"ವೀಕೆಂಡ್ ವಿಥ್ ರಮೇಶ್"-ನೋಡುಗರ ಅನಿಸಿಕೆ!

ಪ್ರತಿ ವೀಕೆಂಡ್ ಬಂತೆಂದರೆ ಸಾಕು ....ಅಬ್ಬಾ ಆಫೀಸ್ ಕೆಲಸದ ಜಂಜಾಟವಿಲ್ಲದೆ.. ಸಂಜೆ ಎಲ್ಲಾದರೂ ಹೊರಗಡೆ ಅಡ್ಡಾಡಿಕೊಂಡು , ಯಾವದಾದ್ರು ಹೋಟೆಲ್ನಲ್ಲೆ ಡಿನ್ನರ್ ತಿಂದುಕೊಂಡು ಬರೋಣಾ...
ವೀಕೆಂಡ್ ವಿಥ್ ರಮೇಶ್ ಕಾರ್ಯಕ್ರಮದಲ್ಲಿ ಸುದೀಪ್ ಹಾಗೂ ರವಿಚಂದ್ರನ್
ವೀಕೆಂಡ್ ವಿಥ್ ರಮೇಶ್ ಕಾರ್ಯಕ್ರಮದಲ್ಲಿ ಸುದೀಪ್ ಹಾಗೂ ರವಿಚಂದ್ರನ್
Updated on

ಪ್ರತಿ ವೀಕೆಂಡ್ ಬಂತೆಂದರೆ ಸಾಕು ....ಅಬ್ಬಾ ಆಫೀಸ್ ಕೆಲಸದ ಜಂಜಾಟವಿಲ್ಲದೆ.. ಸಂಜೆ ಎಲ್ಲಾದರೂ ಹೊರಗಡೆ ಅಡ್ಡಾಡಿಕೊಂಡು , ಯಾವದಾದ್ರು ಹೋಟೆಲ್ನಲ್ಲೆ ಡಿನ್ನರ್ ತಿಂದುಕೊಂಡು ಬರೋಣಾ...ಅನ್ನೋದು ಮರ್ತೆ ಹೋಗಿತ್ತು  ಇತ್ತೀಚಿನವರೆಗೆ.. ಯಾಕೆ ಅಂತಿರಾ ?

ಯಾಕೆಂದರೆ ...ನನ್ನ ಅಚ್ಚು ಮೆಚ್ಚಿನ ಜನಪ್ರಿಯ ಕಾರ್ಯಕ್ರಮ "ವೀಕೆಂಡ್ ವಿಥ್ ರಮೇಶ್"  Z-ಕನ್ನಡ ಚಾನೆಲ್ ನಲ್ಲಿ ಬರೋ ಸಮಯ ! ಗಲಾಟೆ ಮಾಡ್ತಿದ್ದ ಮಗನಿಗೆ ಪಕ್ಕದ ರೂಮ್ನಲ್ಲಿ ವೀಡಿಯೊ ಗೇಮ್ಸ್ ಹಾಡಲಿಕ್ಕೆ ಹೇಳಿ ...ಸೆಲ್ಫೋನ್,ಫೇಸ್ಬುಕ್,whats app ಎಲ್ಲಾ ಆಫ್ ಮಾಡಿಕೊಂಡು ಕೂರೋ ವೇಳೆ.

ಈ ವಾರ ಯಾವ ಸಾಧಕರು ಕುರ್ಚಿ ಮೇಲೆ ಕೂರೋದು ? ಅವರ ಜೀವನದ ಸಾಧನೆಯ ಹಾದಿಯ ಬಗ್ಗೆ ತಿಳಿದುಕೊಳ್ಳೋ ಕುತೂಹಲ ಅದರ ಜೊತೆ ಅವರು ಪಟ್ಟ ಕಷ್ಟಗಳು , ಅವನ್ನೆಲ್ಲಾ ದಾಟಿ ಅವರು ಸಾಧನೆ ಮಾಡಿದ ಬಗೆಯ ರೀತಿ ತಿಳಿದುಕೊಂಡು ...ಸಾಧ್ಯವಾದಷ್ಟೂ ನಮ್ಮ ಜೀವನದಲ್ಲೂ ಅಳವಡಿಸಿಕೊಳ್ಳಬೇಕೆಂಬ ಬಯಕೆ !

ಈ ವಾರ ಕೊನೆಯ ಪ್ರಸಾರ ಈ ಸೀಸನ್ ನಲ್ಲಿ ಅಂದಾಗ ..ಮುಂದಿನ ವಾರದಿಂದ ಏನು ಮಾಡೋದು ? ಅಂತಾ ತುಸು ಬೇಸರವಾದ್ರು ...ಇಷ್ಟು ದಿನ ಎಲ್ಲ ಸಾಧಕರ ಜೊತೆ ಒಡನಾಡಿಯಾಗಿ,ಆಪ್ತ ಮಿತ್ರನಾಗಿ ಅವರ ಜೀವನದ ಎಲ್ಲಾ ಪುಟಗಳನ್ನೂ ಸವಿವರವಾಗಿ ಪ್ರಸ್ತುತ ಪಡಿಸಿ, ನೋಡುಗರಲ್ಲಿ ಸ್ಫೂರ್ತಿ ತರುವುದರ ಜೊತೆ ನಾವೂ ಸಾಧಿಸುವುದು ಇನ್ನೂ ಇದೆ ಎಂಬುದನ್ನು ಮನದಟ್ಟು ಮಾಡಿಸುವಲ್ಲಿ ಯಶಸ್ವಿಯಾಗಿ...ಜನಮನ ಗೆದ್ದ ಪ್ರೀತಿಯ ರಮೇಶ್ ಅರವಿಂದ್ ಮತ್ತು ಅವರ ತಂಡದವರಿಗೆ ಒಂದು ಹೃತ್ಪೂರ್ವಕ ಧನ್ಯವಾದಗಳು.

ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ...ಅನ್ನೋ ಗಾದೆಯ ತರಹ, ಎಲ್ಲಾ ಸಾಧಕರ ಜೀವನ ಸುಖದ ಸುಪ್ಪತ್ತಿಗೆ ಅಂತಾ ಭಾವನೆ .... ಅದರಲ್ಲೂ ಸಿನಿಮಾ ಸೆಲೆಬ್ರಿಟಿಗಳು ಅಂದ್ರೆ ಸುಖದ ಸುಪ್ಪತ್ತಿಗೆಯ ಪ್ರಮಾಣ ಇನ್ನೂ ಹೆಚ್ಚು ! ಅಂತಾ ಜನ ಸಾಮಾನ್ಯರಲ್ಲಿ ಭಾವನೆ ಇರೋದು ಸಹಜವೇ. ಆದ್ರೆ , ಈ ಕಾರ್ಯಕ್ರಮ ನೋಡಿದ ಮೇಲೆ ಆ ಭಾವನೆ ಸುಳ್ಳು ..."ಎಲ್ಲಾ ಸಾಧಕರ ಜೇವನದಲ್ಲಿ ಕಷ್ಟ-ಸುಖ , ದುಃಖ-ದುಮ್ಮಾನ , ಆದ ಅವಮಾನವ ಬದಿಗೊತ್ತಿ ..ಅವರು ಹೇಗೆ? ಕಾಯಕವ ಮಾಡಿ ಗಳಿಸಿದರು ಬಹುಮಾನವ ! ಅನ್ನೋ ನಿಜಸತ್ಯವ ತಿಳಿದುಕೊಂಡಿದ್ದು ಅಷ್ಟೇ ಸತ್ಯ !

ಈ ವಾರದ ಫೈನಲ್ ಎಪಿಸೋಡ್ ನಲ್ಲಿ ನಮ್ಮ ಮೆಚ್ಚಿನ ಕಿಚ್ಹ ಸುದೀಪ್ ಬಂದಿದ್ದು, ಕಾರ್ಯಕ್ರಮಕ್ಕೆ ಒಂದು ಹೆಚ್ಚಿನ ಮೆರುಗು ನೀಡಿದ್ದರಲ್ಲಿ ಸಂದೇಹವೇ ಇಲ್ಲ.

ಕಿಚ್ಹ ಸುದೀಪ್ ಹೇಳಿದ ಹಾಗೆ ...

"ನಿನ್ನೆ ಮತ್ತು ನಾಳೆಯ ಬಗ್ಗೆ ಚಿಂತಿಸದೆ
ಇಂದಿನ ದಿನದ ಬಗ್ಗೆ ಚಿಂತನೆ ಮಾಡುತ್ತಾ
ಮಾಡು...ನೀ, ನಿನ್ನ ಕಾಯಕವ !

ನೋಡು ಯಾಕೆ ತಲುಪದಿರುವೆ
ನೀ , ಆ...ಗುರಿ ಶಿಖರವ ...! "

ಅದರಂತೆ ...,

"ಮರೆತು ಬಿಡು ನಿನ್ನ ಬೆನ್ನ
ಹಿಂದೆ ಇರುವ ಭಾದಕರ ...
ಕಲಿತು ಬಿಡು ನೋಡಿ ನಿನ್ನ
ಮುಂದೆ ಇರುವ ಸಾಧಕರ ...!"

"ಕಿಚ್ಚೆದೆಯಿಂದ ಹುಚ್ಚನಂತೆ
ಮಾಡು ನಿನ್ನ ಕಾಯಕ ...
ನೋಡು ಯಾಕೆ ಮುಂದೊಮ್ಮೆ
ಆಗದಿರುವೆ ? ನೀನೂ.. ಅವರೆಲ್ಲರಂತೆ ಸಾಧಕ ...!"

ಮತ್ತೆ ಯಾವಾಗ ಈ ಕಾರ್ಯಕ್ರಮ ಶುರುವಾಗುವುದೋ ಅಂತಾ ಕಾಯುತ್ತಿರುವ ವೀಕ್ಷಕ ...

- ನಾಗರಾಜ್.ಎಂ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com