ರಮೇಶ್ ಅರವಿಂದ್
ಸಿನಿಮಾ ಸುದ್ದಿ
ಸೈನಿಕರಿಗೆ ಹೃದಯಸ್ಪರ್ಶಿ ಪತ್ರ ಬರೆದ ನಟ ರಮೇಶ್ ಅರವಿಂದ್: ವಿಡಿಯೋ ವೈರಲ್
ನಟ ರಮೇಶ್ ಅರವಿಂದ್ ದೇಶ ಕಾಯುವ ಸೈನಿಕರಿಗೆ ಭಾವಪೂರ್ಣ ಪತ್ರ ಬರೆದಿದ್ದಾರೆ. ಎಲ್ಲರನ್ನೂ ಕಾಯುತ್ತಿರುವ ವೀರ ಯೋಧರಿಗೆ ಅವರು ಥ್ಯಾಂಕ್ಸ್ ಹೇಳುವುದಕ್ಕೆಂದು ಪತ್ರ ..
ಬೆಂಗಳೂರು: ದೇಶಾದ್ಯಂತ 70 ಸ್ವಾತಂತ್ರ್ಯೋತ್ಸವ ಆಚರಣೆ ಮುಗಿದಿದೆ. ವಿವಿದೆಡೆ ಸ್ವತಂತ್ರ್ಯ ದಿನಾಚರಣೆಯನ್ನು ಸಂಭ್ರಮ ಸಡಗರಗಳಿಂದ ಆಚರಿಸಲಾಗಿದೆ. ಈ ಹೊತ್ತಿನಲ್ಲೇ ನಟ ರಮೇಶ್ ಅರವಿಂದ್ ದೇಶ ಕಾಯುವ ಸೈನಿಕರಿಗೆ ಭಾವಪೂರ್ಣ ಪತ್ರ ಬರೆದಿದ್ದಾರೆ. ಎಲ್ಲರನ್ನೂ ಕಾಯುತ್ತಿರುವ ವೀರ ಯೋಧರಿಗೆ ಅವರು ಥ್ಯಾಂಕ್ಸ್ ಹೇಳುವುದಕ್ಕೆಂದು ಪತ್ರ ಬರೆದಿದ್ದಾರೆ. ಅದನ್ನು ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ರಮೇಶ್ ಅರವಿಂದ್ ಅಪ್ ಲೋಡ್ ಮಾಡಿದ್ದಾರೆ.
ಪ್ರಿಯ ಯೋಧ,
ನಿಮ್ಮ ಕಣ್ಣು ಕಪ್ಪಾಗಿದೆಯಾ ಅಥವಾ ಕಂದು ಬಣ್ಣದ್ದಾಗಿದೆಯಾ? ನೀವೆಷ್ಟು ಉದ್ದ ಇದ್ದೀರಾ? ನಿಮ್ಮ ನಗೆ ಹೇಗಿದೆ? ನನಗೆ ನಿಮ್ಮ ಬಗ್ಗೆ ಯಾವೊಂದು ವಿಷಯವೂ ಗೊತ್ತಿಲ್ಲ. ಆದರೆ, ಒಂದು ವಿಷಯವಂತೂ ಸ್ಪಷ್ಟ. ನೀವೊಬ್ಬ ಅದ್ಭುತ ಮನುಷ್ಯ. ನಾನು ಕುಟುಂಬ ಸಮೇತನಾಗಿ ಬೆಂಗಳೂರಿನಲ್ಲಿ ನೆಮ್ಮದಿಯಾಗಿ ಶಾಪಿಂಗ್ ಮಾಡುತ್ತಿರಬೇಕಾದರೇ, ಅದಕ್ಕೆ ಕಾರಣ ನೀವೇ .


