'ಫಸ್ಟ್ ರ್ಯಾಂಕ್ ರಾಜು' ಈಗ 'ಮಿಸ್ಸಿಂಗ್ ಬಾಯ್'; ಮಲೆಯಾಳಿ ನಟಿ ಅರ್ಚನಾ ನಾಯಕಿ

ನಿರ್ದೇಶಕ ಡಿ ಪಿ ರಘುರಾಮ್ ಅವರ 'ಮಿಸ್ಸಿಂಗ್ ಬಾಯ್' ಸಿನೆಮಾಗೆ ರೂಪದರ್ಶಿ ಮತ್ತು ನಟಿ ಅರ್ಚನಾ ಜಯಕೃಷ್ಣ ಆಯ್ಕೆಯಾಗಿದ್ದಾರೆ. ಅವರು 'ಫರ್ಸ್ಟ್ ರ್ಯಾಕ್ ರಾಜು' ಖ್ಯಾತಿಯ ಗುರುನಂದನ್
ಗುರುನಂದನ್
ಗುರುನಂದನ್
ಬೆಂಗಳೂರು: ನಿರ್ದೇಶಕ ಡಿ ಪಿ ರಘುರಾಮ್ ಅವರ 'ಮಿಸ್ಸಿಂಗ್ ಬಾಯ್' ಸಿನೆಮಾಗೆ ರೂಪದರ್ಶಿ ಮತ್ತು ನಟಿ ಅರ್ಚನಾ ಜಯಕೃಷ್ಣ ಆಯ್ಕೆಯಾಗಿದ್ದಾರೆ. ಅವರು 'ಫರ್ಸ್ಟ್ ರ್ಯಾಕ್ ರಾಜು' ಖ್ಯಾತಿಯ ಗುರುನಂದನ್ ಜೊತೆಗೆ ನಟಿಸಲಿದ್ದಾರೆ. 
ನಟಿಗೆ ಇದು ಮೊದಲ ಕನ್ನಡ ಸಿನೆಮಾ. ಪಾಲಕ್ಕಾಡ್ ಮೂಲದ ಅರ್ಚನಾ ಹುಟ್ಟಿ ಬೆಳೆದದ್ದೆಲ್ಲಾ ಕೆನಾಡಾದಲ್ಲಿ. ಆರು ವರ್ಷದ ಹಿಂದೆ ಅವರು ಬೆಂಗಳೂರಿಗೆ ಬಂದು ನೆಲೆಸಿದ್ದಾರೆ. "ಈ ಚಿತ್ರತಂಡದ ಜೊತೆಗೆ ಕೆಲಸ ಮಾಡುವುದಕ್ಕೆ ಉತ್ಸುಕನಾಗಿದ್ದೇನೆ. ಗುರುನಂದನ್ ಅವರ 'ಫಸ್ಟ್ ರ್ಯಾಂಕ್ ರಾಜು' ಅಲ್ಲಲ್ಲಿ ನೋಡಿದ್ದೇನೆ ಮತ್ತು ರಘುರಾಮ್ ಅವರ ನಿರ್ದೇಶನದ ಬಗ್ಗೆ ಹೆಚ್ಚು ಕೇಳಿದ್ದೇನೆ. ಈ ನಟ ಮತ್ತು ನಿರ್ದೇಶಕರಿಂದ ಕಲಿಯುವುದಕ್ಕೆ ಕಾತರಳಾಗಿದ್ದೇನೆ" ಎನ್ನುತ್ತಾರೆ ಅರ್ಚನಾ. 
ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುವುದಕ್ಕೂ ಮುಂಚಿತವಾಗಿ ಅವರು ಎರಡು ಮಲಯಾಳಂ ಸಿನೆಮಾಗಳಲ್ಲಿ ಕೆಲಸ ಮಾಡಿದ್ದಾರೆ. ಹೊಸ ಭಾಷೆ ಕಲಿಯುವುದರ ಬಗ್ಗೆ ಆತ್ಮವಿಶ್ವಾಸ ತೋರುವ ನಟಿ "ನನಗೆ ಮಲಯಾಳಂ ಚೆನ್ನಾಗಿ ಗೊತ್ತಿರುವುದರಿಂದ ಮತ್ತೊಂದು ದಕ್ಷಿಣ ಬಾರತದ ಭಾಷೆ ಕಲಿಯಲು ಕಷ್ಟವೇನಿಲ್ಲ" ಎನ್ನುತಾತರೆ. 
ನೈಜ ಘಟನೆಯೊಂದರ ಆಧಾರಿತ 'ಮಿಸ್ಸಿಂಗ್ ಬಾಯ್' ಸಿನೆಮಾದ ಅಡಿ ಶೀರ್ಷಿಕೆ 'ತಾಯಿ ಮತ್ತು ತಾಯಿನಾಡಿಗೆ' ಎಂದಿದೆ. ಹುಬ್ಬಳ್ಳಿಯಲ್ಲಿ ಕಳೆದು ಹೋಗುವ ಬಾಲಕನೊಬ್ಬನ ಕಥೆಯನ್ನು ಇನ್ಸ್ಪೆಕ್ಟರ್ ಲವಕುಮಾರ್ ಹೇಳುವ ನಿರೂಪಣೆ ಚಿತ್ರದಲ್ಲಿದೆ. ಸಿನೆಮಾದಲ್ಲಿ ಕಿರಣ್ ರಾಥೋಡ್ ಮತ್ತು ರವಿಶಂಕರ್ ಗೌಡ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. 
ವಿ ಹರಿಕೃಷ್ಣ ಸಂಗೀತ ಚಿತ್ರಕ್ಕಿದ್ದು, ಜಗದೀಶ್ ವಾಲೀ ಸಿನೆಮ್ಯಾಟೋಗ್ರಾಫರ್. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com