'ದ ಲಾಸ್ಟ್ ಕನ್ನಡಿಗ' ಶಾರ್ಟ್ ಫಿಲಂನಲ್ಲಿ ನಟಿಸುತ್ತಿರುವ ವಶಿಷ್ಠ

'ಗೋಧಿ ಬಣ್ಣ ಸಾಧಾರಣ ಮೈಕಟ್ಟು' ಸಿನೆಮಾದ ಒಳ್ಳೆಯ ಖಳನಾಯಕನ ಪಾತ್ರದ ಮೂಲಕ ವಿಶೇಷ ಗಮನ ಸೆಳೆದ ವಶಿಷ್ಠ ನಾಯಕನಟನ ಪಾತ್ರಗಳಿಗೆ ಅಂಟಿ ಕೂತವರಲ್ಲ. ತನ್ನ ನಟನೆಗೆ ಸವಾಲೊಡ್ಡುವ
ನಟ ವಶಿಷ್ಠ
ನಟ ವಶಿಷ್ಠ
ಬೆಂಗಳೂರು: 'ಗೋಧಿ ಬಣ್ಣ ಸಾಧಾರಣ ಮೈಕಟ್ಟು' ಸಿನೆಮಾದ ಒಳ್ಳೆಯ ಖಳನಾಯಕನ ಪಾತ್ರದ ಮೂಲಕ ವಿಶೇಷ ಗಮನ ಸೆಳೆದ ವಶಿಷ್ಠ ಎನ್ ಸಿಂಹ ನಾಯಕನಟನ ಪಾತ್ರಗಳಿಗೆ ಅಂಟಿ ಕೂತವರಲ್ಲ. ತನ್ನ ನಟನೆಗೆ ಸವಾಲೊಡ್ಡುವ ಪಾತ್ರಗಳ ಆಯ್ಕೆಯಲ್ಲಿ ಸದಾ ಮುನ್ನುಗ್ಗುವ ನಟ ಮುಂದಿನ ಆರರಿಂದ ಎಂಟು ತಿಂಗಳವರೆಗೆ ಕಾರ್ಯನಿರತ. 
ಕಲಾತ್ಮಕ ಬ್ಯಾನರ್ ಅಡಿ ನಿರ್ಮಾವಾಗುತ್ತಿರುವ 'ದ ಲಾಸ್ಟ್ ಕನ್ನಡಿಗ' ಶಾರ್ಟ್ ಫಿಲಂನಲ್ಲಿ ಈಗ ವಸಿಷ್ಠ ನಟಿಸಿದ್ದಾರೆ. ಶ್ರುತಿ ಹರಿಹರನ್ ನಿರ್ಮಿಸುತ್ತಿರುವ ಈ ಸಿನೆಮಾವನ್ನು ಮದನ್ ರಾಮವೆಂಕಟೇಶ್ ನಿರ್ದೇಶಿಸುತ್ತಿದ್ದು, ಚಿತ್ರೀಕರಣ ಸಂಪೂರ್ಣಗೊಂಡಿದೆ. 
"ನನ್ನ 'ಗೋಧಿ ಬಣ್ಣ..'ದ ಪಾತ್ರ ಗಮನ ಸೆಳೆಯುವುದಕ್ಕೆ ಮುಂಚಿತವಾಗಿಯೇ ಶಾರ್ಟ್ ಫಿಲಂ ಮಾಡಲು ಯೋಜಿಸಿದ್ದೆ. ಶಾರ್ಟ್ ಫಿಲಂ ಎಷ್ಟು ಗಮನ ಸೆಳೆಯಲು ಸಾಧ್ಯವಾಗುತ್ತಿತ್ತೋ ನನಗೆ ಗೊತ್ತಿಲ್ಲ ಮತ್ತು ಈ ಹಿಂದೆ ಶರ್ಟ್ ಫಿಲಂನಲ್ಲಿ ನಟಿಸಲು ನನಗೆ ಯಾರು ಕರೆದಿರಲಿಲ್ಲ" ಎನ್ನುವ ನಟ "ಶ್ರುತಿ, ಮದನ್ ಮತ್ತು ನಾನು ಒಂದಾದ ಕೆಲವೇ ಕ್ಷಣಗಳಲ್ಲಿ ಹಲವಾರು ಯೋಜನೆಗಳು ಹೊರಬಂದವು. ಶಾರ್ಟ್ ಫಿಲಂಗಳು ಸೃಜನಶೀಲರಿಗೆ ಒಳ್ಳೆಯ ಅವಕಾಶ ನೀಡುತ್ತವೆ. ನಾನು ಅದರ ಭಾಗವಾಗಲು ನಿಶ್ಚಯಿಸಿದೆ" ಎನ್ನುತ್ತಾರೆ ವಶಿಷ್ಠ. 
'ದ ಲಾಸ್ಟ್ ಕನ್ನಡಿಗ'  ಏಕೆ ಎಂಬ ಪ್ರಶ್ನೆಗೆ "ನಾವು ಕನ್ನಡಿಗರು ಹುಲಿಗಳಂತೆ ಅಳಿವಿನಂಚಿನಲ್ಲಿದ್ದೇವೆ. ಇಂದು ಕನ್ನಡಿಗರು ಎಂದು ಕರೆದುಕೊಳ್ಳುವವರಿಗೂ ಒಂದು ವಾಕ್ಯ ಕನ್ನಡದಲ್ಲೇ ಸರಿಯಾಗಿ ಮಾತನಾಡಲು ಕಷ್ಟ. ನಾನು ಕನ್ನಡ ಮಾಧ್ಯಮದ ಶಾಲೆಯಲ್ಲಿಯೇ ಓದಿದ್ದರು ಬೇರೆ ಭಾಷೆಗಳ ಮತ್ತು ಸಂಸ್ಕೃತಿಯ ಪ್ರಭಾವ ಎಷ್ಟಿದೆ ಎಂದರೆ ಯಾವುದೇ ಸನ್ನಿವೇಶದಲ್ಲಿ ಪೂರ್ತಿ ಕನ್ನಡಿಗನಾಗಿರಲು ಕಷ್ಟ. ಆದುದರಿಂದ ನಾವು ಅಳಿವಿನಂಚಿನ ಜೀವಿಗಳು" ಎನ್ನುತ್ತಾರೆ ವಶಿಷ್ಠ. 
ಈ ಸಿನೆಮಾದಲ್ಲಿ ರವಿಕಿರಣ್ ಮತ್ತು ಜಯಪ್ರಕಾಶ್ ಕೂಡ ನಟಿಸುತ್ತಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com