'ಜನುಮನ ಜೋಡಿ' ಧಾರಾವಾಹಿಯಲ್ಲಿ ವಿಜಯ್ ಸಿಂಹ ಮತ್ತು ನೇಹಾ ಪಾಟೀಲ್
ಸಿನಿಮಾ ಸುದ್ದಿ
ನನ್ನ ಧಾರಾವಾಹಿಗಳು ಸಿನೆಮಾಗಳ ಗುಣಮಟ್ಟದವು: ರಾಕ್ಲೈನ್ ವೆಂಕಟೇಶ್
ರಾಕ್ಲೈನ್ ವೆಂಕಟೇಶ್ ನಿರ್ಮಾಪಕರಾಗಿ ದಕ್ಷಿಣ ಭಾರತದಲ್ಲಷ್ಟೇ ಅಲ್ಲ ಬಾಲಿವುಡ್ ನಲ್ಲಿಯೂ ಪ್ರಮುಖವಾಗಿ ಗುರುತಿಸಿಕೊಂಡವರು. ಕನ್ನಡ ಚಿತ್ರರಂಗದಲ್ಲಿ ಹಲವಾರು ಯೋಜನೆಗಳನ್ನು ನಿರ್ಮಿಸುತ್ತಿರುವ ರಾಕ್ಲೈನ್
ಬೆಂಗಳೂರು: ರಾಕ್ಲೈನ್ ವೆಂಕಟೇಶ್ ನಿರ್ಮಾಪಕರಾಗಿ ದಕ್ಷಿಣ ಭಾರತದಲ್ಲಷ್ಟೇ ಅಲ್ಲ ಬಾಲಿವುಡ್ ನಲ್ಲಿಯೂ ಪ್ರಮುಖವಾಗಿ ಗುರುತಿಸಿಕೊಂಡವರು. ಕನ್ನಡ ಚಿತ್ರರಂಗದಲ್ಲಿ ಹಲವಾರು ಯೋಜನೆಗಳನ್ನು ನಿರ್ಮಿಸುತ್ತಿರುವ ರಾಕ್ಲೈನ್ ಎರಡು ದಶಕದ ನಂತರ ಕಿರುತೆರೆಗೂ ಹಿಂದಿರುಗಿದ್ದಾರೆ.
ವೆಂಕಟೇಶ್ ಈಗ ಟಿವಿ ವಾಹಿನಿಯೊಂದಕ್ಕೆ ಧಾರಾವಾಹಿ 'ಜನುಮದ ಜೋಡಿ' ನಿರ್ಮಿಸುತ್ತಿದ್ದಾರೆ. ಈ ಧಾರಾವಾಹಿಯಲ್ಲಿ ವಿಜಯ್ ಸಿಂಹ ಮತ್ತು ನೇಹಾ ಪಾಟೀಲ್ ಮುಖ್ಯ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಈ ಹಿಂದೆ ರಾಕ್ಲೈನ್ 'ಆಶಾವಾದಿಗಳು' ಮತ್ತು 'ಮೈಲಿಗಲ್ಲಿಗಳು' ಎಂಬ ಧಾರಾವಾಹಿಗಳನ್ನು ನಿರ್ಮಿಸಿದ್ದರು.
ಕಿರುತೆರೆಗೆ ಬರಲು ಕಾರಣವೇನು ಎಂದು ನಿರ್ಮಾಪಕರನ್ನು ಪ್ರಶ್ನಿಸಿದಾಗ "ಕೆಲವು ನಟರು ಮತ್ತು ತಂತ್ರಜ್ಞರು ತಮ್ಮ ಯೋಜನೆಯನ್ನು ನಿರ್ಮಿಸಲು ನನ್ನನ್ನು ಕೇಳಿಕೊಳ್ಳುತ್ತಿದ್ದರು. ಸಿನೆಮಾದ ಗುಣಮಟ್ಟವಿರುವ ಸ್ಕ್ರಿಪ್ಟ್ ಜೊತೆಗೆ ಬರಲು ಹೇಳಿದೆ. ಆವಾಗಲೇ 'ಜನುಮದ ಜೋಡಿ' ಧಾರಾವಾಹಿ ಜನ್ಮ ತಳೆದದ್ದು. ಇದು ಮರುಸೃಷ್ಟಿಯ ಆಸಕ್ತಿದಾಯಕ ಕಥೆ" ಎನ್ನುತ್ತಾರೆ ವೆಂಕಟೇಶ್.
ರಘು ಶಿವಮೊಗ್ಗ ನಿರ್ದೇಶಿಸುತ್ತಿರುವ ಈ ಧಾರಾವಾಹಿ ಸದ್ಯಕ್ಕೆ ಪ್ರಸಾರವಾಗುತ್ತಿದೆ. 'ಜನುಮದ ಜೋಡಿ' ಮೂಲಕ ನಟಿ ನೇಹಾ ಪಾಟೀಲ್ ಕಿರು ತೆರೆಗೆ ಪಾದಾರ್ಪಣೆ ಮಾಡುತ್ತಿದ್ದಾರೆ. ರಾಕ್ಲೈನ್ ಪ್ರೊಡಕ್ಷನ್ಸ್ ಅಡಿ ನಿರ್ಮಾಣವಾಗುತ್ತಿರುವ ಧಾರಾವಾಹಿ ಇದಾಗಿರುವುದರಿಂದ ಅವರು ಒಪ್ಪಿಗೆ ನೀಡಿದ್ದಾರಂತೆ.
"ಜನರನ್ನು ಮನರಂಜಿಸುವ ಯಾವುದೇ ಕಲೆಯನ್ನು ಉದಾಸೀನ ಮಾಡುವಂತಿಲ್ಲ. ಅದು ಸಿನೆಮಾ ಆಗಿರಲಿ ಧಾರಾವಾಹಿಯಾಗಿರಲಿ ನಾನು ಸಣ್ಣದು ಎಂದುಕೊಳ್ಳುವುದಿಲ್ಲ. 300 ಭಾಗಗಳ ಧಾರಾವಾಹಿ ಹಲವಾರು ಜನರಿಗೆ ಉದ್ಯೋಗವನ್ನು ನೀಡಲಿದೆ" ಎನ್ನುತ್ತಾರೆ ನೇಹಾ.
ಈ ದೊಡ್ಡ ಬಜೆಟ್ ಧಾರಾವಾಹಿಯನ್ನು ರಾಜಾಸ್ಥಾನ, ಮರ್ಕೆರಾ ಮತ್ತು ಬೆಂಗಳೂರಿನಲ್ಲಿ ಚಿತ್ರೀಕರಿಸಲಾಗುತ್ತಿದೆಯಂತೆ. "ಸಿನೆಮಾಗಳಿಗೆ ಉಪಯೋಗಿಸುವ ಉಪಕರಣಗಳನ್ನೇ ಇದಕ್ಕೂ ಬಳಸಲಾಗುವುದು. ನನ್ನ ಧಾರಾವಾಹಿ ಸಿನೆಮಾದ ಗುಣಮಟ್ಟ ಹೊಂದಿರಲಿದೆ" ಎನ್ನುತ್ತಾರೆ ರಾಕ್ಲೈನ್.
ಸದ್ಯಕ್ಕೆ ಎಂಟು ಕನ್ನಡ ಯೋಜನೆಗಳನ್ನು ನಿರ್ಮಿಸುತ್ತಿರುವ ರಾಕಲೈನ್ ಶೀಘ್ರದಲ್ಲೇ ಮರಾಠಿ ಬ್ಲಾಕ್ ಬಸ್ಟರ್ ಸಿನೆಮಾ 'ಸೈರಾಟ್' ಸಿನೆಮಾದ ಕನ್ನಡ ರಿಮೇಕ್ ಅನ್ನು ಕೂಡ ಪ್ರಾರಂಭಿಸಲಿದ್ದಾರೆ. ಸದ್ಯಕ್ಕೆ ಮರಾಠಿ ಮೂಲದ ನಟಿ ಪಾತ್ರಕ್ಕೆ ಒಪ್ಪಿಕೊಂಡಿದ್ದು ನಟನ ಆಯ್ಕೆಯಲ್ಲಿದೆ ಚಿತ್ರತಂಡ. "ಜೊತೆಗೆ ಮನೋರಂಜನ್ ನಟನೆಯ ಯೋಜನೆಯು ಪ್ರಾರಂಭವಾಗಲಿದೆ. ಈ ಸಿನೆಮಾವನ್ನು ನಂದ ಕಿಶೋರ್ ನಿರ್ದೇಶಿಸಲಿದ್ದಾರೆ" ಎನ್ನುತ್ತಾರೆ ರಾಕ್ಲೈನ್ ವೆಂಕಟೇಶ್.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ