ಬೆಂಗಳೂರು: ನಂದಕಿಶೋರ್ ನಿರ್ದೇಶನದ, ಮನೋರಂಜನ್ ಅವರ ಎರಡನೇ ಸಿನೆಮಾ 'ವೇಲೆಯಿಲ್ಲ ಪಟ್ಟಾದರಿ' (ವಿಐಪಿ) ಸಿನೆಮಾದ ಕನ್ನಡ ರಿಮೇಕ್ ಚಿತ್ರೀಕರಣ ಸೆಪ್ಟೆಂಬರ್ ನಿಂದ ಪ್ರಾರಂಭವಾಗಲಿದೆ. ರಾಕ್ ಲೈನ್ ಪ್ರೊಡಕ್ಷನ್ಸ್ ಸಂಸ್ಥೆ ನಿರ್ಮಿಸುತ್ತಿರುವ ಈ ಸಿನೆಮಾಗೆ ನಾಯಕನಟಿಯ ಶೋಧದಲ್ಲಿತ್ತು ಚಿತ್ರತಂಡ. ಈಗ ಮೂಲಗಳ ಪ್ರಕಾರ ಅಮಲಾ ಪೌಲ್ ನಟಿಸುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.