
ಬೆಂಗಳೂರು: ಕೌಟುಂಬಿಕ ಚಲನಚಿತ್ರಗಳಲ್ಲೇ ಸಾಮಾನ್ಯವಾಗಿ ಪಾತ್ರ ಮಾಡುವ ನಟ ವಿಜಯ್ ರಾಘವೇಂದ್ರ ಈಗ ವಿರಾಜ್ ಅವರ ಚೊಚ್ಚಲ ನಿರ್ದೇಶನದ 'ಯದಾ ಯದಾ ಹಿ ಧರ್ಮಸ್ಯ'ದಲ್ಲಿ ನೆಗೆಟಿವ್ ಪಾತ್ರ ಮಾಡಲು ಮುಂದಾಗಿದ್ದಾರೆ.
ಶುಕ್ರವಾರ ಈ ಸಿನೆಮಾದ ಮುಹೂರ್ತ ನೆರವೇರಿದ್ದು, ವಿನಯ್ ರಾಜಕುಮಾರ್ ಕ್ಲ್ಯಾಪ್ ಮಾಡಿದ್ದಾರೆ. 'ಯದಾ ಯದಾ..'ದಲ್ಲಿ ವಿಜಯ್ ರಾಘವೇಂದ್ರ ಅವರ ಹೊಸ ಅವತಾರದ ಬಗ್ಗೆ ಉತ್ಸುಕರಾಗಿರುವ ವಿರಾಜ್ "ಭೂಗತ ಲೋಕದ ಈ ಸಿನೆಮಾದಲ್ಲಿ ವಿಜಯ್ ನೆಗೆಟಿವ್ ಪಾತ್ರವೊಂದರಲ್ಲಿ ನಟಿಸಲಿದ್ದಾರೆ ಆದರೆ ಸಾಮಾನ್ಯರಿಗೆ ಅವರು ರಕ್ಷಕ. ಇದಕ್ಕಾಗಿ ತಮ್ಮ ಇಮೇಜ್ ಅನ್ನು ವಿಜಯ್ ಬದಲಾಯಿಸಿಕೊಳ್ಳಲಿದ್ದು, ಇಂತಹ ಪಾತ್ರ ಅವರ ಜೀವನದಲ್ಲೇ ಮೊದಲು ಎಂದಿದ್ದಾರೆ ವಿಜಯ್. ಅಲ್ಲದೆ ತಮ್ಮ ದೇಹ ದಾಢ್ಯವನ್ನು ಕೂಡ ವೃದ್ಧಿಸಿಕೊಳ್ಳುತ್ತಿದ್ದು ಕೈಮ್ಯಾಕ್ಸ್ ಚಿತ್ರೀಕರಣದ ಹೊತ್ತಿಗೆ ಸಿಕ್ಸ್ ಪ್ಯಾಕ್ ಹೊಂದುವ ಸಾಧ್ಯತೆ ಇದೆ" ಎನ್ನುತ್ತಾರೆ.
ವಿಜಯ್ ವೈವಿಧ್ಯಮಯ ನಟ ಆದರೆ ಅವರನ್ನು ಒಂದೇ ವಿಧದ ಚಿತ್ರಕ್ಕೆ ಸೀಮಿತಗೊಳಿಸಿದ್ದಾರೆ. ನಟನಾಗಿ ಅವರಿಗೆ ವಿವಿಧ ಗುಣಗಳಿವೆ ನಿರ್ದೇಶಕನಾಗಿ ನನಗೆ ಅವುಗಳನ್ನು ಹೊರತರುವುದು ಮುಖ್ಯ ಎನ್ನುವ ವಿರಾಜ್ ತಾವೇ ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ರಚಿಸಲು ಮುಂದಾಗಿದ್ದಾರೆ. "ಇದು ನಿಜ ಘಟನೆಯೊಂದನ್ನು ಆಧರಿಸಿದ ಕಮರ್ಷಿಯಲ್ ಸಿನೆಮಾ" ಎಂದು ವಿವರಿಸುತ್ತಾರೆ.
ಏಪ್ರಿಲ್ ೨೫ ರಿಂದ ಚಿತ್ರೀಕರಣ ಪ್ರಾರಂಭವಾಗಲಿದ್ದು, ಬೆಂಗಳೂರು, ಮಡಿಕೇರಿ, ಗೋವಾ ಮತ್ತಿತೆಡೆ ಚಿತ್ರೀಕರಣಗೊಳ್ಳಲಿದೆಯಂತೆ. ರವಿಶಂಕರ್, ಸಾಧು ಕೋಕಿಲಾ, ಸುಧಾ ಬೆಳವಾಡಿ ತಾರಾಗಣದ ಭಾಗವಾಗಿದ್ದಾರೆ.
Advertisement