ನಿರ್ದೇಶಕ ಸಂತೋಷ್ ಆನಂದರಾಮ್ ಜೊತೆಗೆ ಪುನೀತ್ ರಾಜಕುಮಾರ್
ನಿರ್ದೇಶಕ ಸಂತೋಷ್ ಆನಂದರಾಮ್ ಜೊತೆಗೆ ಪುನೀತ್ ರಾಜಕುಮಾರ್

ಚಿತ್ರೀಕರಣಕ್ಕಾಗಿ ಆಸ್ಟ್ರೇಲಿಯಾಗೆ ಹಾರಿದ 'ರಾಜಕುಮಾರ'

ಒಂದು ವರ್ಷದ ಹಿಂದೆ ಸೆಟ್ಟೇರಿದ ಪುನೀತ್ ರಾಜಕುಮಾರ್ ನಟನೆಯ 'ರಾಜಕುಮಾರ' ಸಿನೆಮಾಗೆ ಕೊನೆಗೂ ಈ ವಾರದಿಂದ ಚಿತ್ರೀಕರಣ ಪ್ರಾರಂಭವಾಗಲಿದೆ. 'ಮಿ & ಮಿಸೆಸ್ ರಾಮಾಚಾರಿ'ಯಂತಹ
Published on

ಬೆಂಗಳೂರು: ಒಂದು ವರ್ಷದ ಹಿಂದೆ ಸೆಟ್ಟೇರಿದ ಪುನೀತ್ ರಾಜಕುಮಾರ್ ನಟನೆಯ 'ರಾಜಕುಮಾರ' ಸಿನೆಮಾಗೆ ಕೊನೆಗೂ ಈ ವಾರದಿಂದ ಚಿತ್ರೀಕರಣ ಪ್ರಾರಂಭವಾಗಲಿದೆ. 'ಮಿ & ಮಿಸೆಸ್ ರಾಮಾಚಾರಿ'ಯಂತಹ ಯಶಸ್ವಿ ಚಿತ್ರವನ್ನು ನಿರ್ದೇಶಿಸಿದ ಸಂತೋಷ್ ಆನಂದರಾಮ್ ಎರಡನೆ ಬಾರಿಗೆ ಪರೀಕ್ಷೆಗೆ ಒಡ್ಡಿಕೊಂಡಿದ್ದಾರೆ. ೩೦ ಮಂದಿಯ ಚಿತ್ರತಂಡ ಭಾನುವಾರ ಆಸ್ಟ್ರೇಲಿಯಾಕ್ಕೆ ತೆರಳಿದೆ.

ಶೀರ್ಷಿಕೆಯಿಂದಲೇ ಕುತೂಹಲ ಹುಟ್ಟಿಸಿರುವ ಈ ಸಿನೆಮಾ ವರನಟ ರಾಜಕುಮಾರ್ ಅವರ ಬಿಯೋಪಿಕ್ ಅಲ್ಲ ಎಂದು ನಿರ್ದೇಶಕ ಸ್ಪಷ್ಟಪಡಿಸುತ್ತಾರೆ. "ಅಣ್ಣಾವ್ರ ಬಗೆಗೆನ ಬಹಳಷ್ಟು ಸಂಗತಿಗಳು ಸಿನೆಮಾದಲ್ಲಿವೆ ಆದರೆ ಕಥೆ ಅವರ ಬಗೆಗಲ್ಲ. ಅವರನ್ನು ರೂಪಕವಾಗಿ ಬಳಸಿಕೊಂಡಿದ್ದೇವೆ. ಅವರು ಹಾಕಿಕೊಟ್ಟ ಮಾರ್ಗವನ್ನು ನಾವು ಇಂದಿಗೂ ಅನುಸರಿಸುತ್ತಿದ್ದೇವೆ. ಅದನ್ನು ಪುನೀತ್ ಕೂಡ ಈ ಸಿನೆಮಾದಲ್ಲಿ ಅನುಸರಿಸಲಿದ್ದಾರೆ" ಎಂದು ವಿವರಿಸುತ್ತಾರೆ.

ಈ ಸಿನೆಮಾ ತಮ್ಮ ಹಿಂದಿನ ಸಿನೆಮಾಗಿಂತಲೂ ಭಿನ್ನವಾಗಿ ವಿನೂತನವಾಗಿ ಮೂಡಿಬರಲಿದೆ ಎಂಬ ಆತ್ಮವಿಶ್ವಾಸ ತೋರಿಸುತ್ತಾರೆ ಸಂತೋಷ್. ಅಲ್ಲದೆ ದೊಡ್ಡ ನಟನನ್ನು ನಿಭಾಯಿಸುವುದಕ್ಕೆ ಆತ್ಮವಿಶಾವಾಸ ತೋರುವ ಸಂತೋಷ್ "ಪುನೀತ್ ಅವರಿಗೆ ವಿಷಯವನ್ನು ಆಯ್ಕೆ ಮಾಡುವಾಗ ಬಹಳ ಎಚ್ಚರಿಕೆಯಿಂದ ಮಾಡಿದ್ದೇನೆ. ಅವರ ಖ್ಯಾತಿಯ ಬಗ್ಗೆ ನನಗೆ ಅರಿವಿದೆ. ಸ್ಕ್ರಿಪ್ಟ್ ಮಾಡುವಾರ ಅವರ ಜೊತೆಗೆ ಹತ್ತಾರು ಬಾರಿ ಚರ್ಚಿಸಿದ್ದೇನೆ" ಎಂದು ವಿವರಿಸುತ್ತಾರೆ.

ವಿ ಹರಿಕೃಷ್ಣ ಸಂಗೀತ ನೀಡುತ್ತಿದ್ದು, ವೆಂಕಟೇಶ್ ಅಂಗುರಾಜ್ ಸಿನೆಮ್ಯಾಟೋಗ್ರಾಫರ್. ರವಿವರ್ಮ ಫೈಟ್ ಮಾಸ್ಟರ್, ಹರ್ಷ ನೃತ್ಯ ನಿರ್ದೇಶಕ ಮತ್ತು ಕೆ ಎಂ ಪ್ರಕಾಶ್ ಸಂಕಲನಕಾರ. "ನಿರೀಕ್ಷೆ ಬೆಟ್ಟದಷ್ಟಿದೆ ಆದರೆ ಅದನ್ನು ನಿಭಾಯಿಸಬಲ್ಲೆ" ಎನ್ನುತ್ತಾರೆ ನಿರ್ದೇಶಕ ಸಂತೋಷ್.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com