ಖ್ಯಾತಿ ಅಡ್ಡ ಪರಿಣಾಮಗಳನ್ನು ಹೊಂದಿರುತ್ತದೆ: ಕಮಲ್ ಹಾಸನ್

ಇತ್ತೀಚೆಗೆ ತಮ್ಮ ಮೊಣಕಾಲು ಮುರಿತದಿಂದಾಗಿ ಟಾಲಿವುಡ್ ನಟ ಕಮಲ್ ಹಾಸನ್ ರಿಗೆ ತಮ್ಮ ವಿಶಿಷ್ಟ ಹಾಸ್ಯ ಮತ್ತು ಶಕ್ತಿಯನ್ನು...
ದಕ್ಷಿಣ ಭಾರತದ ಹಿರಿಯ ನಟ ಕಮಲ್ ಹಾಸನ್
ದಕ್ಷಿಣ ಭಾರತದ ಹಿರಿಯ ನಟ ಕಮಲ್ ಹಾಸನ್
ಇತ್ತೀಚೆಗೆ ತಮ್ಮ ಮೊಣಕಾಲು ಮುರಿತದಿಂದಾಗಿ ಟಾಲಿವುಡ್ ನಟ ಕಮಲ್ ಹಾಸನ್ ರಿಗೆ ತಮ್ಮ ವಿಶಿಷ್ಟ ಹಾಸ್ಯ ಮತ್ತು ಶಕ್ತಿಯನ್ನು ತಮ್ಮ ಧ್ವನಿಯಲ್ಲಿ ಸದ್ಯಕ್ಕೆ ನೀಡಲು ಸಾಧ್ಯವಾಗುತ್ತಿಲ್ಲ. ''ನಾನೀಗ ಕುಂಟುತ್ತಾ ನಡೆಯುತ್ತಿದ್ದೇನೆ. ಸದ್ಯದಲ್ಲಿಯೇ ನಾನು ಗುಣಮುಖನಾಗಿ ನಡೆಯಲು ಆರಂಭಿಸುತ್ತೇನೆ ಎಂದು ಆತ್ಮವಿಶ್ವಾಸದಿಂದ ಹೇಳುತ್ತಾರೆ ಪದ್ಮಭೂಷಣ ಕಮಲ್ ಹಾಸನ್. 
ಖ್ಯಾತ ನಟ ಕಮಲ್ ಹಾಸನ್ ಅವರಿಗೆ ಫ್ರಾನ್ಸ್ ಸರ್ಕಾರ 'ದ ನೈಟ್ ಆಫ್ ದ ಆರ್ಡರ್ ಆಫ್ ಆರ್ಟ್ ಆ್ಯಂಡ್ ಲೆಟರ್ಸ್' ಪ್ರಶಸ್ತಿಯನ್ನು ನೀಡಿ ಗೌರವಿಸಲು ನಿರ್ಧರಿಸಿದೆ.ಕಲಾ ಕ್ಷೇತ್ರದಲ್ಲಿ ಕಮಲ್ ಹಾಸನ್ ರ ಜೀವಮಾನ ಸಾಧನೆ ಗುರುತಿಸಿ ಈ ಪ್ರಶಸ್ತಿ ಪ್ರದಾನ ಮಾಡಲು ಫ್ರಾನ್ಸ್ ಸರ್ಕಾರ ತೀರ್ಮಾನಿಸಿದೆ. ಈ ಸಂದರ್ಭದಲ್ಲಿ ದ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ಅವರನ್ನು ಮಾತನಾಡಿಸಿದಾಗ: 
ಪ್ರ: ಫ್ರಾನ್ಸ್ ಸರ್ಕಾರದ ಈ ಅತ್ಯುನ್ನತ ಗೌರವಕ್ಕೆ ನೀವು ಆಯ್ಕೆಯಾಗಿರುವ ಬಗ್ಗೆ ಅಧಿಕೃತವಾಗಿ ನಿಮಗೆ ಪತ್ರ ಬಂದಾಗ ಏನನ್ನಿಸಿತು?
ಉ:ಶಿವಾಜಿ ಗಣೇಶನ್ ಮತ್ತು ಸತ್ಯಜಿತ್ ರೇ ಅವರಂತವರಿಗೆ ಸಿಕ್ಕಿದ ಗೌರವ ನನಗೆ ಸಿಕ್ಕಿದೆ. ಆ ನಂತರ ನಾನು ನನ್ನ ಶಾಲಾ ಸ್ನೇಹಿತರೊಬ್ಬರಿಗೆ ಕರೆ ಮಾಡಿದಾಗ ಗೊತ್ತಾಯಿತು. ಹಲವರಿಗೆ ಇಂತಹ ಎರಡೆರಡು ಗೌರವ ಸಿಕ್ಕಿದೆ ಎಂದು, ಆದರೆ ಕೆಲವರು ಅದನ್ನು ದೊಡ್ಡ ವಿಷಯ ಮಾಡುವುದಿಲ್ಲ. ಖ್ಯಾತಿ ಅದರ ಅಡ್ಡ ಪರಿಣಾಮಗಳನ್ನು ಹೊಂದಿರುತ್ತದೆ.! ನಾನು ಸತ್ಯಜಿತ್ ರೇಯವರನ್ನು ಭೇಟಿ ಮಾಡಿದ ಸಂದರ್ಭ ನೆನಪು ಮಾಡಿಕೊಂಡೆ. ನಾನು ಯಾವಾಗಲೂ ಅವರನ್ನು ಸಿಟ್ಟಿನ ಮುನಿ ಎಂದು ಯೋಚಿಸುತ್ತಿದ್ದೆ. ಸಮಾಜದ ಓರೆಕೋರೆಗಳಿಗೆ ಉತ್ತರವಾಗಿರುತ್ತಿದ್ದವು ಅವರು ತಯಾರಿಸುತ್ತಿದ್ದ ಚಿತ್ರಗಳು. ಅವರು ಚಿತ್ರವನ್ನು ಕಪ್ಪು-ಬಿಳುಪಿಗೆ ಬದಲಾಗಿ ಕಲರ್ ನಲ್ಲಿ ಶೂಟ್ ಮಾಡಬೇಕೆಂದು ನಾನು ಬಯಸುತ್ತಿದ್ದೆ.ಆದರೆ ಅದಕ್ಕೆ ಅವರಲ್ಲಿ ಸಾಕಷ್ಟು ಹಣವಿರಲಿಲ್ಲ ಎಂದು ಆಮೇಲೆ ಗೊತ್ತಾಯಿತು. ನಾನು ಬಾಂಬೆಯಲ್ಲಿ ವಿ.ಶಾಂತರಾಮ್ ಅವರ ರಾಜ್ ಕಮಲ್ ಸ್ಟುಡಿಯೋದಲ್ಲಿ ಶೂಟಿಂಗ್ ನಲ್ಲಿದ್ದೆ. ರೇಯವರು ಆಗ ಅವರ ಚಿತ್ರವೊಂದನ್ನು ಅದರ ಜೊತೆ ಸೇರಿಸುತ್ತಿದ್ದಾರೆಂದು ಕೇಳಿದಾಗ ಧೈರ್ಯಮಾಡಿ ಅವರನ್ನು ಭೇಟಿ ಮಾಡಲು ಹೋದೆ. ಅವರು ನನ್ನತ್ತ ಮುಗುಳ್ನಕ್ಕು, ಹಾಯ್ ಕಮಲ್! ಎಂದರು. ನನ್ನ ಹೆಸರು ಕೂಡ ಅವರಿಗೆ ಗೊತ್ತಾಗಿದೆ ಅಂದಾಗ ನನಗೆ ಆಶ್ಚರ್ಯವಾಯಿತು. ನೀನು "ಏಕ್ ದುಜೆ ಕೆ ಲಿಯೇ' ಗಾಯ್ ಎಂದರು. ನಾನು ಚಿತ್ರವನ್ನು ನೋಡಲಿಲ್ಲ. ಆದರೆ ಆ ಹಾಡು ಹತ್ತಿರದ ಥಿಯೇಟರ್ ನಲ್ಲಿ ಪ್ರತಿರಾತ್ರಿ ಅನುರಣಿಸುತ್ತಿರುತ್ತದೆ, ಅದು ನನ್ನ ಲಾಲಿ ಹಾಡು. ನನ್ನ ಬಗ್ಗೆ ನಿಮಗೆ ನೆನಪಿರುವುದಕ್ಕೆ ನನಗೆ ಸಂತೋಷವಾಗುತ್ತಿದೆ ಎಂದು ನಾನು ಹೇಳಿದೆ. 
ಪ್ರ: ನೀವು ನಿಮ್ಮನ್ನು ಶಿವಾಜಿ ಗಣೇಶನ್ ಅವರ ಉತ್ತರಾಧಿಕಾರಿ ಎಂದು ಹೇಳಿಕೊಳ್ಳಲು ಹೆಮ್ಮೆ ಪಡುತ್ತೀರಿ, ಮತ್ತು ಅದರ ಜತೆಗೆ...
ಉ: ನಾಗೇಶ್ ಅವರ..ವಿಜ್ಞಾನ ನಟಿಸುವ ಡಿಎನ್ಎಯನ್ನು ಹೊಂದಾಣಿಕೆ ಮಾಡಲು ಮಾರ್ಗ ಕಂಡುಕೊಂಡರೆ ನೀವು ಶಿವಾಜಿ ಮತ್ತು ನಾಗೇಶ್ ಅವರ ಡಿಎನ್ಎಯನ್ನು ನನ್ನಲ್ಲಿ ಕಾಣಬಹುದು. ನಿಜ ಹೇಳಬೇಕೆಂದರೆ ನೀವು ಟಿ.ಎಸ್.ಬಾಲಯ್ಯ ಅವರ ಗುಣಗಳನ್ನು ಸಬ್ಬಾಸ್ ನಾಯ್ಡು ಪಾತ್ರದಲ್ಲಿ ಕಾಣಬಹುದು. ನಾನು ಮಾತನಾಡುವಾಗ ನಿಮಗೆ ಮೇಳಗೀತದಂತೆ ಕೇಳಿಸಬಹುದು. ಇದು ನನ್ನ ಮಾತು ಮಾತ್ರವಲ್ಲ. ಹಾಗಾಗಿ ಯಾವುದೇ ಪ್ರಶಸ್ತಿಯನ್ನು ನಾನು ಸ್ವೀಕರಿಸುವಾಗಲೂ ನಮ್ರನಾಗಿ ತೆಗೆದುಕೊಳ್ಳುತ್ತೇನೆ, ಏಕೆಂದರೆ ನಾನು ಉತ್ತಮ ಪೋಷಕರನ್ನು ಹೊಂದಿದ್ದೆ.
ಪ್ರ: ಸಬ್ಬಾಸ್ ನಾಯ್ಡ್ ಚಿತ್ರ ಈಗಾಗಲೇ ತುಂಬಾ ತಡವಾಗಿದೆ, ಹೇಗೆ ನೀವು ನಿರ್ಮಾಣವನ್ನು ನಿಭಾಯಿಸುತ್ತೀರಿ?
ಉ: ಹೀಗೆ ಚಿತ್ರ ತಡವಾಗುವುದು ನಮ್ಮ ಆರ್ ಕೆ ಎಫ್ಐ ಬ್ಯಾನರ್ ಗೆ ಹೊಸದೇನಲ್ಲ. ನಿಜ ಹೇಳಬೇಕೆಂದರೆ, ನಾವು 1989ರಲ್ಲಿ ಅಪೂರ್ವ ಸಗೋದರಗ್ಗಲ್  ಚಿತ್ರದ ಒಂದು ಇಡೀ ಶೆಡ್ಯೂಲ್ ನ್ನು ಮುಗಿಸಿ ಒಂದು ದಿನ ನಿಲ್ಲಿಸಿ, ಏನೋ ಸರಿಯಾಗಿ ಹೋಗುತ್ತಿಲ್ಲ ಎಂದೆ. ಪಂಚು ಸರ್ ಅವರನ್ನು ಕರೆದು ಅವರಿಗೆ ನಾವು ಶೂಟ್ ಮಾಡಿದ್ದನ್ನು ತೋರಿಸಿದೆವು. ಅವರು ತಕ್ಷಣ ಅಪ್ಪುವನ್ನು ತೋರಿಸಿ, ಇವರು ಚಿತ್ರದ ಹೀರೋ, ರಾಜು ಅಲ್ಲ ಎಂದರು. ಅವರು ಏನು ನೋಡಿದರು ಅದರಿಂದ ಕಥೆಯ ಸಾರಾಂಶವನ್ನು ಹೇಳಲು ಹೇಳಿದೆ. ಆಗ ಅವರು ಮನಮೋಹನ್ ದೇಸಾಯಿಯವರ ಕಥೆ ಇಬ್ಬರು ಕಳೆದು ಹೋಗಿ ಸಹೋದರರು ಸಿಕ್ಕಿದ ಕಥೆ ನೀಡಿದರು. ಅವರಿಗೆ ಧನ್ಯವಾದ ಹೇಳಿ, ಇನ್ನು ನಾನಿದನ್ನು ನನಗೆ ಬೇಕಾದಂತೆ ಚಿತ್ರ ಮಾಡಿಕೊಳ್ಳುತ್ತೇನೆ ಎಂದೆ.
ಪ್ರ: ಈಗಿನ ಚಿತ್ರಗಳಲ್ಲಿ ಸಹಜ, ಸ್ವಾಭಾವಿಕ ಕ್ರಿಯಾಶೀಲ ವಾತಾವರಣ ಅಸ್ಥಿತ್ವದಲ್ಲಿಲ್ಲ ಎಂದು ನಿಮಗೆ ಅನಿಸುತ್ತದೆಯೇ? ಈಗಲೂ ನೀವು ಇತರ ನಿರ್ದೇಶಕರು, ಬರಹಗಾರರ ಜೊತೆ ಕೆಲಸ ಮಾಡಲು ಬಯಸುತ್ತೀರಾ?
ಉ: ಖಂಡಿತ, ನನ್ನ ಈಗಿನ ಚಿತ್ರ ಅತುಲ್ ತಿವಾರಿ ಇನ್ನೊಂದು ನಿರ್ಮಾಣದ ಜೊತೆ ಬ್ಯುಸಿಯಾಗಿದೆ. ಶೂಟಿಂಗ್ ಸಮಯದಲ್ಲಿ ಬರಹಗಾರರು ನನ್ನ ಜೊತೆಗಿರಬೇಕು. ಚರ್ಚೆಯ ಅರ್ಧದಲ್ಲಿ ನಾವು ಸೌರಭ್ ಶುಕ್ಲಾ ಎಂಬ ಹೆಸರನ್ನಿಟ್ಟೆವು. ನಾನು ಅವರನ್ನು ಆಯ್ಕೆ ಮಾಡಿಕೊಳ್ಳಲು ಕಾರಣ, ನಾನೀಗಾಗಲೇ ಅವರ ಜೊತೆ ಮುಂಬೈ ಎಕ್ಸ್ ಪ್ರೆಸ್ ಚಿತ್ರದಲ್ಲಿ ಕೆಲಸ ಮಾಡಿದ್ದೇನೆ. ಶುಕ್ಲ ಅವರು ಬೆಂಗಾಳಿಯಾಗಿರುವುದರಿಂದ ಅವರಿಗೆ ಹಿಂದಿಯಲ್ಲಿ ಬರೆಯಲು ಚೆನ್ನಾಗಿ ಗೊತ್ತಿದೆ, ಅವರಿಂದ ನಾನು ಹಿಂದಿಯಲ್ಲಿ ಬರೆಯುವುದನ್ನು ಕಲಿತೆ.ಸಿನಿಮಾವನ್ನು ಒಬ್ಬರೇ ಮಾಡಲು ಸಾಧ್ಯವಿಲ್ಲ. ಸಿನಿಮಾದ ಪ್ರತಿ ವಿಭಾಗವೂ ಒಂದಕ್ಕೊಂದು ಪೂರಕವಾಗಿ ಕೆಲಸ ಮಾಡಬೇಕು. ಸಿನಿಮಾ ನಿಜವಾಗಿಯೂ ಒಂದು ಪ್ರಜಾಸತ್ತಾತ್ಮಕ ಪ್ರಕ್ರಿಯೆಯಂತೆ, ರಾಜಕೀಯದಲ್ಲಿದ್ದಂತೆ ಇಲ್ಲಿನ ವ್ಯವಸ್ಥೆಯನ್ನು ಕೂಡ ಅಗೌರವಿಸುವವರು ಇದ್ದಾರೆ. ಇಬ್ಬರು ಸಮಾನ ಬುದ್ದಿವಂತರಿಂದ ಒಂದು ಉತ್ತಮ ಚಿತ್ರ ಮೂಡಿಬರಲು ಸಾಧ್ಯ.
ಪ್ರ: ಅಂದರೆ ಬೇರೆಯವರು ನಿರ್ದೇಶಿಸುವ ಚಿತ್ರಗಳಲ್ಲಿ ನಿಮ್ಮನ್ನು ನೋಡಬಹುದು ಅಥವಾ ಸಾಧ್ಯವಿಲ್ಲ ಎಂಬುದು ನಿಮ್ಮ ಮಾತಿನ ಅರ್ಥವೇ?
ಉ: 2015ರಲ್ಲಿ ಬಂದ ತೂಂಗವನಂನ್ನು ಬೇರೆಯವರು ನಿರ್ದೇಶಿಸಿದ್ದು. ನಾನು ಸೆಟ್ ಗೆ ಹೋಗಿ ಇಂದು ಯಾವ ಸೀನ್ ನ್ನು(ದೃಶ್ಯ) ಮಾಡುತ್ತೇವೆ ಎಂದು ಕೇಳುತ್ತೇವೆ. ತೂಂಗವನಂ ಚಿತ್ರದ ನಿರ್ದೇಶಕರು ನನ್ನ ಕಾರ್ಯಕಾರಿ ನಿರ್ಮಾಪಕರು ಈ ಚಿತ್ರಕ್ಕೆ. 1987ರಲ್ಲಿ ತೆರೆಕಂಡ ಪುಷ್ಪಕ ಚಿತ್ರಮ ಮತ್ತು ಇನ್ನೂ ಅನೇಕ ಚಿತ್ರಗಳಿಗೆ ನಾನು ಕಾರ್ಯಕಾರಿ ನಿರ್ಮಾಪಕ ಆಗಿದ್ದೆ. ಹೀಗೆ ಕೆಲಸಗಳನ್ನು ಅದಲುಬದಲು ಮಾಡಿಕೊಳ್ಳುವುದು ಹಾಲಿವುಡ್ ಸಿನಿಮಾಗಳಲ್ಲಿವೆ.
ಪ್ರ: ಬಹುಶಃ ನೀವೊಬ್ಬರೇ ಈ ಜಗತ್ತಿನಲ್ಲಿ ಬಾಲ ನಟನಾಗಿ ನಟಿಸಲು ಆರಂಭಿಸಿ ಇಂದಿಗೂ ಬೇಡಿಕೆಯಲ್ಲಿದ್ದೀರಿ. ನಿಮ್ಮಂತೆ ಬೇರೆ ಯಾರಾದರೂ ಇದ್ದಾರೆಯೇ?
ಉ: ಚಾರ್ಲಿ ಚಾಪ್ಲಿನ್ ಮತ್ತು ಈಗ ಲಿಯನಾರ್ಡೊ ಡಿ ಕ್ಯಾಪ್ರಿಕೊ. ಬೇರೆ ಯಾರಾದರೂ ಅವನನ್ನು ಕೆಳಗಿಳಿಸುವವರೆಗೆ 60 ವರ್ಷವಾದರೂ ಕೂಡ ಅವನೇ ಹೀರೊ ಆಗಿರುತ್ತಾನೆ. ನನ್ನ ಮಗಳು ಶೃತಿ ಮೂರು ವರ್ಷದವಳಿದ್ದಾಗ ಹಾಡು ಹಾಡಿದ್ದಳು ನನ್ನಷ್ಟು ವಯಸ್ಸು ದಾಟಿದ ಮೇಲೆಯೂ ಅಭಿನಯಿಸುತ್ತಿರುತ್ತಾಳೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com