ಮಲ್ಟಿಪ್ಲೆಕ್ಸ್ ಗಳಲ್ಲಿ 120 ರೂ ಗರಿಷ್ಟ ಟಿಕೆಟ್ ದರ ನಿಗದಿಪಡಿಸುವುದಕ್ಕೆ ಸರ್ಕಾರಕ್ಕೆ ಸಮಿತಿ ಸಲಹೆ

ಮಲ್ಟಿಪ್ಲೆಕ್ಸ್ ಗಳಲ್ಲಿ ಸಿನೆಮಾ ಟಿಕೆಟ್ ದರ 120 ರೂ ಹೆಚ್ಚಾಗದಂತೆ ನಿರ್ಬಂಧ ಹೇರಬೇಕು ಎಂದು ರಾಜೇದ್ರ ಸಿಂಗ್ ಬಾಬು ಅಧ್ಯಕ್ಷತೆಯ ಕರ್ನಾಟಕ ಚಲನಚಿತ್ರ ಅಕಾಡೆಮಿ ಸರ್ಕಾರಕ್ಕೆ ಸಲಹೆ ನೀಡಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ಮಲ್ಟಿಪ್ಲೆಕ್ಸ್ ಗಳಲ್ಲಿ ಸಿನೆಮಾ ಟಿಕೆಟ್ ದರ 120 ರೂ ಹೆಚ್ಚಾಗದಂತೆ ನಿರ್ಬಂಧ ಹೇರಬೇಕು ಎಂದು ರಾಜೇದ್ರ ಸಿಂಗ್ ಬಾಬು ಅಧ್ಯಕ್ಷತೆಯ ಕರ್ನಾಟಕ ಚಲನಚಿತ್ರ ಅಕಾಡೆಮಿ ಸರ್ಕಾರಕ್ಕೆ ಸಲಹೆ ನೀಡಿದೆ. ರಾಜ್ಯದ ಪ್ರಾಯೋಗಿಕ ಚಲನಚಿತ್ರ ಉದ್ಯಮ ನೀತಿಯ ಭಾಗವಾಗಿ ಈ ಸಲಹೆ ನೀಡಲಾಗಿದೆ. 
ಹಾಗೆಯೇ ಪ್ರೈಮ್ ಸಮಯದಲ್ಲಿ ಎರಡು ಕನ್ನಡ ಸಿನೆಮಾಗಳನ್ನು ಕಡ್ಡಾಯವಾಗಿ ಪ್ರದರ್ಶಿಸಲು ಆದೇಶ ನೀಡಬೇಕೆಂದು ಕೂಡ ಶಿಫಾರಸ್ಸು ಮಾಡಲಾಗಿದೆ. ಹಾಗೆಯೇ ಜನತಾ ಚಿತ್ರಮಂದಿರಗಳಿಗೂ ಶಿಪಾರಸ್ಸು ಮಾಡಿದ್ದು, ಕನ್ನಡ ಸಿನೆಮಾಗಳನ್ನಷ್ಟೇ ಪ್ರದರ್ಶಿಸುವ ಚಿತ್ರಮಂದಿರಗಳಿಗೆ 50 ಲಕ್ಷ ರೂ ಅನುದಾನ ಹಾಗು ಹಳೆಯ ಚಿತ್ರಮಂದಿರಗಳ ಜಿರ್ಣೋದ್ಧಾರಕ್ಕೆ 25 ಲಕ್ಷ ಅನುದಾನ ನೀಡಲು ಸಲಹೆ ನೀಡಲಾಗಿದೆ. ಜನ ಚಿತ್ರಮಂದಿರಗಳನ್ನು, ಮಿನಿಪ್ಲೆಕ್ಸ್ ಗಳನ್ನು ಮತ್ತು ಮಲ್ಟಿಪ್ಲೆಕ್ಸ್ ಗಳನ್ನು ಪ್ರಾರಂಭಿಸಲು ಪರವಾನಗಿ ನೀಡಲು ಪ್ರಕ್ರಿಯೆಗಳನ್ನು ಸರಳಗೊಳಿಸಬೇಕು ಎಂದು ಕೂಡ ಸಮಿತಿ ತಿಳಿಸಿದೆ. 
ಕನ್ನಡೇತರ ಸಿನೆಮಾಗಳಿಗೆ ಪ್ರದರ್ಶನ ತೆರಿಗೆ ಹೆಚ್ಚಿಸಿ, ಅದರಿಂದ ಬಂದ ಲಾಭವನ್ನು ಕನ್ನಡ ಚಿತ್ರರಂಗದ ಅಭಿವೃದ್ಧಿಗಾಗಿ ಬಳಸಬೇಕು ಎಂದು ಕೂಡ ಸಲಹೆ ನೀಡಲಾಗಿದ್ದು, ಕನ್ನಡ ಸಿನೆಮಾಗಳನ್ನು ನಕಲು ಮಾಡುವವವರಿಗೆ ಗುಂಡಾ ಕಾಯ್ದೆ ಅನ್ವಯಯಾಗುವಂತೆ ಈಗಿನ ಕಾಯ್ದೆಯನ್ನು ಬಲಪಡಿಸಬೇಕೆಂದು ಕೂಡ ಸಲಹೆ ನೀಡಲಾಗಿದೆ. 
ಎಲ್ಲ ಚಿತ್ರಮಂದಿರಗಳಲ್ಲೂ ಅಂತರ್ಜಾಲ ಟಿಕೆಟ್ ಕಾಯ್ದಿಸರಿಸುವ ಸೌಲಭ್ಯ, ಪ್ರಶಸ್ತಿ ವಿಜೇತ ಸಿನೆಮಾಗಳ ಪ್ರಶಸ್ತಿ ಹಣ ಹೆಚ್ಚಳ, ಕೊಡವ, ತುಳು, ಬ್ಯಾರಿ, ಬಂಜಾರ ಮತ್ತು ಕೊಂಕಣಿ ಭಾಷೆಗಳ ಸಿನೆಮಾಗಳಿಗೆ ಕೂಡ ಪ್ರಶಸ್ತಿ ನೀಡುವ ಸಲಹೆಗಳನ್ನು ಕೂಡ ಪಟ್ಟಿ ಮಾಡಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com