ವಿಶ್ವದಾದ್ಯಂತ ಏಕಕಲಾಕ್ಕೆ ಮುಂಗಾರು ಮಳೆ 2 ಬಿಡುಗಡೆ

'ರಂಗಿತರಂಗ' ಮತ್ತು 'ಗೋಧಿ ಬಣ್ಣ ಸಾಧಾರಣ ಮೈಕಟ್ಟು' ಸಿನೆಮಾಗಳಂತಹ ವಿದೇಶಿ ಯಶಸ್ಸು ಕನ್ನಡ ಚಿತ್ರೋದ್ಯಮಕ್ಕೆ ಹೊರದೇಶಗಳ ಮಾರುಕಟ್ಟೆಯನ್ನು ವಿಸ್ತರಿಸಿರುವುದು
ಮುಂಗಾರು ಮಳೆ 2 ಸಿನೆಮಾದಲ್ಲಿ ಗಣೇಶ್ ಮತ್ತು ನೇಹಾ ಶೆಟ್ಟಿ
ಮುಂಗಾರು ಮಳೆ 2 ಸಿನೆಮಾದಲ್ಲಿ ಗಣೇಶ್ ಮತ್ತು ನೇಹಾ ಶೆಟ್ಟಿ
ಬೆಂಗಳೂರು: 'ರಂಗಿತರಂಗ' ಮತ್ತು 'ಗೋಧಿ ಬಣ್ಣ ಸಾಧಾರಣ ಮೈಕಟ್ಟು' ಸಿನೆಮಾಗಳಂತಹ ವಿದೇಶಿ ಯಶಸ್ಸು ಕನ್ನಡ ಚಿತ್ರೋದ್ಯಮಕ್ಕೆ ಹೊರದೇಶಗಳ ಮಾರುಕಟ್ಟೆಯನ್ನು ವಿಸ್ತರಿಸಿರುವುದು ಸಂತಸದ ಸಂಗತಿ. 
ಈಗ ಮುಂಗಾರು ಮಳೆ 2 ಆ ಸಂತಸವನ್ನು ಇಮ್ಮಡಿಗೊಳಿಸಿದ್ದು, ಕರ್ನಾಟಕದಲ್ಲಿ ಬಿಡುಗಡೆಯಾಗುವ ದಿನವೇ, ವಿಶ್ವದ ಬೇರೆಡೆಗಳಲ್ಲಿ 100 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ ಕಾಣಲಿದೆ. ನಿರ್ದೇಶಕ ಶಶಾಂಕ್ ಹೇಳುವಂತೆ, ಕನ್ನಡ ಚಿತ್ರೋದ್ಯಮದಲ್ಲಿ ಈ ರೀತಿಯ ಬಿಡುಗಡೆ ಇದೇ ಮೊದಲು ಎನ್ನುವ ಅವರು "ಹೊರದೇಶಗಳಲ್ಲಿ ಬಿಡುಗಡೆಯಾಗಿರುವ ಕೆಲವು ಸಿನೆಮಾಗಳು ಒಳ್ಳೆಯ ಪ್ರತಿಕ್ರಿಯೆ ಪಡೆದಿದ್ದರೆ, ನಮ್ಮ ವಿಷಯದಲ್ಲಿ ಗಮನ ಸೆಳೆದಿರುವುದು ಟೀಸರ್. ಈಗ ನಮ್ಮ ಸಿನೆಮಾವನ್ನು ಹೊರದೇಶಗಳಲ್ಲಿ ಬಿಡುಗಡೆ ಮಾಡಲು ವಿದೇಶಿ ವಿತರಕರು ನಮ್ಮನ್ನು ಸಂಪರ್ಕಿಸಿದ್ದಾರೆ. ಅವುಗಳಲ್ಲಿ ಸದ್ಯಕ್ಕೆ 7 ಹಿಲ್ಸ್ ಎಂಟರ್ಟೈನ್ಮೆಂಟ್ ಜೊತೆಗೆ ಒಪ್ಪಂದ ಮಾಡಿಕೊಂಡಿದ್ದೇವೆ" ಎನ್ನುತ್ತಾರೆ. 
ಮುಂಗಾರು ಮಳೆ 2 ಕರ್ನಾಟಕದಲ್ಲಿ ಬಿಡುಗಡೆ ಕಂಡ ದಿನವೇ ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್, ದಕ್ಷಿಣ ಪೂರ್ವ ಏಷಿಯಾ, ಆಫ್ರಿಕಾ, ಇಂಗ್ಲೆಂಡ್, ಯುರೋಪ್, ಫ್ರಾನ್ಸ್, ಬೆಲ್ಜಿಯಂ, ಜರ್ಮನಿ, ಕೆನಡಾ, ಅಮೆರಿಕಾ, ಸ್ವೀಡನ್ ಮತ್ತು ಐರ್ಲೆಂಡ್ ಇನ್ನಿತರ ದೇಶಗಳಲ್ಲಿ ಬಿಡುಗಡೆಯಾಗಲಿದೆ.   
ಕನ್ನಡ ಚಿತ್ರರಂಗಕ್ಕೆ ಇದು ಹೆಮ್ಮೆಯ ವಿಷಯ ಎನ್ನುತ್ತಾರೆ ಶಶಾಂಕ್. "ನಾವು ದೊಡ್ಡದಾಗಿ ಚಿಂತಿಸುವುದಕ್ಕೆ ಇದು ಸಕಾಲ" ಎನ್ನುವ ಅವರು "ಇತ್ತೀಚಿಗೆ ವಿದೇಶದಲ್ಲಿ ಬಿಡುಗಡೆಯಾದ ಕನ್ನಡ ಚಿತ್ರಗಳಿದ್ದವು ಆದರೆ ಏಕಕಾಲಕ್ಕಲ್ಲ. ನಮಗೆ ಸಹಾಯ ಮಾಡುತ್ತಿರುವ ಮತ್ತೊಂದು ಸಂಗತಿಯೆಂದರೆ 2006 ರಲ್ಲಿ ಬಿಡುಗಡೆಯಾದ ಮುಂಗಾರು ಮಳೆ ಸಿನೆಮಾ ಈಗಾಗಲೇ ವಿದೇಶಗಳಲ್ಲಿ ಬ್ರಾಂಡ್ ಸೃಷ್ಟಿಸಿದೆ. ಆದುದರಿದ ಸಂಚಲನ ನಿರೀಕ್ಷಿಸಿದ್ದೆವು ಈಗ ಅದು ಮುಂಗಾರು ಮಳೆ 2 ಕ್ಕೆ ಸೃಷ್ಟಿಯಾಗಿದೆ. ನಾವು ಈಗ ಯೋಜನೆ ರೂಪಿಸಬೇಕಷ್ಟೆ" ಎನ್ನುತ್ತಾರೆ. ಹಾಗೆಯೇ ಕರ್ನಾಟಕ ಹೊರಗೆ ಆರು ಭಾರತೀಯ ನಗರಗಳಲ್ಲಿ ಸಿನೆಮಾ ಬಿಡುಗಡೆ ಮಾಡಲು ನಿರ್ಮಾಪಕರು ಚಿಂತಿಸುತ್ತಿದ್ದಾರೆ. 
"ನಾವು ಚೆನ್ನೈ, ಹೈದರಾಬಾದ್, ದೆಹಲಿ, ಮುಂಬೈ, ಪುಣೆ ಮತ್ತು ಗೋವಾದಲ್ಲಿ ಸಿನೆಮಾ ಬಿಡುಗಡೆ ಮಾಡಲು ಎದುರು ನೋಡುತ್ತಿದ್ದೇವೆ "ಎನ್ನುತ್ತಾರೆ ಶಶಾಂಕ್. 
ಗಣೇಶ್ ಮತ್ತು ನೇಹಾ ಶೆಟ್ಟಿ ಮುಖ್ಯಪಾತ್ರಗಳಲ್ಲಿ ನಟಿಸಿರುವ ಸಿನೆಮಾದ ಆಡಿಯೋ ಈಗಾಗಲೇ ಜನಪ್ರಿಯವಾಗಿದೆ ಹಾಗೂ ರವಿಚಂದ್ರನ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com