ಭಾರತದಲ್ಲಿ ೧೦೦ ಕೋಟಿ ಗಳಿಕೆ ದಾಟಿದ 'ದ ಜಂಗಲ್ ಬುಕ್'

ಹಾಲಿವುಡ್ ನಿರ್ದೇಶಕ ಜಾನ್ ಫ್ಯಾವ್ರೆ ಅವರ ೩ಡಿ ಅನಿಮೇಶನ್ ಸಿನೆಮಾ 'ದ ಜಂಗಲ್ ಬುಕ್' ಭಾರತದಲ್ಲಿ ಬಿಡುಗಡೆಯಾದ ೧೦ ದಿನಗಳಲ್ಲಿ ೧೦೦ ಕೋಟಿ ಕ್ಲಬ್ ಸೇರಿದೆ.
'ದ ಜಂಗಲ್ ಬುಕ್' ಸಿನೆಮಾದ ಪೋಸ್ಟರ್
'ದ ಜಂಗಲ್ ಬುಕ್' ಸಿನೆಮಾದ ಪೋಸ್ಟರ್

ಮುಂಬೈ: ಹಾಲಿವುಡ್ ನಿರ್ದೇಶಕ ಜಾನ್ ಫ್ಯಾವ್ರೆ ಅವರ ೩ಡಿ ಅನಿಮೇಶನ್ ಸಿನೆಮಾ 'ದ ಜಂಗಲ್ ಬುಕ್' ಭಾರತದಲ್ಲಿ ಬಿಡುಗಡೆಯಾದ ೧೦ ದಿನಗಳಲ್ಲಿ ೧೦೦ ಕೋಟಿ ಕ್ಲಬ್ ಸೇರಿದೆ.

ಅಮೆರಿಕಾಗಿಂತಲೂ ಒಂದು ವಾರ ಮುಂಚಿತವಾಗಿ ಏಪ್ರಿಲ್ ೮ ರಂದು ಬಿಡುಗಡೆಯಾದ ಸಿನೆಮಾ ಇಲ್ಲಿಯವರೆಗೂ ಬಾಕ್ಸ್ ಆಫೀಸ್ ನಲ್ಲಿ ೧೦೧.೮೨ ಕೋಟಿ ಗಳಿಕೆ ಕಂಡಿದೆ.

"ಭಾರತದಲ್ಲಿ 'ದ ಜಂಗಲ್ ಬುಕ್' ಸಿನೆಮಾಗೆ ಸಿಕ್ಕಿರುವ ಅದ್ಭುತ ಪ್ರತಿಕ್ರಿಯೆಗೆ ಥ್ರಿಲ್ ಆಗಿದ್ದೇವೆ! ಇದು ಪ್ರತಿ ಸಮಯ ಕಾಲಕ್ಕೂ ಸಲ್ಲುವ ಕಥೆ, ಪೀಳಿಗೆಯಿಂದ ಪೀಳಿಗೆಗೆ ಸ್ಫೂರ್ತಿ ನೀಡುತ್ತಾ, ಬೆರಗು ಮೂಡಿಸುತ್ತಾ ಬಂದಿದೆ" ಎಂದು ಡಿಸ್ನಿ ಸ್ಟುಡಿಯೋಸ್ ಭಾರತದ ಉಪಾಧ್ಯಕ್ಷ ಅಮೃತಾ ಪಾಂಡೆ ಹೇಳಿದ್ದಾರೆ.

ಇಂಗ್ಲಿಶ್, ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಬಿಡುಗಡೆಯಾಗಿರುವ ಸಿನೆಮಾದಲ್ಲಿ ಮೊಗ್ಲಿ ಪಾತ್ರದಲ್ಲಿ ಅಮೇರಿಕಾ ನಟ ನೀಲ್ ಸೇಥಿ ಕಾಣಿಸಿಕೊಂಡಿದ್ದಾರೆ.

ಹಿಂದಿ ಅವತರಿಣಿಕೆಗೆ ಬಾಲಿವುಡ್ ನಟರಾದ ಇರ್ಫಾನ್ ಖಾನ್, ಪ್ರಿಯಾಂಕಾ ಚೋಪ್ರಾ, ನಾನಾ ಪಾಟೇಕರ್, ಶೆಫಾಲಿ ಷಾ ಮತ್ತು ಓಂಪುರಿ ಕಂಠದಾನ ಮಾಡಿದ್ದಾರೆ.

ಇದೇ ಮೊದಲ ಬಾರಿಗೆ ಅತಿ ಕಡಿಮೆ ಸಮಯದಲ್ಲಿ ಹಾಲಿವುಡ್ ಸಿನೆಮಾವೊಂದು ೧೦೦ ಕೋಟಿ ಗಳಿಕೆ ಕಂಡಿರುವುದು. ಈ ಹಿಂದೆ ಜೇಮ್ಸ್ ಕ್ಯಾಮರಾನ್ ಅವರ 'ಅವತಾರ್' ಮತ್ತು ವಿನ್ ಡಿಸೇಲ್ ನಟನೆಯ 'ಫ್ಯೂರಿಯಸ್ ೭' ಸಿನೆಮಾಗಳು ೧೦೦ ಕೋಟಿ ಗಳಿಕೆಯನ್ನು ದಾಟಿದ್ದವು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com