
ಬೆಂಗಳೂರು: ತಮ್ಮ ಹಾದಿಯಲ್ಲಿ ಬರುವ ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳಲು ಯಾವಾಗಲು ಹವಣಿಸುವ ನಟ ಶಾಮ್ ಅವರಿಗೆ, ಯಶ್ ಮತ್ತು ರಾಧಿಕಾ ಪಂಡಿತ್ ಅಭಿನಯಿಸುತ್ತಿರುವ ಇನ್ನೂ ಹೆಸರಿಡದ ಚಿತ್ರದಲ್ಲಿ ನಟಿಸುವ ಅವಕಾಶ ಬಂದಾಗ ಕೂಡಲೇ ಒಪ್ಪಿಗೆ ಸೂಚಿಸಿದ್ದಾರೆ. ಮಹೇಶ್ ರಾವ್ ನಿರ್ದೇಶನದ ಈ ಚಿತ್ರಕ್ಕೆ ಖಳನಾಯಕನಾಗಿ ನಟಿಸಬೇಕಿದ್ದ ಆದಿತ್ಯ, ಕೊನೆಯ ಕ್ಷಣದಲ್ಲಿ ದಿನಾಂಕಗಳು ಹೊಂದಾಣಿಕೆಯಾಗದಿದ್ದಕ್ಕೆ ಹಿಂದೆ ಸರಿದಿದ್ದರಿಂದ ಈಗ ಆ ಪಾತ್ರಕ್ಕೆ ಶಾಮ್ ಆಯ್ಕೆಯಾಗಿದ್ದಾರೆ.
ಇದನ್ನು ವಿವರಿಸುವ ನಿರ್ದೇಶಕ ಮಹೇಶ್ "ಆದಿತ್ಯ ಹಿಂದೆ ಸರಿದಾಗ ನಾವು ಆತುರಪಡಲಿಲ್ಲ. ಆ ಖಳನಾಯಕನ ಪಾತ್ರವನ್ನು ಪೋಷಿಸಬಲ್ಲ ಮತ್ತು ಅದಕ್ಕೆ ನ್ಯಾಯ ಒದಗಿಸಬಲ್ಲ ನಟನ ಹುಡುಕಾಟದಲ್ಲಿದ್ದೆವು. ಆಗ ನಮ್ಮ ಮನಸ್ಸಿಗೆ ಬಂದಿದ್ದು ಶಾಮ್. ಭಾನುವಾರ ಒಪ್ಪಂದ ಅಂತಿಮವಾಗಿದೆ" ಎನ್ನುತ್ತಾರೆ. ಶಾಮ್ ಸದ್ಯದ ಯೋಜನೆ ಪೂರ್ಣಗೊಳಿಸಿ ತಂಡವನ್ನು ಸೇರಲಿದ್ದಾರಂತೆ. ಇದಕ್ಕಾಗಿ ತಮ್ಮ ಮುಂದಿನ ಯೋಜನೆಯನ್ನು ಮುಂದೂಡಿದ್ದಾರಂತೆ.
ಅಲ್ಲದೆ ಮೂಲಗಳ ಪ್ರಕಾರ ಈ ಸಿನೆಮಾಗಾಗಿ ಯಶ್ ಮತ್ತು ರಾಧಿಕಾ ತಮ್ಮ ಅವತಾರವನ್ನು ಬದಲಾಯಿಸಿಕೊಳ್ಳುತ್ತಿದ್ದಾರಂತೆ. ಹೊಸ ಕೇಶಶೈಲಿಗಾಗಿ ಯಶ್ ಸದ್ಯಕ್ಕೆ ಮುಂಬೈನಲ್ಲಿದ್ದಾರಂತೆ. ಕೆ ಮಂಜು ನಿರ್ಮಾಣದ ಈ ಸಿನೆಮಾದ ಶೀರ್ಶಿಕೆಗಾಗಿ ಇನ್ನೂ ಕೆಲವು ದಿನ ಕಾಯಬೇಕಿದೆ.
Advertisement