ಈ ವರದಿಯನ್ನು ತಾವು ಓದಿರುವುದಾಗಿ ಹೇಳುವ ಚಿಕ್ಕಣ್ಣ "ಅದು ನಿಜವಲ್ಲ. ಶ್ರೀನಿವಾಸ್ ನಿರ್ದೇಶನದ 'ಬಿಲ್ ಗೇಟ್ಸ್' ಸಿನೆಮಾದಲ್ಲಿ ನನಗೆ ಪಾತ್ರವಿರುವದು ನಿಜ ಆದರೆ ನಾನು ಹೀರೊ ಅಲ್ಲ. ಧಾರಾವಾಹಿ ನಟ ಶಿಶಿರ್ ಶಾಸ್ತ್ರಿ ಈ ಸಿನೆಮಾದ ಹೀರೊ. ನಾನು ಅವನ ಗೆಳೆಯನ ಪಾತ್ರದಲ್ಲಿ ನಟಿಸಿದ್ದೇನೆ" ಎಂದು ಸ್ಪಷ್ಟೀಕರಿಸುತ್ತಾರೆ.