'ಮಡಮಕ್ಕಿ'ಯಲ್ಲಿ ಡೈಲಾಗ್ ಕಿಂಗ್ ಗೆ ಮಾತು ಕಡಿಮೆಯಂತೆ!

ವಿನಯ್ ಪ್ರೀತಮ್ ತಮ್ಮ ಚೊಚ್ಚಲ ನಿರ್ದೇಶನದಲ್ಲಿ ಭೂಗತ ಕಥೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ನಾಳೆ ಬಿಡುಗಡೆಯಾಗಲಿರುವ 'ಮಡಮಕ್ಕಿ', ಸಾಧು ಶೆಟ್ಟಿ ಎಂಬ ಭೂಗತ ದೊರೆಯ ಕಥೆ ಆಧಾರಿತ
ಡೈಲಾಗ್ ಕಿಂಗ್ ಸಾಯಿಕುಮಾರ್
ಡೈಲಾಗ್ ಕಿಂಗ್ ಸಾಯಿಕುಮಾರ್
ಬೆಂಗಳೂರು: ವಿನಯ್ ಪ್ರೀತಮ್ ತಮ್ಮ ಚೊಚ್ಚಲ ನಿರ್ದೇಶನದಲ್ಲಿ ಭೂಗತ ಕಥೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ನಾಳೆ ಬಿಡುಗಡೆಯಾಗಲಿರುವ 'ಮಡಮಕ್ಕಿ', ಸಾಧು ಶೆಟ್ಟಿ ಎಂಬ ಭೂಗತ ದೊರೆಯ ಕಥೆ ಆಧಾರಿತ ಎನ್ನಲಾಗಿದೆ. ಉಡುಪಿಯ ಗ್ರಾಮವೊಂದರಲ್ಲಿ ಜನಿಸಿದ ಶೆಟ್ಟಿ ಮುಂಬೈನ ಶಿವಸೇನೆಯೊಂದಿಗೆ ಆಕಸ್ಮಿಕವಾಗಿ ಪ್ರಾದೇಶಿಕ ಮುಖಂಡನೊಬ್ಬನನ್ನು ಕೊಂದು ಅಪರಾಧಿ ಜಗತ್ತಲಿಗೆ ಪ್ರವೇಶ ಪಡೆದ ಕಥಾಹಂದರವನ್ನು ಸಿನೆಮಾ ಹೊಂದಿದೆ. 
ತನುಷ್, ಸುಪಾರಿ ಹಂತಕನ ಪಾತ್ರ ಮಾಡಿದ್ದರೆ, ಸಾಯಿಕುಮಾರ್ ಆಸಕ್ತಿದಾಯಕ ಪಾತ್ರವೊಂದನ್ನು ನಿರ್ವಹಿಸಿದ್ದಾರೆ. 200 ಕ್ಕೂ ಹೆಚ್ಚು ಸಿನೆಮಾಗಳಲ್ಲಿ ನಟಿಸಿರುವ ಡೈಲಾಗ್ ಕಿಂಗ್ ಸಾಯಿಕುಮಾರ್ ಸಿನೆಮಾದಲ್ಲಿ ಕೆಲವೇ ಮಾತುಗಳನ್ನಾಡುತ್ತಾರೆ ಎಂದಿದ್ದಾರೆ ನಿರ್ದೇಶಕ ವಿನಯ್. 
"ಅವರು ಎ ಟಿ ಎಸ್ ಅಧಿಕಾರಿಯ ಪಾತ್ರ ನಿರ್ವಹಿಸುತ್ತಿದ್ದಾರೆ. ಅವರಿಗಿರುವ ಸಂಭಾಷಣೆ ಕಡಿಮೆ ಆದರೆ ಪಂಚಿಂಗ್ ಡೈಲಾಗ್ ಗಳಿವೆ. ಅವರ ಆಂಗಿಕ ಅಭಿನಯವೇ ಹೆಚ್ಚು ಮಾತನಾಡಲಿದೆ" ಎನ್ನುತ್ತಾರೆ ನಿರ್ದೇಶಕ. 
ಭೂಗತ ಪ್ರಾಕಾರದೊಂದಿಗೆ ಪ್ರಯೋಗಕ್ಕೆ ಇಳಿದಿರುವ ಚೊಚ್ಚಲ ನಿರ್ದೇಶಕ, ಮಂಗಳೂರು ಮತ್ತು ಮುಂಬೈ ನ ಭೂಗತ ಸಂಪರ್ಕವನ್ನು ಸಿನೆಮಾದಲ್ಲಿ ಹಿಡಿದಿಡಲಿದ್ದಾರಂತೆ. 
"ಬೆಂಗಳೂರಿನಿಂದ ಮುಂಬೈಗೆ ತೆರಳಿ ಮತ್ತೆ ಬೆಂಗಳೂರಿಗೆ ಹಿಂದಿರುಗುವ ಸಾಧುವಿನ ಕಥೆ ಸಿನಿಮಾದಲ್ಲಿದೆ. 70% ಚಿತ್ರೀಕರಣ ಕಾಡುಗಳಲ್ಲಿಯೇ ಮಾಡಿದ್ದೇವೆ" ಎನ್ನುತ್ತಾರೆ ವಿನಯ್. 
ನಿರ್ದೇಶಕನಾಗುವುದಕ್ಕೂ ಮುಂಚಿತವಾಗಿ ವಿನಯ್ ಅವರು ಸಂಗೀತ ನಿರ್ದೇಶಕ ವಿ ಮನೋಹರ್ ಬಳಿ ಸಹಾಯಕನಾಗಿ ಕೆಲಸ ಮಾಡುತ್ತಿದ್ದರಲ್ಲದೆ ಅವರ ಬ್ಯಾನರ್ ಅಡಿ ನಿರ್ಮಾಣವಾದ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. 
ಶಿವಣ್ಣ ದಾಸನಪುರ ನಿರ್ಮಿಸಿರುವ ಈ ಸಿನೆಮಾದಲ್ಲಿ ನಿಖಿತಾ ನಾರಾಯಣ್ ನಾಯಕ ನಟಿಯಾಗಿದ್ದು, ತಾರಾ, ಮುನಿ, ಕರಿಸುಬ್ಬು ಮತ್ತು ರಾಜೇಂದ್ರ ಕರಣ ತಾರಾಗಣದ ಭಾಗವಾಗಿದ್ದಾರೆ. 
'ಮಡಮಕ್ಕಿ'ಗೆ ಎನ್ ಅನೂಪ್ ಸೀಳಿನ್ ಸಂಗೀತ ನೀಡಿದ್ದಾರೆ.  

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com