'ಚಕ್ರವರ್ತಿ'ಯಲ್ಲಿ ಪೊಲೀಸ್ ಪಾತ್ರದಲ್ಲಿ ಆದಿತ್ಯ

'ಚಕ್ರವರ್ತಿ' ಸಿನೆಮಾದಲ್ಲಿ ನಟಿಸುತ್ತಿರುವ ಆದಿತ್ಯ ಇಂದು ಮೈಸೂರಿನಲ್ಲಿ ಚಿತ್ರೀಕರಣಕ್ಕೆ ಚಿತ್ರತಂಡ ಸೇರಲಿದ್ದಾರೆ. ನಿರ್ದೇಶಕ ಚಿಂತನ್ ಹೇಳುವಂತೆ ಆದಿತ್ಯ ಪೊಲೀಸ್ ಪಾತ್ರದಲ್ಲಿ ನಟಿಸುತ್ತಿದ್ದಾರೆ.
ನಟ ಆದಿತ್ಯ
ನಟ ಆದಿತ್ಯ
Updated on
ಬೆಂಗಳೂರು: 'ಚಕ್ರವರ್ತಿ' ಸಿನೆಮಾದಲ್ಲಿ ನಟಿಸುತ್ತಿರುವ ಆದಿತ್ಯ ಇಂದು ಮೈಸೂರಿನಲ್ಲಿ ಚಿತ್ರೀಕರಣಕ್ಕೆ ಚಿತ್ರತಂಡ ಸೇರಲಿದ್ದಾರೆ. ನಿರ್ದೇಶಕ ಚಿಂತನ್ ಹೇಳುವಂತೆ ಆದಿತ್ಯ ಪೊಲೀಸ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. 
"ಇದು ಬಹಳ ಪ್ರಮುಖ ಪಾತ್ರ, ಆದಿತ್ಯ ಮಾತ್ರ ಇದಕ್ಕೆ ನ್ಯಾಯ ಒದಗಿಸಬಲ್ಲರು" ಎನ್ನುತ್ತಾರೆ ಚಿಂತನ್. 
ಈ ಹಿಂದೆ 'ಸ್ನೇಹಾನಾ ಪ್ರೀತಿನಾ' ಸಿನೆಮಾದಲ್ಲಿ ಆದಿತ್ಯಾ ಮತ್ತು ದರ್ಶನ್ ಒಟ್ಟಿಗೆ ನಟಿಸಿದ್ದರು. 
ಈಗ ಈ ಜೋಡಿ ಮತ್ತೆ ಒಟ್ಟಾಗಿರುವುದು ಅವರ ಅಭಿಮಾನಿಗಳಿಗೆ ಹರ್ಷ ತರಲಿದೆ ಎನ್ನುತ್ತಾರೆ ನಿರ್ದೇಶಕ. ಅಣಜಿ ನಾಗರಾಜ್ ಮತ್ತು ಸಿದ್ಧಾಂತ್ ನಿರ್ಮಿಸುತ್ತಿರುವ 'ಚಕ್ರವರ್ತಿ' ಸಿನೆಮಾದಲ್ಲಿ ಸೃಜನ್ ಲೋಕೇಶ್ ಕೂಡ ನಟಿಸುತ್ತಿದ್ದಾರೆ. ಈ ಹಿಂದೆ 'ಎದೆಗಾರಿಕೆ'ಯಲ್ಲಿ ಅವರು ಆದಿತ್ಯ ಜೊತೆಗೆ ನಟಿಸಿದ್ದರು. 
ಈಮಧ್ಯೆ ಆದಿತ್ಯ 'ಬೆಂಗಳೂರು ಅಂಡರ್ವರ್ಲ್ಡ್' ಸಿನೆಮಾಗೆ ಚಿತ್ರೀಕರಣ ಮುಗಿಸಿದ್ದಾರೆ. ಪಿ ಎನ್ ಸತ್ಯ ನಿರ್ದೇಶನದ ಈ ಚಿತ್ರದ ಡಬ್ಬಿಂಗ್ ಕಾರ್ಯ ಪ್ರಗತಿಯಲ್ಲಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com