ಮತ್ತೆ ಮತ್ತೆ ಶಿವಲಿಂಗ

ನಿರ್ದೇಶಕ ಪಿ ವಾಸು ಮತ್ತು ನಟ ಶಿವರಾಜಕುಮಾರ್ ಒಂದಾಗಿದ್ದ 'ಶಿವಲಿಂಗ' ವಾಣಿಜ್ಯ ಯಶಸ್ಸು ಕಂಡ ಹಿನ್ನಲೆಯಲ್ಲಿ ಈಗ ಮತ್ತೊಮ್ಮೆ ಒಂದಾಗಲಿದ್ದಾರಂತೆ.
ನಿರ್ದೇಶಕ ಪಿ ವಾಸು ಮತ್ತು ನಟ ಶಿವರಾಜಕುಮಾರ್
ನಿರ್ದೇಶಕ ಪಿ ವಾಸು ಮತ್ತು ನಟ ಶಿವರಾಜಕುಮಾರ್

ಬೆಂಗಳೂರು: ನಿರ್ದೇಶಕ ಪಿ ವಾಸು ಮತ್ತು ನಟ ಶಿವರಾಜಕುಮಾರ್ ಒಂದಾಗಿದ್ದ 'ಶಿವಲಿಂಗ' ವಾಣಿಜ್ಯ ಯಶಸ್ಸು ಕಂಡ ಹಿನ್ನಲೆಯಲ್ಲಿ ಈಗ ಮತ್ತೊಮ್ಮೆ ಒಂದಾಗಲಿದ್ದಾರಂತೆ.

'ರಾಬಿನ್ ಹುಡ್' ಎಂಬ ಸಿನೆಮಾದಲ್ಲಿ ಒಂದಾಗಿರುವುದಲ್ಲದೆ, 'ಶಿವಲಿಂಗ' ಸಿನೆಮಾದ ಎರಡನೇ ಭಾಗ ಕೂಡ ಮಾಡಲಿದ್ದಾರಂತೆ. "ನಾನು ಪ್ರಭು ಗಣೇಶನ್ ಜೊತೆಗೆ ೧೧ ಸಿನೆಮಾ, ರಜನೀಕಾಂತ್ ಜೊತೆಗೆ ಐದು, ಸತ್ಯರಾಜ್ ಜೊತೆಗೆ ಸುಮಾರು ೧೦ ಮತ್ತು ವಿಷ್ಣುವರ್ಧನ್ ಜೊತೆಗೆ ಏಳು ಸಿನೆಮಾಗಳನ್ನು ನಿರ್ದೇಶಿಸಿದ್ದೇನೆ. ಒಳ್ಳೆಯ ಗೆಳೆತೆನದಿಂದ ಇವೆಲ್ಲಾವೂ ಯಶಸ್ವಿಯಾಗಿವೆ, ಈಗ ಅಂತಹುದೇ ಒಂದು ಭಾವನೆ ಶಿವರಾಜ್ ಕುಮಾರ್ ಜೊತೆಗೆ ಬೆಳೆದಿದೆ, ಅದೂ ಕೇವಲ ಒಂದು ಸಿನೆಮಾದಿಂದ. ಸಿನೆಮಾಗಳ ಬಗ್ಗೆ ಅವರ ಬದ್ಧತೆ ಶ್ಲಾಘನೀಯ"  ಎನ್ನುತಾರೆ ನಿರ್ದೇಶಕ ಪಿ ವಾಸು. 'ಶಿವಲಿಂಗ' ಸಿನೆಮಾಗೆ ಅಭೂತಪೂರ್ವ ಯಶಸ್ಸು ಸಿಕ್ಕಿರುವ ಹಿನ್ನಲೆಯಲ್ಲಿ ಅದರ ಎರಡನೇ ಭಾಗವನ್ನೂ ನಿರ್ದೇಶಿಸುವುದಕ್ಕೆ ಉತ್ಸಾಹರಾಗಿರುವ ವಾಸು "ಶಿವಣ್ಣನವರಿಗೆ ಕಥೆ ಹೇಳಿದ್ದೇನೆ. ಅವರು ಸಂತಸಗೊಂಡಿದ್ದಾರೆ ಮತ್ತು ಈ ಐಡಿಯಾ ಕೂಡ ಹೊಸದು ಎಂದಿದ್ದಾರೆ. ಇದು ಅವರಿಗೆ ಸವಾಲು ಕೂಡ ಎಂದಿದ್ದಾರೆ" ಎಂದು ವಿವರಿಸುತ್ತಾರೆ.

ಸದ್ಯಕ್ಕೆ ಸ್ಕ್ರೀನ್ ಪ್ಲೇನಲ್ಲಿ ನಿರ್ದೇಶಕ ನಿರತರಾಗಿದ್ದು, "ಶಿವಣ್ಣ ಇರುತ್ತಾರೆ ಮತ್ತು ಕೆಲವು ಹೊಸ ನಟರ ಆಯ್ಕೆ ನಡೆಯಲಿದೆ. ವೇದಿಕಾ ಇರುತ್ತಾರಾ ಎಂಬುದನ್ನು ನಿರ್ಧರಿಸಬೇಕು" ಎಂದಿದ್ದಾರೆ. ಶಿವಣ್ಣ ಸಿಐಡಿ ಅಧಿಕಾರಿಯಾಗಿಯೇ ಉಳಿಯಲಿದ್ದಾರಂತೆ.

ಈ ಮಧ್ಯೆ ಸುದೀಪ್ ಮತ್ತು ಪುನೀತ್ ರಾಜಕುಮಾರ್ ಅವರೊಂದಿಗೂ ಸಿನೆಮಾ ಮಾಡುವುದಕ್ಕೆ ನಿರ್ದೇಶಕ ಯೋಜನೆ ರೂಪಿಸುತ್ತಿದ್ದಾರಂತೆ. "ಇವರಿಬ್ಬರನ್ನೂ ನಾನು ಭೇಟಿ ಮಾಡಿ ಚರ್ಚಿಸಿದ್ದೇನೆ. ಶಿವಣ್ಣನವರ ಮಗಳ ಮದುವೆ ಸಮಯದಲ್ಲೂ ಪುನೀತ್ ಅವರು ನನ್ನೊಂದಿಗೆ ಮಾತಿಗೆ ಸಿಕ್ಕಿ ನಮ್ಮ ತಂದೆಯವರ, ಸಹೋದರನ ಸಿನೆಮಾ ಮಾಡಿದ್ದೀರಿ. ಈಗ ನನ್ನ ಸರದಿ ಎಂದರು. ಇಬ್ಬರಿಗೂ ಒಳ್ಳೆಯ ಕಥೆ ಸಿಕ್ಕ ನಂತರ ನಾನು ಅಧಿಕೃತವಾಗಿ ಘೋಷಣೆ ಮಾಡಲಿದ್ದೇನೆ" ಎನುತ್ತಾರೆ ವಾಸು.

ಶಿವಲಿಂಗ ತೆಲುಗು-ತಮಿಳು ರಿಮೇಕ್ ನಲ್ಲಿ ರಾಘವ ಲಾರೆನ್ಸ್ ನಾಯಕ ನಟ

ವಾಸು ಅವರೇ ನಿರ್ದೇಶಿಸಲಿರುವ 'ಶಿವಲಿಂಗ' ಸಿನೆಮಾದ ತಮಿಳು ಮತ್ತು ತೆಲುಗು ರಿಮೇಕ್ ಗಳಿಗೆ ಜೂನ್ ನಿಂದ ಚಿತ್ರೀಕರಣ ಪ್ರಾರಂಭವಾಗಲಿದೆಯಂತೆ. ಈ ಎರಡು ಭಾಷೆಗಳಲ್ಲಿ ಶಿವರಾಜ್ ಕುಮಾರ್ ನಟಿಸಿದ ಪಾತ್ರವನ್ನು ರಾಘವ ಲಾರೆನ್ಸ್ ನಟಿಸಲಿದ್ದಾರಂತೆ. ಸಾಧು ಕೋಕಿಲಾ ಪಾತ್ರವನ್ನು ತಮಿಳಿನಲ್ಲಿ ವಡಿವೇಲು, ಮತ್ತು ತೆಲುಗಿನಲ್ಲಿ ಬ್ರಹ್ಮಾನಂದ ನಟಿಸಲಿದ್ದಾರಂತೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com