'ಚಯ್ಯ ಚಯ್ಯ' ರೀತಿಯ ದೃಶ್ಯಗಳಿಗೆ ನಿರ್ಮಾಪಕರು ಇನ್ನು ಮುಂದೆ ದುಪ್ಪಟ್ಟು ವ್ಯಯಿಸಬೇಕು!

ಭಾರತೀಯ ರೈಲುಗಳಲ್ಲಿ ಚಿತ್ರೀಕರಣದ ದರವನ್ನು ರೈಲ್ವೆ ಇಲಾಖೆ ಕಳೆದ ವರ್ಷ ಎರಡು ದುಪಟ್ಟು ಏರಿಸಿತ್ತು, ಈಗ ಗೂಡ್ಸ್ ರೈಲಿನಲ್ಲಿನ ಚಿತ್ರೀಕರಣಕ್ಕೂ
'ದಿಲ್ ಸೆ' ಸಿನೆಮಾದ 'ಚಯ್ಯ ಚಯ್ಯ' ಹಾಡಿನ ದೃಶ್ಯ
'ದಿಲ್ ಸೆ' ಸಿನೆಮಾದ 'ಚಯ್ಯ ಚಯ್ಯ' ಹಾಡಿನ ದೃಶ್ಯ
Updated on
ನವದೆಹಲಿ: ಭಾರತೀಯ ರೈಲುಗಳಲ್ಲಿ ಚಿತ್ರೀಕರಣದ ದರವನ್ನು ರೈಲ್ವೆ ಇಲಾಖೆ ಕಳೆದ ವರ್ಷ ಎರಡು ದುಪಟ್ಟು ಏರಿಸಿತ್ತು, ಈಗ ಗೂಡ್ಸ್ ರೈಲಿನಲ್ಲಿನ ಚಿತ್ರೀಕರಣಕ್ಕೂ ದರವನ್ನು ದ್ವಿಗುಣಗೊಳಿಸಿ ಆದೇಶಿಸಿದೆ. ಗೂಡ್ಸ್ ರೈಲಿನಲ್ಲಿ ಒಂದು ದಿನದ ಚಿತ್ರೀಕರಣಕ್ಕೆ ಇನ್ನುಮುಂದೆ ನಿರ್ಮಾಪಕರು 2.5 ಲಕ್ಷದ ಬದಲಾಗಿ 4.26 ಲಕ್ಷ ವ್ಯಯಿಸಬೇಕಾಗುತ್ತದೆ. 
ನಿರ್ಮಾಪಕರು 4.26 ಲಕ್ಷ ವ್ಯಯಿಸುವುದಲ್ಲದೆ, ರೈಲನ್ನು ತಡೆಹಿಡಿಯುವುದಕ್ಕಾಗಿ ಘಂಟೆಗೆ 900 ರೂ ಹೆಚ್ಚುವರಿ ಹಣವನ್ನು ಕೂಡ ನೀಡಬೇಕಾಗುತ್ತದೆ. 2009 ರಲ್ಲಿ ಈ ದರ ಘಂಟೆಗೆ 600 ರೂ ಇತ್ತು. 
ಜನನಿಬಿಡ ಸಮಯದಲ್ಲಿ ಚಿತ್ರೀಕರಣ ನಡೆಸಬೇಕಾದರೆ ಸರ್ ಚಾರ್ಜ್ ಅನ್ನು ಸದ್ಯದ 7% ನಿಂದ 17 % ಏರಿಸಿದೆ ರೈಲ್ವೆ ಇಲಾಖೆ. ಈ ಹೊಸ ದರಪಟ್ಟಿ ಸೋಮವಾರದಿಂದ ಜಾರಿಗೆ ಬರಲಿದೆ.
ಹಾಗೆಯೋ ಭೋಗಿಯೊಂದಕ್ಕೆ ಭದ್ರತಾ ಮುಂಗಡವಾಗಿ 50000 ರೂ ನೀಡಬೇಕಿದ್ದು, ಕನಿಷ್ಠ 2.5 ಲಕ್ಷ ಭದ್ರತೆ ಇರಿಸಬೇಕಿದೆ. 
2015 ರಲ್ಲಿ ವಿಶೇಷ ರೈಲುಗಳಲ್ಲಿ ಚಿತ್ರೀಕರಣಕ್ಕಾಗಿ ಒಂದು ದಿನದ ಬಾಡಿಗೆಯನ್ನು 2.31 ಲಕ್ಷದಿಂದ 4.74 ಲಕ್ಷಕ್ಕೆ ಹೆಚ್ಚಿಸಿ ಆದೇಶಿಸಲಾಗಿತ್ತು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com