟೇಶ್ ಆಚಾರ್ಯ ಅವರ ಸರ್ವಂ ನಲ್ಲಿ ಹಾಗೂ ಇನ್ನು ಹೆಸರಿಡದ ಚಿತ್ರವೊಂದರಲ್ಲಿ ಖಳನಾಯಕನಾಗಿ ನಟಿಸುತ್ತಿದ್ದಾರೆ,
ಖಳ ನಾಯಕನ ಪಾತ್ರಗಳ ಆಯ್ಕೆಯ ಬಗ್ಗೆ ಅವರನ್ನು ಪ್ರಶ್ನಿಸಿದರೆ "ಚಿತ್ರರಂಗಕ್ಕೆ ಬರಲಿಚ್ಚಿಸುವ ಪ್ರತಿ ಯುವಕನಿಗೂ 'ಹೀರೋ' ಪಾತ್ರವೇ ಸಿಗಬೇಕೆನ್ನುವುದು ಸರಿಯಲ್ಲಿ. ಪ್ರತಿ ಪಾತ್ರವನ್ನು ಸರಿಯಾಗಿ ನಿರ್ವಹಿಸುವುದು ಮುಖ್ಯ. ಈಗ ವಿಲನ್ ಗಳು ಕೂಡ ಜನಪ್ರಿಯರಾಗುತ್ತಿದ್ದಾರೆ" ಎನ್ನುತ್ತಾರೆ ಶರತ್.
ಹಿರಿಯ ಹಾಸ್ಯ ನಟ ಮತ್ತು ರಾಜಕಾರಿಣಿ ಮುಖ್ಯಮಂತ್ರಿ ಚಂದ್ರು ಅವರ ಮಗ ಶರತ್ ಎಲ್ಲ ಗಾಡ್ ಫಾದರ್ ಗಳನ್ನು ಮೀರಿ ಬೆಳೆದ ಕಥೆಯನ್ನು ಹೇಳುತ್ತಾರೆ. "ಚಿತ್ರರಂಗದಲ್ಲಿ ನನ್ನ ಮಾರ್ಗವನ್ನು ಹುಡುಕಿಕೊಳ್ಳುವಂತೆ ಅವರು(ತಂದೆ) ಗಂಭೀರವಾಗಿ ಹೇಳಿಬಿಟ್ಟರು. ಈಗ ನಾನು ಇಲ್ಲಿ ತಳವೂರಲು ಸ್ವಂತಿಕೆಯಿಂದ ಪ್ರಯತ್ನಿಸುತೀದ್ದೇನೆ ಮತ್ತು ಅದನ್ನು ಇಷ್ಟ ಪಡುತ್ತಿದ್ದೇನೆ" ಎಂದು ತಿಳಿಸುತ್ತಾರೆ,
ಅಕ್ಟೋಬರ್ ೨೨ ರಿಂದ 'ಹೀರೋ' ಚಿತ್ರೀಕರಣ ಪ್ರಾರಂಭವಾಗುತ್ತದೆ.
Advertisement