ಪಿಯು ಪ್ರಶ್ನೆಪತ್ರಿಕೆ ಸೋರಿಕೆಗೆ ಟಾಂಗ್ ಕೊಟ್ಟ ಯೋಗರಾಜ್ ಭಟ್ ಹಾಡು

ಈ ಪಿಸಿಎಂಬಿ ತೀಟೆ ಹಾಡು ಕೇಳ್ರಪ್ಪಾ...ಎಂದು ಆರಂಭವಾಗುವ ಈ ಹಾಡು ಪೋಷಕರು ಹಾಗು ವಿದ್ಯಾರ್ಥಿಗಳ ಮನಸ್ಥಿತಿಯನ್ನು ಬಿಂಬಿಸುತ್ತಿದೆ...
ಯೋಗರಾಜ್ ಭಟ್ -ದುನಿಯಾ ವಿಜಯ್
ಯೋಗರಾಜ್ ಭಟ್ -ದುನಿಯಾ ವಿಜಯ್
Updated on
ಬೆಂಗಳೂರು: ಪಿಯುಸಿ ದ್ವಿತೀಯ ವರ್ಷದ ರಸಾಯನಶಾಸ್ತ್ರ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿದ ಅಧಿಕಾರಿಗಳಿಗೆ ಟಾಂಗ್ ಕೊಟ್ಟು ನಿರ್ದೇಶಕ ಯೋಗರಾಜ್ ಭಟ್ ಹಾಡೊಂದನ್ನು ಬರೆದಿದ್ದಾರೆ. ಈ ಪಿಸಿಎಂಬಿ ತೀಟೆ ಹಾಡು ಕೇಳ್ರಪ್ಪಾ...ಎಂದು ಆರಂಭವಾಗುವ ಈ ಹಾಡು ಪೋಷಕರು ಹಾಗು ವಿದ್ಯಾರ್ಥಿಗಳ ಮನಸ್ಥಿತಿಯನ್ನು ಬಿಂಬಿಸುತ್ತಿದೆ. ಸರ್ಕಾರ ಮತ್ತು ಪಿಯು ಬೋರ್ಡ್‌ನ ಬೇಜವಾಬ್ದಾರಿತನವನ್ನು ಈ ಹಾಡಿನ ಮೂಲಕ ವ್ಯಕ್ತಪಡಿಸಿದ ಭಟ್ರು, ಇದಕ್ಕೆ ಕಾರಣವಾದ ಅಧಿಕಾರಿಗಳನ್ನೂ ತರಾಟೆಗೆ ತೆಗೆದುಕೊಂಡಿದ್ದಾರೆ.
ಎರಡೆರಡು ಬಾರಿ ರಸಾಯನಶಾಸ್ತ್ರ ಪ್ರಶ್ನೆ ಪತ್ರಿಕೆ ಸೋರಿಕೆಯಿಂದಾಗಿ ಮಕ್ಕಳು ಮತ್ತು ಹೆತ್ತವರು ಅನುಭವಿಸುವ ಸಂಕಟವನ್ನು ವಿವರಿಸುವ ಈ ಹಾಡು ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿದವರನ್ನು ಬಯ್ಯುವ ಧಾಟಿಯಲ್ಲಿದೆ.
ಗುರುವಾರ ಅಬ್ಬಯ್ಯ ನಾಯ್ಡು ಸ್ಟುಡಿಯೋದಲ್ಲಿ ಈ ಹಾಡು ರೆಕಾರ್ಡಿಂಗ್ ನಡೆದಿದೆ. ಚೇತನ್ ಸೊಸ್ಕಾ ಅವರು ಈ ಹಾಡನ್ನು ಸಂಯೋಜಿಸಿದ್ದು, ದುನಿಯಾ ವಿಜಿ ಹಾಡಿಗೆ ದನಿಯಾಗಿದ್ದಾರೆ. ಯೋಗರಾಜ್ ಭಟ್‌ರ ಈ ಹೊಸ ಹಾಡು ಈಗಾಗಲೇ ವಾಟ್ಸಾಪ್ ಮೂಲಕ ಹರಿದಾಡುತ್ತಿದ್ದು, ಸಾಮಾಜಿಕ ತಾಣಗಳಲ್ಲಿ ಸಂಚಲನ ಸೃಷ್ಟಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com