ರೇಪ್ ಪ್ರಕರಣ ಎದುರಿಸುತ್ತಿರುವ ಸ್ವಘೋಷಿತ ದೇವಮಾನವ ಅಸಾರಂ ಬಾಪು
ಸಿನಿಮಾ ಸುದ್ದಿ
ಆಗ್ರಾದಲ್ಲಿ ದಿನಪತ್ರಿಕೆ ಕಚೇರಿಯನ್ನು ಧ್ವಂಸ ಮಾಡಿದ ಅಸಾರಂ ಬಾಪು ಬೆಂಬಲಿಗರು
ರೇಪ್ ಪ್ರಕರಣ ಎದುರಿಸುತ್ತಿರುವ ಸ್ವಘೋಷಿತ ದೇವಮಾನವ ಅಸಾರಂ ಬಾಪು ಅವರ ಬೆಂಬಲಿಗರು ಬುಧವಾರ ಆಗ್ರದಲ್ಲಿನ ದಿನಪತ್ರಿಕೆ ಕಚೇರಿಯೊಂದರ ಮೇಲೆ ದಾಳಿ ಮಾಡಿ ಧ್ವಂಸ
ಆಗ್ರಾ: ರೇಪ್ ಪ್ರಕರಣ ಎದುರಿಸುತ್ತಿರುವ ಸ್ವಘೋಷಿತ ದೇವಮಾನವ ಅಸಾರಂ ಬಾಪು ಅವರ ಬೆಂಬಲಿಗರು ಬುಧವಾರ ಆಗ್ರದಲ್ಲಿನ ದಿನಪತ್ರಿಕೆ ಕಚೇರಿಯೊಂದರ ಮೇಲೆ ದಾಳಿ ಮಾಡಿ ಧ್ವಂಸ ಮಾಡಿದ ಘಟನೆ ನಡೆದಿದೆ.
ದಿನಪತ್ರಿಕೆಯಲ್ಲಿ ಪ್ರಕಟವಾದ ಸುದ್ದಿಯೊಂದನ್ನು ವಿರೋಧಿಸಿ ಈ ಬೆಂಬಲಿಗರು ಕಚೇರಿಯಲ್ಲಿ ಈ ಗಲಭೆ ಎಬ್ಬಿಸಿ ಧ್ವಂಸ ಕಾರ್ಯಕ್ಕೆ ಕೈಹಾಕಿದ್ದಾರೆ.
ಕಚೇರಿಯ ಆಸ್ತಿ ಪಾಸ್ತಿಯನ್ನು ಹಾನಿ ಮಾಡಿದ್ದಲ್ಲದೆ, ಕಚೇರಿಯಲ್ಲಿದ್ದ ಹಲವರಿಗೆ ಮನಬಂದಂತೆ ಥಳಿಸಿದ್ದಾರೆ ಎಂದು ಕೂಡ ಆರೋಪಿಸಲಾಗಿದೆ. ಈ ದಾಳಿಯಲ್ಲಿ ನಾಲ್ವರಿಗೆ ಗಾಯಗಳಾಗಿವೆ.
ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಧಾವಿಸಿ ಇಬ್ಬರು ಅಸಾರಂನ ಬೆಂಬಲಿಗರನ್ನು ಬಂಧಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ